ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಎಫ್‌ಸಿಗೆ ನಾರ್ತ್ ಈಸ್ಟ್‌ ಯುನೈಟೆಡ್‌ ಸವಾಲು

ಹೊಸ ಕೋಚ್ ಮಾರ್ಕೊ ಪೆಜೊವೊಲಿ ನಾಯಕ ಸುನಿಲ್ ಚೆಟ್ರಿ ಮೇಲೆ ಕಣ್ಣು
Last Updated 19 ನವೆಂಬರ್ 2021, 15:05 IST
ಅಕ್ಷರ ಗಾತ್ರ

ಬ್ಯಾಂಬೊಲಿಮ್‌: ಇಂಡಿಯನ್ ಸೂಪರ್ ಲೀಗ್ (ಐಎಸ್‌ಎಲ್‌) ಫುಟ್‌ಬಾಲ್ ಟೂರ್ನಿಯಲ್ಲಿ ಹೊಸ ಕನಸಿನೊಂದಿಗೆ ಬೆಂಗಳೂರು ಎಫ್‌ಸಿ (ಬಿಎಫ್‌ಸಿ) ತಂಡ ಶನಿವಾರ ಕಣಕ್ಕೆ ಇಳಿಯಲಿದೆ. ಎಂಟನೇ ಆವೃತ್ತಿಯ ಮೊದಲ ಪಂದ್ಯದಲ್ಲಿ ತಂಡ ನಾರ್ತ್ ಈಸ್ಟ್ ಯುನೈಟೆಡ್ ವಿರುದ್ಧ ಸೆಣಸಲಿದೆ.

ಮಾಜಿ ಚಾಂಪಿಯನ್ ಬಿಎಫ್‌ಸಿ ಹಿಂದಿನ ಎರಡು ಆವೃತ್ತಿಗಳಲ್ಲಿ ನಿರೀಕ್ಷೆಗೆ ತಕ್ಕಂತೆ ಆಡಲಿಲ್ಲ. 2017ರಿಂದ ಟೂರ್ನಿಯಲ್ಲಿ ಆಡುತ್ತಿರುವ ತಂಡ ಒಮ್ಮೆಯೂ ಕಳೆದ ಬಾರಿ ಮೊದಲ ಸಲ ಸೆಮಿಫೈನಲ್ ಪ್ರವೇಶಿಸದೇ ವಾಪಸ್ ಆಗಿತ್ತು.

ಕಳೆದ ಆವೃತ್ತಿ ಮುಗಿದ ಕೂಡಲೇ ಮಾರ್ಕೊ ಪೆಜೊವೊಲಿ ಅವರನ್ನು ಕೋಚ್ ಆಗಿ ನೇಮಕ ಮಾಡಿಕೊಂಡಿರುವ ತಂಡ ಅಂದಿನಿಂದಲೇ ರಣತಂತ್ರಗಳನ್ನು ಹೂಡುತ್ತ ಬಂದಿದೆ. 52 ವರ್ಷದ ಮಾರ್ಕೊ ಅವರ ಮಾರ್ಗದರ್ಶನದಲ್ಲಿ ತಂಡ ಯಶಸ್ಸು ಕಾಣುವುದೇ ಎಂಬ ಕುತೂಹಲ ಈಗ ಫುಟ್‌ಬಾಲ್ ಪ್ರೇಮಿಗಳನ್ನು ಕಾಡುತ್ತಿದೆ.

ಪದಾರ್ಪಣೆ ಮಾಡಿದ ವರ್ಷ ಫೈನಲ್ ಪ್ರವೇಶಿಸಿದ್ದ ಬಿಎಫ್‌ಸಿ ತಂಡ ರನ್ನರ್ ಅಪ್ ಆಗಿತ್ತು. ಮುಂದಿನ ವರ್ಷ ಚಾಂಪಿಯನ್ ಆಗಿತ್ತು. ಅದರ ನಂತರದ ಆವೃತ್ತಿಯಲ್ಲಿ ನಾಲ್ಕರ ಘಟ್ಟ ಪ್ರವೇಶಿಸಿ ’ಹ್ಯಾಟ್ರಿಕ್ ಸೆಮಿಫೈನಲ್‘ ಸಾಧನೆ ಮಾಡಿತ್ತು. ಈ ಬಾರಿ ನಾಯಕನಾಗಿ ಸುನಿಲ್ ಚೆಟ್ರಿ ಅವರನ್ನು ಮುಂದುವರಿಸಲಾಗಿದೆ. ತಂಡದ ಆಡಳಿತ ತಮ್ಮ ಮೇಲೆ ಇರಿಸಿರುವ ವಿಶ್ವಾಸಕ್ಕೆ ಅವರು ಯಾವ ರೀತಿಯಲ್ಲಿ ಕೃತಜ್ಞತೆ ಸಲ್ಲಿಸುತ್ತಾರೆ ಎಂಬುದನ್ನು ಕಾದುನೋಡಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT