ಬುಧವಾರ, ನವೆಂಬರ್ 20, 2019
20 °C
ಐಎಸ್‌ಎಲ್‌: ಚೆನ್ನೈಯಿನ್‌ನಿಂದ ಬಂದ ರಾಫೆಲ್, ಪುಣೆಯಲ್ಲಿದ್ದ ಆಶಿಕ್ ಮನದಾಳ

ಬಿಎಫ್‌ಸಿ ಸೇರುವ ಕನಸು ನನಸು

Published:
Updated:
Prajavani

ಬೆಂಗಳೂರು: ಬೇರೆ ತಂಡದಲ್ಲಿ ಆಡುತ್ತಿದ್ದಾಗಲೂ ಬೆಂಗಳೂರು ಫುಟ್‌ಬಾಲ್ ಕ್ಲಬ್‌ನಲ್ಲಿ (ಬಿಎಫ್‌ಸಿ) ಆಡಬೇಕೆಂಬ ಬಯಕೆ ಇತ್ತು. ಅದು ಈಡೇರಿದ್ದರಿಂದ ಈಗ ಖುಷಿಯಾಗಿದೆ...

ಇಂಡಿಯನ್ ಸೂಪರ್ ಲೀಗ್‌ (ಐಎಸ್‌ಎಲ್‌) ಟೂರ್ನಿಯ ಆರನೇ ಆವೃತ್ತಿಗೆ ಸಜ್ಜಾಗಿರುವ ಬಿಎಫ್‌ಸಿಗೆ ಬಲ ತುಂಬಲು ಬಂದಿರುವ ಆಶಿಕ್‌ ಕುರುಣಿಯನ್ ಮತ್ತು ರಾಫೆಲ್ ಆಗಸ್ಟೊ ಆಡಿದ ಮಾತು ಇದು. ಬಿಎಫ್‌ಸಿಗೆ ಮರಳಿರುವ ಯೂಗೆನ್ಸೆನ್ ಲಿಂಗ್ಡೊ ಕೂಡ ಸಂತಸ ವ್ಯಕ್ತಪಡಿಸಿದರು.

ಬೆಂಗಳೂರು ಫುಟ್‌ಬಾಲ್ ಕ್ಲಬ್‌ನಲ್ಲಿ ಶುಕ್ರವಾರ ನಡೆದ ಮಾಧ್ಯಮ ಸಂವಾದದಲ್ಲಿ ಮಾತನಾಡಿದ ಈ ಮೂವರು ಪ್ರಶಸ್ತಿ ಉಳಿಸಿಕೊಳ್ಳಲು ಬಿಎಫ್‌ಸಿಗೆ ನೆರವಾಗುವ ಭರವಸೆ ವ್ಯಕ್ತಪಡಿಸಿದರು.

ಫಾರ್ವರ್ಡ್ ಆಟಗಾರ ಆಶಿಕ್ ಕುರುಣಿಯನ್‌ ರಾಷ್ಟ್ರೀಯ ತಂಡದಲ್ಲಿ ಆಡಿದ ಅನುಭವಿ. ಪುಣೆ ಎಫ್‌ಸಿಯಲ್ಲಿದ್ದ ಅವರು ಈ ಬಾರಿ ಬಿಎಫ್‌ಸಿ ಜೊತೆ ಒಪ್ಪಂದ ಮಾಡಿಕೊಂಡಿದ್ದಾರೆ. ‘ಸ್ಪೇನ್‌ನ ಕೋಚ್ ಚಾರ್ಲ್ಸ್‌ ಕ್ವದ್ರತ್ ಅವರ ಬಳಿ ಒಳ್ಳೆಯ ತರಬೇತಿ ಲಭಿಸುತ್ತಿದೆ. ಬಿಎಫ್‌ಸಿಯ ವಾತಾವರಣಕ್ಕೆ ಹೊಂದಿಕೊಳ್ಳಲು ಕಷ್ಟವೇನೂ ಆಗಲಿಲ್ಲ’ ಎಂದು ಅವರು ಹೇಳಿದರು.

ಮಿಡ್‌ಫೀಲ್ಡರ್ ರಾಫೆಲ್ ‘ಬಿಎಫ್‌ಸಿ ಬಗ್ಗೆ ಸದಾ ಆಸಕ್ತನಾಗಿದ್ದೆ. ಈಗ ಈ ತಂಡದ ಸದಸ್ಯನಾಗಿದ್ದೇನೆ’ ಎಂದರು. 2014ರಲ್ಲಿ ಬಿಎಫ್‌ಸಿ ಸೇರಿದ್ದ ಮಿಡ್‌ಫೀಲ್ಡರ್ ಯೂಗೆನ್ಸನ್ ಲಿಂಗ್ಡೊ ನಂತರ ಪುಣೆ ಸಿಟಿ ತಂಡದೊಂದಿಗೆ ಒಪ್ಪಂದ ಮಾಡಿಕೊಂಡಿದ್ದರು. ಭಾರತ ತಂಡವನ್ನು ಪ್ರತಿನಿಧಿಸಿರುವ ಅವರು ‘ಬದಲಾವಣೆಗೆ ಒಗ್ಗಿಕೊಂಡಿದ್ದೇನೆ. ಮತ್ತೊಮ್ಮೆ ಬಿಎಫ್‌ಸಿಯಲ್ಲಿ ಮಿಂಚುವ ಭರವಸೆ ಇದೆ’ ಎಂದರು.

ಪ್ರತಿಕ್ರಿಯಿಸಿ (+)