ಬೆಂಗಳೂರು: ರಚನಾ ಮತ್ತು ಆರುಷಿ ಅವರ ಅಮೋಘ ಆಟದ ಬಲದಿಂದ ಪಿಂಕ್ ಪ್ಯಾಂಥರ್ಸ್ ಎಫ್‌ಸಿ ಮತ್ತು ಮಾಡರ್ನ್ ಗರ್ಲ್ಸ್ ಎಫ್‌ಸಿ ತಂಡಗಳು ಸ್ಪೋರ್ಟಿಂಗ್ ಪ್ಲಾನೆಟ್ ಟ್ರೋಫಿಗಾಗಿರುವರಾಜ್ಯ ಫುಟ್‌ಬಾಲ್ ಸಂಸ್ಥೆಯ ‘ಎ’ ಡಿವಿಷನ್ ಮಹಿಳಾ ಲೀಗ್‌ನಲ್ಲಿ ಭಾನುವಾರ ಭರ್ಜರಿ ಜಯ ಗಳಿಸಿದವು.
ಗುಂಪು ಒಂದರ ಪಂದ್ಯದಲ್ಲಿ ಪಿಂಕ್ ಪ್ಯಾಂಥರ್ಸ್ ಎಫ್‌ಸಿ 2–0ಯಿಂದ ಪಯನಿಯರ್ ವಿಮೆನ್ಸ್ ಎಫ್‌ಸಿಯನ್ನು ಮಣಿಸಿತು. ರಚನಾ ಅವರು 26 ಮತ್ತು 62ನೇ ನಿಮಿಷಗಳಲ್ಲಿ ಚೆಂಡನ್ನು ಗುರಿಮುಟ್ಟಿಸಿದರು. ಸಾಯಿ ಸ್ಪೋರ್ಟ್ಸ್ ಅಕಾಡೆಮಿ ಎದುರಿನ ಪಂದ್ಯದಲ್ಲಿ ಮಾಡರ್ನ್ ಗರ್ಲ್ಸ್ 4–0ಯಿಂದ ಗೆಲುವು ದಾಖಲಿಸಿತು. ರಿವ್ಕಾ ಏಳನೇ ನಿಮಿಷದಲ್ಲಿ, ಟ್ರಿಯಾ 18ನೇ ನಿಮಿಷದಲ್ಲಿ ಮತ್ತು ಆರುಷಿ 20, 22ನೇ ನಿಮಿಷಗಳಲ್ಲಿ ಗೋಲು ಗಳಿಸಿದರು.
ಸೋಮವಾರ ಮಧ್ಯಾಹ್ನ 2.30ಕ್ಕೆ ನಡೆಯಲಿರುವ ಪಂದ್ಯದಲ್ಲಿ ಪಾಸ್ ಎಫ್‌ಸಿ ಮತ್ತು ಜಿಆರ್‌ಕೆ ಗರ್ಲ್ಸ್ ಎಫ್‌ಸಿ, ಸಂಜೆ 4ಕ್ಕೆ ರೂಟ್ಸ್ ಫುಟ್‌ಬಾಲ್ ಸ್ಕೂಲ್ ಮತ್ತು ಯುನೈಟೆಡ್ ಎಫ್‌ಸಿ ಕೊಡಗು ತಂಡಗಳು ಸೆಣಸಲಿವೆ.
ರೂಟ್ಸ್, ಮೈಸೂರು ತಂಡಗಳಿಗೆ ಜಯ
ಎಫ್‌ಎಸ್‌ವಿ ಅರೆನಾ ಮತ್ತು ಕೆಎಸ್‌ಎಫ್‌ಎ ಆಶ್ರಯದಲ್ಲಿ ಡ್ರೀಮ್ ಟೀಮ್ ಸ್ಪೋರ್ಟ್ಸ್ ಆಯೋಜಿಸಿರುವ ಬೆಂಗಳೂರು ಪ್ರೊ ಫುಟ್‌ಬಾಲ್ ಲೀಗ್‌ನ ಪಂದ್ಯಗಳಲ್ಲಿ ರೂಟ್ಸ್ ಫುಟ್‌ಬಾಲ್ ಸ್ಕೂಲ್ ಮತ್ತು ಮೈಸೂರು ವಿಜಯನಗರ ತಂಡಗಳು ಭರ್ಜರಿ ಜಯ ಸಾಧಿಸಿದವು.
‘ಬಿ’ ಗುಂಪಿನ ಪಂದ್ಯದಲ್ಲಿ ಮೈಸೂರು ವಿಜಯನಗರ ಎಫ್‌ಸಿ 7–1ರಲ್ಲಿ ಬೊಯ್ಕಾ ಅಕಾಡೆಮಿಯನ್ನು ಸೋಲಿಸಿತು. ಮೈಸೂರು ತಂಡದ ಪರ ಶರಣ್ ಹ್ಯಾಟ್ರಿಕ್ (29, 30, 46ನೇ ನಿಮಿಷ) ಗಳಿಸಿದರು. ಅಭಿಷೇಕ್ (32, 34ನೇ ನಿ) ಹಾಗೂ ಸುಮುಖ್ (51, 60ನೇ ನಿ) ಕೂಡ ಮಿಂಚಿದರು. ಬೊಯ್ಕಾ ತಂಡದ ಪರ ವಿಘ್ನೇಶ್ (4ನೇ ನಿ) ಗೋಲು ಗಳಿಸಿದರು.
‘ಸಿ’ ಗುಂಪಿನ ಹಣಾಹಣಿಯಲ್ಲಿ ರೂಟ್ಸ್ 5–2ರಲ್ಲಿ ಎಫ್‌ಸಿ ಹೈದ್ರಾವನ್ನು ಮಣಿಸಿತು. ರೂಟ್ಸ್‌ಗಾಗಿ ವಿಶ್ವಲ್ (8, 31ನೇ ನಿ), ಶಾಶ್ವತ್ (39, 55ನೇ ನಿ) ಮತ್ತು ಯೊಹಾನ್ (56ನೇ ನಿ) ಚೆಂಡನ್ನು ಗುರಿ ಮುಟ್ಟಿಸಿದರೆ ಹೈದ್ರಾ ತಂಡಕ್ಕಾಗಿ ರೇವ್ ಪಿಂಟೊ (25, 44ನೇ ನಿ) ಗೋಲು ಗಳಿಸಿದರು.
‘ಡಿ’ ಗುಂಪಿನ ಪಂದ್ಯದಲ್ಲಿ ಜೇಮ್ಸ್ (32ನೇ ನಿ) ಗಳಿಸಿದ ಏಕೈಕ ಗೋಲಿನ ನೆರವಿನಿಂದ ಬ್ಲ್ಯಾಕ್ ಪ್ಯಾಂಥರ್ಸ್ ಎಫ್‌ಸಿ 1–0ಯಿಂದ ಮಹೇಶ್ ರಾಜ್ ಯುನೈಟೆಡ್ ಎಫ್‌ಸಿ ವಿರುದ್ಧ ಜಯ ಗಳಿಸಿತು. ‘ಎ’ ಗುಂಪಿನಲ್ಲಿ ರೊನಾಲ್ಡೊ ಎಫ್‌ಸಿ, ಬ್ಲ್ಯಾಕ್ ಮೂನ್ ಎಫ್‌ಸಿಗೆ ವಾಕ್ ಓವರ್ ನೀಡಿತು. ಬ್ಲ್ಯಾಕ್ ಮೂನ್‌ಗೆ ಮೂರು ಪಾಯಿಂಟ್ಸ್ ಲಭಿಸಿದವು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.