ಮನಗೆದ್ದ ರೊನಾಲ್ಡೊ ಆಟ

ಗುರುವಾರ , ಏಪ್ರಿಲ್ 25, 2019
31 °C

ಮನಗೆದ್ದ ರೊನಾಲ್ಡೊ ಆಟ

Published:
Updated:
Prajavani

ಮಿಲಾನ್‌: ಜೊಹಾನ್‌ ಕ್ರುಯಿಫ್‌ ಅರೇನಾದಲ್ಲಿ ಬುಧವಾರ ರಾತ್ರಿ ‘ಡೈವಿಂಗ್‌ ಹೆಡರ್‌’ ಮೂಲಕ ಚೆಂಡನ್ನು ಗುರಿ ಮುಟ್ಟಿಸಿದ ಕ್ರಿಸ್ಟಿಯಾನೊ ರೊನಾಲ್ಡೊ, ಅಭಿಮಾನಿಗಳ ಪ್ರೀತಿಗೆ ಪಾತ್ರರಾದರು.

ಕ್ರಿಸ್ಟಿಯಾನೊ ಕಾಲ್ಚಳಕದಲ್ಲಿ ಅರಳಿದ ಗೋಲಿನ ನೆರವಿನಿಂದ ಯುವೆಂಟಸ್‌ ತಂಡ ಚಾಂಪಿಯನ್ಸ್‌ ಲೀಗ್‌ ಫುಟ್‌ಬಾಲ್‌ನ ಮೊದಲ ಲೆಗ್‌ನ ಕ್ವಾರ್ಟರ್‌ ಫೈನಲ್‌ನಲ್ಲಿ ಅಜಕ್ಸ್‌ ವಿರುದ್ಧ 1–1 ಗೋಲುಗಳಿಂದ ಡ್ರಾ ಮಾಡಿಕೊಂಡಿತು.

ತವರಿನ ಅಭಿಮಾನಿಗಳ ಎದುರು ಆಡಿದ ಅಜಕ್ಸ್‌ಗೆ ಯುವೆಂಟಸ್‌ ತಂಡ ಆರಂಭದಿಂದಲೇ ಪ್ರಬಲ ಪೈ‍ಪೋಟಿ ಒಡ್ಡಿತು. ಹೀಗಾಗಿ ಮೊದಲ 40 ನಿಮಿಷಗಳ ಆಟ ಗೋಲು ರಹಿತವಾಗಿತ್ತು. ನಂತರ ಯುವೆಂಟಸ್‌ ಇನ್ನಷ್ಟು ಆಕ್ರಮಣಕಾರಿಯಾಗಿ ಆಡಿತು. 45ನೇ ನಿಮಿಷದಲ್ಲಿ ಈ ತಂಡ ಖಾತೆ ತೆರೆಯಿತು. ಗಾಯದಿಂದ ಗುಣಮುಖರಾದ ನಂತರ ಆಡಿದ ಮೊದಲ ಪಂದ್ಯದಲ್ಲೇ ಕ್ರಿಸ್ಟಿಯಾನೊ ಮೋಡಿ ಮಾಡಿದರು.

ಸಹ ಆಟಗಾರ ನೀಡಿದ ಕ್ರಾಸ್‌ನಲ್ಲಿ ರೊನಾಲ್ಡೊ, ಚೆಂಡನ್ನು ಗುರಿ ಮುಟ್ಟಿಸಿದರು. ಎದುರಾಳಿ ಆವರಣದ ಎಡಭಾಗದಿಂದ ‘ಸ್ಟ್ರೈಟ್‌ ಲೇನ್’ನತ್ತ ಓಡಿ ಬಂದ ಅವರು ಮುಂದಕ್ಕೆ ಜಿಗಿದು ಚೆಂಡನ್ನು ತಲೆತಾಗಿಸಿ ಗುರಿ ಮುಟ್ಟಿಸಿದ ರೀತಿ ಮನಸೆಳೆಯಿತು.

ಚಾಂಪಿಯನ್ಸ್‌ ಲೀಗ್‌ನಲ್ಲಿ ರೊನಾಲ್ಡೊ ಗಳಿಸಿದ 125ನೇ ಗೋಲು ಇದಾಗಿದೆ. ಈ ಋತುವಿನಲ್ಲಿ ಅವರು ಬಾರಿಸಿದ 25ನೇ ಗೋಲು ಇದು. 

ಇದರ ಬೆನ್ನಲ್ಲೇ ಅಜಕ್ಸ್‌ ತಂಡ ಸಮಬಲದ ಗೋಲು ದಾಖಲಿಸಿತು. ಡೇವಿಡ್‌ ನೆರೆಸ್‌ ಚೆಂಡನ್ನು ಗುರಿ ಮುಟ್ಟಿಸಿ ಸಂಭ್ರಮಿಸಿದರು.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !