ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಥಿಯೇಟರ್ ಒಲಿಂಪಿಕ್‌ಗೆ ‘ಗುಲ್ ಎ ಬಕಾವಲಿ’

Last Updated 23 ಫೆಬ್ರುವರಿ 2018, 19:30 IST
ಅಕ್ಷರ ಗಾತ್ರ

ದೆಹಲಿಯಲ್ಲಿ ನಡೆಯುತ್ತಿರುವ ಪ್ರತಿಷ್ಠಿತ ‘ವಿಶ್ವ ಥಿಯೇಟರ್ ಒಲಿಂಪಿಕ್ಸ್‌’ಗೆ ಕನ್ನಡದ ‘ಗುಲ್–ಎ–ಬಕಾವಲಿ’ ನಾಟಕವು ಪ್ರದರ್ಶನಕ್ಕೆ ಆಯ್ಕೆಯಾಗಿದೆ.

ಥಿಯೇಟರ್ ಒಲಿಂಪಿಕ್ಸ್‌ನಲ್ಲಿ ವಿಶ್ವದ ಪ್ರಸಿದ್ಧ ರಂಗಕರ್ಮಿಗಳ ಅತ್ಯುತ್ತಮ ನಾಟಕಗಳನ್ನು ಪ್ರದರ್ಶಿಸಲಾಗುತ್ತಿದೆ. ಖ್ಯಾತ ರಂಗಕರ್ಮಿ ಮತ್ತು ಚಲನಚಿತ್ರ ನಿರ್ದೇಶಕ ಎಂ.ಎಸ್. ಸತ್ಯು ನಿರ್ದೇಶಿಸಿರುವ ‘ಗುಲ್ –ಎ– ಬಕಾವಲಿ’ ನಾಟಕ ಈಗಾಗಲೇ ಜನಮನ್ನಣೆ ಗಳಿಸಿದೆ. ಚಮತ್ಕಾರಿಕ ಸನ್ನಿವೇಶಗಳನ್ನು ಹೊಂದಿರುವ ಈ ಸಂಗೀತ ನಾಟಕವನ್ನು ಸುಧೀರ್ ಅತ್ತಾವರ್ ರಚಿಸಿದ್ದಾರೆ. ಈ ನಾಟಕಕ್ಕೆ ಸಮೀರ್ ಕುಲಕರ್ಣಿ ಸಂಗೀತ ನಿರ್ದೇಶಿಸಿದ್ದು, ಎಂ.ಸಿ. ಆನಂದ್ ಸಹ ನಿರ್ದೇಶನ ಮಾಡಿದ್ದಾರೆ.

ಜಗತ್ತಿನ 50 ದೇಶಗಳು ಭಾಗವಹಿಸುತ್ತಿರುವ 500 ನಾಟಕಗಳು ಪ್ರದರ್ಶನವಾಗುತ್ತಿರುವ ಥಿಯೇಟರ್ ಒಲಿಂಪಿಕ್ಸ್‌ಗೆ ಕನ್ನಡದ ‘ಗುಲ್–ಎ–ಬಕಾವಲಿ’ ಆಯ್ಕೆಯಾಗಿರುವುದು ರಂಗಪ್ರಿಯರಿಗೆ ಸಂತಸ ತಂದಿದೆ. ಮಾರ್ಚ್‌ 30ರಂದು ಸಂಜೆ 6.30ಕ್ಕೆ ದೆಹಲಿಯ ಕಮಾನಿ ರಂಗಮಂದಿರದಲ್ಲಿ ನಾಟಕ ಪ್ರದರ್ಶನವಾಗಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT