ಯಾಂಗೂನ್: ಪ್ರತೀಕಾ ಬರ್ಮನ್ ಗಳಿಸಿದ ಅವಳಿ ಗೋಲುಗಳ ನೆರವಿನಿಂದ ಭಾರತ ತಂಡ ಇಲ್ಲಿನ ತುವುನ್ನಾ ಕ್ರೀಡಾಂಗಣದಲ್ಲಿ ಗುರುವಾರ ನಡೆದ 17 ವರ್ಷದೊಳಗಿನ ಮಹಿಳೆಯರ ಅಂತರರಾಷ್ಟ್ರೀಯ ಸೌಹಾರ್ದ ಫುಟ್ಬಾಲ್ ಪಂದ್ಯದಲ್ಲಿ ಆತಿಥೇಯ ಮ್ಯಾನ್ಮಾರ್ ತಂಡವನ್ನು 2–0 ಗೋಲುಗಳಿಂದ ಸೋಲಿಸಿತು.

ಎಎಫ್ಪಿ 17 ವರ್ಷದೊಳಗಿನವರ ಮಹಿಳಾ ಏಷ್ಯನ್ ಕಪ್ ಟೂರ್ನಿಯ ಸಿದ್ಧತೆಯ ಭಾಗವಾಗಿ ಎರಡು ಸೌಹಾರ್ದ ಪಂದ್ಯಗಳನ್ನು ಆಡಲಾಗುತ್ತಿದೆ. ಗುರುವಾರ ಮೊದಲ ಪಂದ್ಯ ನಡೆಯಿತು.

17 ವರ್ಷದೊಳಗಿನವರ ಏಷ್ಯನ್ ಕಪ್ ಚೀನಾದ ಸುಝೌನಲ್ಲಿ ಮೇ 1 ರಿಂದ 17ರವರೆಗೆ ನಡೆಯಲಿದೆ. ಭಾರತದ ಜೊತೆಗೆ ಮ್ಯಾನ್ಮಾರ್ ಸಹ ಈ ಟೂರ್ನಿಗೆ ಅರ್ಹತೆ ಪಡೆದಿದೆ.

ಎರಡನೇ ಸೌಹಾರ್ದ ಪಂದ್ಯ ಶನಿವಾರ ನಡೆಯಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.