ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಾಪೆ ಮೇಲೆ ಮೂರು ಪಂದ್ಯ ನಿಷೇಧ

Last Updated 6 ಸೆಪ್ಟೆಂಬರ್ 2018, 19:30 IST
ಅಕ್ಷರ ಗಾತ್ರ

ಪ್ಯಾರಿಸ್‌: ಒರಟು ಆಟ ಆಡಿದ್ದಕ್ಕಾಗಿ ಪ್ಯಾರಿಸ್‌ ಸೇಂಟ್‌ ಜರ್ಮನ್‌ ತಂಡದ ಕೈಲಿಯನ್‌ ಬಾಪೆ ಮೇಲೆ ಮೂರು ಪಂದ್ಯಗಳ ನಿಷೇಧ ಹೇರಲಾಗಿದೆ.

ಹೋದ ಶನಿವಾರ ನಡೆದಿದ್ದ ಫ್ರೆಂಚ್‌ ಲೀಗ್‌ ಪಂದ್ಯದ ವೇಳೆ ಬಾಪೆ ಅವರು ನಿಮೆಸ್‌ ತಂಡದ ತೆಜಿ ಸ್ಯಾವನಿಯೆರ್‌ ಅವರನ್ನು ಉದ್ದೇಶಪೂರ್ವಕವಾಗಿಯೇ ತಳ್ಳಿ ನೆಲಕ್ಕೆ ಬೀಳಿಸಿದ್ದರು. ಹೀಗಾಗಿ ಅವರಿಗೆ ಪಂದ್ಯದ ರೆಫರಿ ಕೆಂಪು ಕಾರ್ಡ್‌ ತೋರಿಸಿ ಅಂಗಳದಿಂದ ಆಚೆ ಕಳುಹಿಸಿದ್ದರು.

ನಿಷೇಧದ ಕಾರಣ 19 ವರ್ಷ ವಯಸ್ಸಿನ ಬಾಪೆ, ಸೇಂಟ್‌ ಎಟಿನ್ನೆ (ಸೆಪ್ಟೆಂಬರ್‌ 14), ರೆನ್ನೆಸ್‌ (ಸೆ.23) ಮತ್ತು ರೆಯಿಮ್ಸ್‌ (ಸೆ.26) ವಿರುದ್ಧದ ಪಂದ್ಯಗಳಲ್ಲಿ ಆಡುವಂತಿಲ್ಲ.

ಈ ಬಾರಿಯ ಫಿಫಾ ವಿಶ್ವಕಪ್‌ನಲ್ಲಿ ಫ್ರಾನ್ಸ್‌ ತಂಡ ಪ್ರಶಸ್ತಿ ಗೆಲ್ಲುವಲ್ಲಿ ಬಾಪೆ ಪಾತ್ರ ನಿರ್ಣಾಯಕವಾಗಿತ್ತು. ನಾಲ್ಕು ಗೋಲುಗಳನ್ನು ದಾಖಲಿಸಿದ್ದ ಅವರು ಟೂರ್ನಿಯ ಉದಯೋನ್ಮುಖ ಆಟಗಾರ ಪ್ರಶಸ್ತಿಗೆ ಭಾಜನರಾಗಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT