ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾತಲ್ಲ, ಚಿಂತನೆ ಮುಖ್ಯ

Last Updated 28 ಜನವರಿ 2018, 19:30 IST
ಅಕ್ಷರ ಗಾತ್ರ

ಬೆಂಗಳೂರಿನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಹಿರಿಯ ಕವಿ ಕೆ.ಎಸ್. ನಿಸಾರ್ ಅಹಮದ್, ‘ಲಂಕೇಶ್ ಅವರು ಕೆಟ್ಟ ಮೇಷ್ಟ್ರು ಆಗಿದ್ದರು, ಮಾತನಾಡಲು ತಡಬಡಾಯಿಸುತ್ತಿದ್ದರು’ ಎಂದು ಹೇಳಿರುವುದು ವರದಿಯಾಗಿದೆ. ಅದು ಅಪ್ಪಟ ಸುಳ್ಳು. ಬಡಬಡ ಮಾತಾಡುವುದೇ ಮಾತಿನ ಕಲೆಗಾರಿಕೆಯಲ್ಲ. ಮಾತಿನ ಹಿಂದಿನ ಚಿಂತನೆ ಬಹು ಮುಖ್ಯ.

ನಾವು ಕಲಿತವರು, ಮಾತಿನ ಮೂಲಕ ಮುಂದೆ ಕೂತವರನ್ನು ವಂಚಿಸುತ್ತಿದ್ದೇವೇನೊ ಎಂಬ ಒಳನೋಟದ ಗುಮಾನಿ ಲಂಕೇಶರನ್ನು ಸದಾ ಕಾಡುತ್ತಿತ್ತು. ನಾನು ಅವರ ವಿದ್ಯಾರ್ಥಿಯಾಗಿದ್ದವನು. ಅವರ ಮಾತಿನ ಅಂತರಂಗವನ್ನು ಅನುಭವಿಸಿದ್ದೇನೆ. ಓತಪ್ರೋತವಾಗಿ ಮಾತಾಡುವುದೇ ಮಾತುಗಾರಿಕೆಯ ಮರ್ಮವಲ್ಲ. ಅಲ್ಲಿ ಜೀವನ ಪ್ರೀತಿ ಇರಬೇಕಾಗುತ್ತದೆ. ಹಾಗೆಯೇ ನಾವು ಮಾತಿನಲ್ಲಿ ಕಳೆದುಹೋಗುತ್ತಿದ್ದೇವೆಯಾ? ಎಂಬ ವಿಷಾದ ಗುಣವನ್ನು ತುಂಬಿಕೊಂಡಿದ್ದವರು ಲಂಕೇಶ್‌.

ನಿಸಾರ್ ಅವರು ಲಂಕೇಶ್ ಅವರ ‘ನಾನು ಮೇಷ್ಟ್ರು ಆಗಿದ್ದೆ’ ಲೇಖನವನ್ನು ಓದಿಲ್ಲ ಅನ್ನಿಸುತ್ತದೆ. ಇಲ್ಲಿ ಇ.ಎಮ್.ಎಸ್. ಅವರಂತಹ ಬಹುದೊಡ್ಡ ರಾಜಕೀಯ ಮುತ್ಸದ್ದಿಯನ್ನು ಉದಾಹರಿಸಿದರೆ ತಪ್ಪಾಗಲಾರದೇನೊ. ಅವರಿಗೆ ಉಗ್ಗಿದ್ದರೂ ಅವರ ಮಾತಿಗಾಗಿ ಎಲ್ಲರೂ ಕಾಯುತ್ತಿದ್ದರು.

ಶೂದ್ರ ಶ್ರೀನಿವಾಸ್, ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT