ಶುಕ್ರವಾರ, ಆಗಸ್ಟ್ 19, 2022
27 °C

ಲೆವಾಂಡೋವ್ಸ್ಕಿ ಫಿಫಾ ವರ್ಷದ ಶ್ರೇಷ್ಠ ಆಟಗಾರ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಜಿನೇವಾ: ಖ್ಯಾತ ಆಟಗಾರರಾದ ಲಯೊನೆಲ್‌ ಮೆಸ್ಸಿ ಹಾಗೂ ಕ್ರಿಸ್ಚಿಯಾನೊ ರೊನಾಲ್ಡೊ ಅವರನ್ನು ಹಿಂದಿಕ್ಕಿದ ರಾಬರ್ಟ್ ಲೆವಾಂಡೋವ್ಸ್ಕಿ ವರ್ಷದ ‘ಶ್ರೇಷ್ಠ ಫುಟ್‌ಬಾಲ್ ಆಟಗಾರ‘ ಪ್ರಶಸ್ತಿಯನ್ನು ಗೆದ್ದುಕೊಂಡಿದ್ದಾರೆ. ಬಾಯರ್ನ್‌ ಮ್ಯೂನಿಕ್‌ ತಂಡದ ಸ್ಟ್ರೈಕರ್ ಲೆವಾಂಡೋವ್ಸ್ಕಿ ಅವರಿಗೆ ಇದು ವೃತ್ತಿ ಜೀವನದ ಪ್ರಮುಖ ಪ್ರಶಸ್ತಿಯಾಗಿದೆ.

ಪೋಲೆಂಡ್ ರಾಷ್ಟ್ರೀಯ ತಂಡದ ನಾಯಕ ಲೆವಾಂಡೋವ್ಸ್ಕಿ, ಈ ವರ್ಷ 55 ಗೋಲುಗಳನ್ನು ಬಾರಿಸಿದ್ದು ಬಾಯರ್ನ್‌ ಮ್ಯೂನಿಕ್ ತಂಡವು ಅಂತರರಾಷ್ಟ್ರೀಯ ಹಾಗೂ ದೇಶೀಯ ಟ್ರೋಫಿಗಳನ್ನು ಗೆಲ್ಲುವಲ್ಲಿ ಪ್ರಮುಖ ಕಾರಣರಾಗಿದ್ದಾರೆ.

ಈ ಪ್ರಶಸ್ತಿಗೆ ಆಯ್ಕೆಗಾಗಿ ರಾಷ್ಟ್ರೀಯ ತಂಡಗಳ ನಾಯಕರು, ಕೋಚ್‌ಗಳ ಜೂರಿಗಳು, ಆಯ್ದ ಪತ್ರಕರ್ತರು ಹಾಗೂ ಅಭಿಮಾನಿಗಳು ಮತ ಚಲಾಯಿಸಿದ್ದರು.

ಮ್ಯಾಂಚೆಸ್ಟರ್ ಸಿಟಿ ಹಾಗೂ ಇಂಗ್ಲೆಂಡ್ ತಂಡದ ಡಿಫೆಂಡರ್ ಲೂಸಿ ಬ್ರೋನ್ಸ್ ಶ್ರೇಷ್ಠ ಆಟಗಾರ್ತಿ ಪ್ರಶಸ್ತಿಯನ್ನು ಗೆದ್ದುಕೊಂಡರು.

ಪ್ರಶಸ್ತಿ ಪ್ರದಾನ ಸಮಾರಂಭವನ್ನು ವರ್ಚುವಲ್ ಆಗಿ ಆಯೋಜಿಸಿದ್ದರೂ, ಫಿಫಾ ಅಧ್ಯಕ್ಷ ಗಿಯಾನಿ ಇನ್ಫಾಂಟಿನೊ ಸ್ವತ: ಮ್ಯೂನಿಕ್‌ಗೆ ತೆರಳಿ ಪ್ರಶಸ್ತಿ ವಿತರಿಸಿದರು.

13 ವರ್ಷಗಳ ಕಾಲ ಮೆಸ್ಸಿ ಮತ್ತು ರೊನಾಲ್ಡೊ ಇಬ್ಬರೇ ಈ ಪ್ರಶಸ್ತಿ ಮೇಲೆ ಅಧಿಪತ್ಯ ಸಾಧಿಸಿದ್ದರು. 2018ರಲ್ಲಿ ಪ್ರಶಸ್ತಿ ಗೆದ್ದ ಕ್ರೊಯೇಷ್ಯಾ ಮತ್ತು ರಿಯಲ್ ಮ್ಯಾಡ್ರಿಡ್ ಮಿಡ್‌ಫೀಲ್ಡರ್ ಲೂಕಾ ಮಾಡ್ರಿಚ್‌ ಅವರ ಅಧಿಪತ್ಯಕ್ಕೆ ಅಂತ್ಯ ಹಾಡಿದ್ದರು. ಅವರ ಸಾಲಿಗೆ ಈಗ ಲೆವಾಂಡೋವ್ಸ್ಕಿ ಸೇರಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು