ಬುಧವಾರ, ಅಕ್ಟೋಬರ್ 23, 2019
20 °C
ಸ್ಯಾಫ್‌ 18 ವರ್ಷದೊಳಗಿನವರ ಫುಟ್‌ಬಾಲ್‌ ಚಾಂಪಿಯನ್‌ಷಿಪ್‌

ಶ್ರೀಲಂಕಾ ಮಣಿಸಿ ಸೆಮಿಗೆ ಭಾರತ

Published:
Updated:

ಕಠ್ಮಂಡು: ಗುರುಕೀರತ್‌ ಸಿಂಗ್‌ ಗಳಿಸಿದ ಎರಡು ಗೋಲುಗಳ ಬಲದಿಂದ ಭಾರತ 18 ವರ್ಷದೊಳಗಿನವರ ತಂಡ ಸ್ಯಾಫ್‌ ಫುಟ್‌ಬಾಲ್‌ ಚಾಂಪಿಯನ್‌ಷಿಪ್‌ನಲ್ಲಿ ಶ್ರೀಲಂಕಾವನ್ನು 3–0ಯಿಂದ ಮಣಿಸಿದೆ. ಇದರೊಂದಿಗೆ ಬುಧವಾರ ಟೂರ್ನಿಯ ಸೆಮಿಫೈನಲ್‌ಗೆ ಲಗ್ಗೆಯಿಟ್ಟಿದೆ.

ಅಮನ್‌ ಚೆಟ್ರಿ ಒಂದು ಗೋಲು ದಾಖಲಿಸಿ ಗುರುಕೀರತ್‌ ಅವರಿಗೆ ಉತ್ತಮ ಸಹಕಾರ ನೀಡಿದರು.

ಆಕ್ರಮಣಕಾರಿಯಾಗಿ ಆಟ ಆರಂಭಿಸಿದರೂ ಭಾರತಕ್ಕೆ ಲಂಕಾದ ಡಿಫೆನ್ಸ್ ಕೋಟೆಯನ್ನು ಹೆಚ್ಚು ಬೇಧಿಸಲು ಸಾಧ್ಯವಾಗಲಿಲ್ಲ. ಮೊದಲಾರ್ಧ ಮುಗಿಯುವ ವೇಳೆ ಒಂದೂ ಗೋಲು ದಾಖಲಾಗಲಿಲ್ಲ. ದ್ವಿತೀಯಾರ್ಧವನ್ನು ಭಾರತ ಉತ್ಸಾಹದಿಂದಲೇ ಆರಂಭಿಸಿತು. 65ನೇ ನಿಮಿಷದಲ್ಲಿ ಗುರುಕೀರತ್‌ ಖಾತೆ ತೆರೆದರು. ಅಮನ್‌ ಹಾಗೂ ಅಮನ್‌ ಪಂದ್ಯದ ಕೊನೆಯ ಹಂತದಲ್ಲಿ ಎರಡು ಗೋಲು ದಾಖಲಿಸಿ ತಂಡದ ಜಯ ಖಚಿತಪಡಿಸಿದರು.

ಚುನಾವಣಾ ಫಲಿತಾಂಶ 2019 | ಹರಿಯಾಣ ಮತ್ತು ಮಹಾರಾಷ್ಟ್ರ ವಿಧಾನಸಭೆ 2019 ಚುನಾವಣೆಗೆ ಸಂಬಂಧಿಸಿದ ಸಮಗ್ರ ಸುದ್ದಿ, ಮಾಹಿತಿ, ವಿಶ್ಲೇಷಣೆ ಇಲ್ಲಿ ಲಭ್ಯ.

ಮಹಾರಾಷ್ಟ್ರ ವಿಧಾನಸಭೆಯ ಫಲಿತಾಂಶಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ

ಹರಿಯಾಣ ವಿಧಾನಸಭೆಯ ಫಲಿತಾಂಶಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ

ಪ್ರತಿಕ್ರಿಯಿಸಿ (+)