ಗುವಾಹಟಿ: ಕೊನ್ಸಮ್ ಫಲ್ಗುಣಿ ಸಿಂಗ್ ಗಳಿಸಿದ ಏಕೈಕ ಗೋಲಿನ ನೆರವಿನಿಂದ ನಾರ್ತ್ ಈಸ್ಟ್ ಯುನೈಟೆಡ್ ಎಫ್‌ಸಿ ತಂಡವು 132ನೇ ಡುರಾಂಡ್ ಕಪ್ ಫುಟ್‌ಬಾಲ್ ಟೂರ್ನಿಯ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಇಂಡಿಯನ್ ಆರ್ಮಿ ಫುಟ್‌ಬಾಲ್ ತಂಡವನ್ನು ಮಣಿಸಿ, ಸೆಮಿಫೈನಲ್ ಪ್ರವೇಶ ಪಡೆಯಿತು.
ಇಲ್ಲಿನ ಇಂದಿರಾ ಗಾಂಧಿ ಅಥ್ಲೆಟಿಕ್ ಕ್ರೀಡಾಂಗಣದಲ್ಲಿ ಗುರುವಾರ ನಡೆದ ಮೊದಲ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ನಾರ್ತ್ ಈಸ್ಟ್ ತಂಡವು ಒಂದು ಗೋಲಿನ ಅಂತರದಿಂದ ಜಯ ಸಾಧಿಸಿತು.
ಪಂದ್ಯದ ಮೊದಲಾರ್ಧದಲ್ಲಿ ಉಭಯ ತಂಡಗಳೂ ತುರುಸಿನ ಪೈಪೋಟಿ ನಡೆಸಿದವು. ಆದರೆ, ಯಾವುದೇ ತಂಡದ ಆಟಗಾರರಿಗೂ ಚೆಂಡನ್ನು ಗುರಿ ಸೇರಿಸಲು ಸಾಧ್ಯವಾಗಲಿಲ್ಲ. ದ್ವಿತೀಯಾರ್ಧದಲ್ಲಿ ಕೊನ್ಸಮ್ ಫಲ್ಗುಣಿ ಸಿಂಗ್ (51ನೇ) ಗಳಿಸಿದ ಗೋಲಿನ ನೆರವಿನಿಂದ ನಾರ್ತ್ ಈಸ್ಟ್ ತಂಡವು ಮುನ್ನಡೆ ಸಾಧಿಸಿತು. ಆ ಮುನ್ನಡೆಯನ್ನು ಕೊನೆಯವರೆಗೂ ಉಳಿಸುವಲ್ಲಿ ತಂಡದ ಆಟಗಾರರು ಯಶಸ್ವಿಯಾದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.