ಸ್ಯಾಫ್‌ ಕಪ್ ಫುಟ್‌ಬಾಲ್: ಪಾಕ್ ಸದೆಬಡಿದ ಭಾರತ ಫೈನಲ್‌ಗೆ

7
ಸೆಮಿಯಲ್ಲಿ ಮಿಂಚಿದ ಮನ್ವೀರ್ ಸಿಂಗ್

ಸ್ಯಾಫ್‌ ಕಪ್ ಫುಟ್‌ಬಾಲ್: ಪಾಕ್ ಸದೆಬಡಿದ ಭಾರತ ಫೈನಲ್‌ಗೆ

Published:
Updated:

ಢಾಕಾ: ಮನ್ವೀರ್ ಸಿಂಗ್ ಅವರ ಮಿಂಚಿನ ಆಟದ ಬಲದಿಂದ ಭಾರತ ತಂಡವು ಇಲ್ಲಿ ಬುಧವಾರ ನಡೆದ ಸ್ಯಾಫ್‌ ಕಪ್ ಫುಟ್‌ಬಾಲ್ ಟೂರ್ನಿಯ ಸೆಮಿಫೈನಲ್‌ನಲ್ಲಿ ಪಾಕಿಸ್ತಾನ ತಂಡವನ್ನು ಸದೆಬಡಿಯಿತು. ಇದರೊಂದಿಗೆ ಫೈನಲ್‌ ಪ್ರವೇಶಿಸಿತು.

ಬಂಗಬಂಧು ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಭಾರತ ತಂಡವು 3–1 ಗೋಲುಗಳಿಂದ ಪಾಕಿಸ್ತಾನ ವಿರುದ್ಧ ಗೆದ್ದಿತು.  ಭಾರತದ ಮನ್ವೀರ್ ಸಿಂಗ್ (49ನೇ ನಿ, 69ನೇ ನಿ) ಎರಡು ಮತ್ತು ಸುಮೀತ್ ಪಸ್ಟಿ (83ನೇ ನಿ) ಒಂದು ಗೋಲು ಗಳಿಸಿದರು. ಪಾಕಿಸ್ತಾನದ ಹಸನ್ ಬಶೀರ್ 88ನೇ ನಿಮಿಷದಲ್ಲಿ ಒಂದು ಗಳಿಸಿದರು.  ಸೆಮ

ಪಂದ್ಯದ ಮೊದಲರ್ಧದಲ್ಲಿ ಉಭಯ ತಂಡಗಳೂ ಗೋಲು ಗಳಿಸಲಿಲ್ಲ.49ನೇ ನಿಮಿಷದಲ್ಲಿ ಕಾಲ್ಚಳಕ ಮೆರೆದ ಮನ್ವೀರ್ ಸಿಂಗ್ ಭಾರತದ ಖಾತೆ ಆರಂಭಿಸಿದರು. ಇದಾಗಿ 20 ನಿಮಿಷಗಳ ನಂತರ  ಮನ್ವೀರ್ ಮತ್ತೊಂದು ಗೋಲು ಹೊಡೆದು ತಂಡಕ್ಕೆ 2–0 ಮುನ್ನಡೆ ನೀಡಿದರು.  80ನೇ ನಿಮಿಷದಲ್ಲಿ ಕಣಕ್ಕಿಳಿದ ಬದಲೀ ಆಟಗಾರ ಪಸ್ಸಿ ಮತ್ತೊಂದು ಗೋಲು ಹೊಡೆದರು. ಪಂದ್ಯದ ಕೊನೆಯ ಹಂತದಲ್ಲಿ ಪಾಕ್ ಆಟಗಾರ ಬಶೀರ್ ಗೋಲು ಹೊಡೆದ ಸೋಲಿನ ಅಂತರ ತಗ್ಗಿಸಿದರು.

 

Tags: 

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !