ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೊನಾಲ್ಡೊ 400

Last Updated 21 ಅಕ್ಟೋಬರ್ 2018, 19:02 IST
ಅಕ್ಷರ ಗಾತ್ರ

ಮಿಲಾನ್‌: ಯುವೆಂಟಸ್‌ ತಂಡದ ಕ್ರಿಸ್ಟಿಯಾನೊ ರೊನಾಲ್ಡೊ, ಶನಿವಾರ ಫುಟ್‌ಬಾಲ್‌ ಲೋಕದಲ್ಲಿ ಹೊಸ ಮೈಲುಗಲ್ಲು ಸ್ಥಾಪಿಸಿದ್ದಾರೆ.

ಪೋರ್ಚುಗಲ್‌ನ ರೊನಾಲ್ಡೊ ಯೂರೋಪಿಯನ್‌ ಲೀಗ್‌ನಲ್ಲಿ ಒಟ್ಟು 400 ಗೋಲು ಗಳಿಸಿ ಈ ಸಾಧನೆ ಮಾಡಿದ ಮೊದಲ ಆಟಗಾರ ಎಂಬ ಹಿರಿಮೆ ತಮ್ಮದಾಗಿಸಿಕೊಂಡಿದ್ದಾರೆ.

ಜೆನೊವಾ ವಿರುದ್ಧದ ಸೀರಿ ಎ ಲೀಗ್‌ನ ಪಂದ್ಯದಲ್ಲಿ ಒಂದು ಗೋಲು ಗಳಿಸಿ ಅವರು ಈ ಸಾಧನೆ ಮಾಡಿದ್ದಾರೆ.

ರಿಯಲ್‌ ಮ್ಯಾಡ್ರಿಡ್‌ ಪರ ಲಾ ಲಿಗಾ ಟೂರ್ನಿಯಲ್ಲಿ 311 ಗೋಲುಗಳನ್ನು ದಾಖಲಿಸಿದ್ದ ರೊನಾಲ್ಡೊ, ಮ್ಯಾಂಚೆಸ್ಟರ್‌ ಯುನೈಟೆಡ್‌ ಪರ ಇಂಗ್ಲಿಷ್‌ ಪ್ರೀಮಿಯರ್‌ ಲೀಗ್‌ನಲ್ಲಿ 84 ಗೋಲು ಬಾರಿಸಿದ್ದರು. ಸೀರಿ ಎ ಲೀಗ್‌ನಲ್ಲಿ ಅವರು ಯುವೆಂಟಸ್‌ ಪರ ಐದು ಗೋಲು ದಾಖಲಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT