ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹಿಳಾ ಫುಟ್‌ಬಾಲ್: ಕೊಡಗು, ರೂಟ್ಸ್‌ ಜಯಭೇರಿ

Last Updated 18 ಸೆಪ್ಟೆಂಬರ್ 2021, 16:37 IST
ಅಕ್ಷರ ಗಾತ್ರ

ಬೆಂಗಳೂರು: ಯುನೈಟೆಡ್ ಎಫ್‌ಸಿ ಕೊಡಗು ಮತ್ತು ರೂಟ್ಸ್‌ ಫುಟ್‌ಬಾಲ್ ಸ್ಕೂಲ್ ತಂಡಗಳು ರಾಜ್ಯ ಫುಟ್‌ಬಾಲ್ ಸಂಸ್ಥೆಯ ಸ್ಪೋರ್ಟಿಂಗ್‌ ಪ್ಲಾನೆಟ್ ಟ್ರೋಫಿಗಾಗಿರುವ ಮಹಿಳೆಯರ ‘ಎ’ ಡಿವಿಷನ್ ಲೀಗ್‌ನಲ್ಲಿ ಶನಿವಾರ ರೋಚಕ ಜಯ ಸಾಧಿಸಿದವು.

ಗುಂಪು ಎರಡರ ಪಂದ್ಯದಲ್ಲಿ ಜಯಶ್ರೀ ಧಾಮ (34ನೇ ನಿಮಿಷ) ಗಳಿಸಿದ ಏಕೈಕ ಗೋಲಿನ ನೆರವಿನಿಂದ ಕೊಡಗು ತಂಡ ಜಿಆರ್‌ಕೆ ಎಫ್‌ಸಿಯನ್ನು 1–0 ಅಂತರದಲ್ಲಿ ಮಣಿಸಿತು. ರೂಟ್ಸ್‌ ತಂಡ ಪಾಸ್ ಎಫ್‌ಸಿ ಎದುರಿನ ಪಂದ್ಯದಲ್ಲಿ 1–0 ಅಂತರದಿಂದ ಗೆಲುವು ಸಾಧಿಸಿತು. 58ನೇ ನಿಮಿಷದಲ್ಲಿ ಸಂಜನಾ ಅವರು ಗೆಲುವಿನ ಗೋಲು ದಾಖಲಿಸಿದರು.

ಭಾನುವಾರ ಮಧ್ಯಾಹ್ನ 2.30ಕ್ಕೆ ಪಯನಿಯರ್ ವಿಮೆನ್ಸ್ ಎಫ್‌ಸಿ ಮತ್ತು ಪಿಂಕ್‌ ಪ್ಯಾಂಥರ್ಸ್‌, ಸಂಜೆ 4 ಗಂಟೆಗೆ ಸಾಯಿ ಸ್ಪೋರ್ಟ್ಸ್ ಅಕಾಡೆಮಿ ಮತ್ತು ಮಾಡರ್ನ್ ಗರ್ಲ್ಸ್ ಎಫ್‌ಸಿ ತಂಡಗಳು ಸೆಣಸಲಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT