ಇನ್ನೂ 20ರ ಚಿರಯುವಕ ರೊನಾಲ್ಡೊ!

7

ಇನ್ನೂ 20ರ ಚಿರಯುವಕ ರೊನಾಲ್ಡೊ!

Published:
Updated:

ಬೆಂಗಳೂರು: ಫುಟ್‌ಬಾಲ್‌ ಜಗತ್ತಿನ ತಾರಾ ಆಟಗಾರ ಪೋರ್ಚುಗಲ್‌ನ ಕ್ರಿಸ್ಟಿಯಾನೊ ರೊನಾಲ್ಡೊ ಅವರಿಗೆ ಇನ್ನೂ 20 ವರ್ಷ!

ಇತ್ತೀಚೆಗೆ ಮುಕ್ತಾಯಗೊಂಡ ಫಿಫಾ ವಿಶ್ವಕಪ್‌ನಲ್ಲಿ ನಾಲ್ಕು ಗೋಲು ಗಳಿಸಿದ್ದ ರೊನಾಲ್ಡೊ ತಮ್ಮ ತಂಡವು ಪ್ರೀ ಕ್ವಾರ್ಟರ್‌ಫೈನಲ್‌ ಹಂತ ತಲುಪಲು ನೆರವಾಗಿದ್ದರು. ಆದರೆ, ಈ ಹಂತದಲ್ಲಿ ಸೋತಿದ್ದ ಪೋರ್ಚುಗಲ್‌ ತಂಡವು ಟೂರ್ನಿಯಿಂದ ಹೊರಬಿದ್ದಿತ್ತು. ಇದಾದ ನಂತರ ಅವರು ಪ್ರತಿಷ್ಠಿತ ರಿಯಲ್‌ ಮ್ಯಾಡ್ರಿಡ್‌ ಕ್ಲಬ್‌ ತೊರೆದು ಇಟಲಿಯ ಯುವೆಂಟಸ್‌ಗೆ ಸೇರಿದ್ದರು. 

ಇದೀಗ ಯುವೆಂಟಸ್‌ ತಂಡ ನಡೆಸಿದ ದೈಹಿಕ ಪರೀಕ್ಷೆಯಲ್ಲಿ ಅವರು ಪಾಸ್‌ ಆಗಿದ್ದಾರೆ. ಅಷ್ಟೇ ಅಲ್ಲ, ಯುವೆಂಟನ್‌ ವೈದ್ಯಕೀಯ ವರದಿ ಪ್ರಕಾರ  ಈ ಆಟಗಾರನ ವಯಸ್ಸು ಕೇವಲ 20. 

 33 ವರ್ಷದ ರೊನಾಲ್ಡೊ 20ರ ಚಿರಯುವಕನ ದೈಹಿಕ ಕ್ಷಮತೆ ಹೊಂದಿದ್ದಾರೆ ಎಂದು ವರದಿಯಲ್ಲಿ ತಿಳಿಸಲಾಗಿದೆ. 

ಈ ಆಟಗಾರ ಹೊಂದಿರುವ ಬಾಡಿ ಫ್ಯಾಟ್‌ ಕೇವಲ 7%. ಕಾಲ್ಚೆಂಡಿನ ಅಂಗಳದಲ್ಲಿ ಮಿಂಚಿನ ವೇಗದಲ್ಲಿ ಆಡುವ ಆಟಗಾರರಿಗಿಂತ 4% ಕಡಿಮೆ ಇದೆ. ಫಿಫಾ ವಿಶ್ವಕಪ್‌ ಟೂರ್ನಿಯಲ್ಲಿ ರೊನಾಲ್ಡೊ ಪ್ರತಿ ಗಂಟೆಗೆ 33.98 ಕಿ. ಮೀ ವೇಗದಲ್ಲಿ ಓಡಿದ್ದಾರೆ. ಇದು ಟೂರ್ನಿಯಲ್ಲೇ ಗರಿಷ್ಠ ಸಾಧನೆ

ಈ ವಯಸ್ಸಿನಲ್ಲಿಯೂ ರೊನಾಲ್ಡೊ ಗಂಟೆಗಟ್ಟಲೇ ವ್ಯಾಯಾಮ ಮಾಡುತ್ತಾರೆ. ಒಂದು ದಿನವೂ ಅವರು ವ್ಯಾಯಾಮ ತಪ್ಪಿಸುವುದಿಲ್ಲ. ಇದೇ ಅವರ ಶಕ್ತಿಯ ಗುಟ್ಟು ಎಂದು ಅಭಿಮಾನಿಗಳು ಈ ವರದಿಯ ಅಂಶಗಳನ್ನು ಉಲ್ಲೇಖಿಸಿ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್‌ ಮಾಡುತ್ತಿದ್ದಾರೆ. 

 

 

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !