ಗುರುವಾರ , ನವೆಂಬರ್ 14, 2019
19 °C

ರೊನಾಲ್ಡೊ ‘701’

Published:
Updated:
Prajavani

ಮಿಲಾನ್‌: ಪೋರ್ಚುಗಲ್‌ನ ಫುಟ್‌ಬಾಲ್‌ ತಾರೆ ಕ್ರಿಸ್ಟಿಯಾನೊ ರೊನಾಲ್ಡೊ, ಶನಿವಾರ ರಾತ್ರಿ ವೃತ್ತಿಬದುಕಿನಲ್ಲಿ 701 ಗೋಲುಗಳನ್ನು ಗಳಿಸಿದ ಸಾಧನೆ ಮಾಡಿದರು.

ಸೀರಿ ‘ಎ’ ಫುಟ್‌ಬಾಲ್‌ ಲೀಗ್‌ನ ಬೊಲೊಗ್ನಾ ಎದುರಿನ ಪಂದ್ಯದಲ್ಲಿ ಯುವೆಂಟಸ್‌ ಪರ ಕಣಕ್ಕಿಳಿದಿದ್ದ ಅವರು 19ನೇ ನಿಮಿಷದಲ್ಲಿ ಕಾಲ್ಚಳಕ ತೋರಿದರು.

ಈ ಹಣಾಹಣಿಯಲ್ಲಿ 2–1 ಗೋಲುಗಳಿಂದ ಗೆದ್ದ ಯುವೆಂಟಸ್‌ ಪಾಯಿಂಟ್ಸ್‌ ಪಟ್ಟಿಯಲ್ಲಿ ಅಗ್ರಸ್ಥಾನವನ್ನು ಇನ್ನಷ್ಟು ಭದ್ರಪಡಿಸಿಕೊಂಡಿತು.

ಪಂದ್ಯದ ಆರಂಭದಿಂದಲೇ ಆಕ್ರಮಣಕಾರಿ ಆಟಕ್ಕೆ ಅಣಿಯಾದ ಯುವೆಂಟಸ್‌ಗೆ 34 ವರ್ಷ ವಯಸ್ಸಿನ ರೊನಾಲ್ಡೊ ಮುನ್ನಡೆ ತಂದುಕೊಟ್ಟರು.

26ನೇ ನಿಮಿಷದಲ್ಲಿ ಬೊಲೊಗ್ನ ತಂಡದ ಡ್ಯಾನಿಲೊ ಅವರು ಗೋಲು ಬಾರಿಸಿ 1–1 ಸಮಬಲಕ್ಕೆ ಕಾರಣರಾದರು.

54ನೇ ನಿಮಿಷದಲ್ಲಿ ಚೆಂಡನ್ನು ಗುರಿ ಮುಟ್ಟಿಸಿದ ಮಿರಾಲೆಮ್‌ ಪಜಾನಿಕ್‌, ಯುವೆಂಟಸ್‌ ತಂಡದ ಸಂಭ್ರಮಕ್ಕೆ ಕಾರಣರಾದರು.

ಪ್ರತಿಕ್ರಿಯಿಸಿ (+)