ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಂಡಿಯನ್ ಸೂಪರ್ ಲೀಗ್: ಎಸ್‌ಸಿ ಈಸ್ಟ್ ಬೆಂಗಾಲ್–ಜೆಎಫ್‌ಸಿ ಪಂದ್ಯ ಡ್ರಾ

Last Updated 22 ನವೆಂಬರ್ 2021, 4:51 IST
ಅಕ್ಷರ ಗಾತ್ರ

ವಾಸ್ಕೊ: ಮೊದಲಾರ್ಧದಲ್ಲಿ ಮೂಡಿಬಂದ ತಲಾ ಒಂದೊಂದು ಗೋಲುಗಳ ನಂತರ ಎಸ್‌ಸಿ ಈಸ್ಟ್ ಬೆಂಗಾಲ್ ಮತ್ತು ಜೆಮ್ಶೆಡ್‌ಪುರ ಎಫ್‌ಸಿ ತಂಡಗಳುರಕ್ಷಣಾತ್ಮಕ ಆಟಕ್ಕೆ ಒತ್ತುಕೊಟ್ಟವು. ಇಂಡಿಯನ್ ಸೂಪರ್ ಲೀಗ್ (ಐಎಸ್‌ಎಲ್‌) ಫುಟ್‌ಬಾಲ್ ಟೂರ್ನಿಯಲ್ಲಿ ಭಾನುವಾರ ರಾತ್ರಿ ನಡೆದ ಈ ತಂಡಗಳ ನಡುವಿನ ಪಂದ್ಯ ಡ್ರಾದಲ್ಲಿ ಕೊನೆಗೊಂಡಿತು.

ಫ್ರಾಂಜೊ ಪಿಯರ್ಸ್ 17ನೇ ನಿಮಿಷದಲ್ಲಿ ಗಳಿಸಿದ ಗೋಲಿನ ಮೂಲಕ ಈಸ್ಟ್ ಬೆಂಗಾಲ್ ತಂಡ ಮುನ್ನಡೆ ಸಾಧಿಸಿತು. ಆದರೆ ಮೊದಲಾರ್ಧದ ಕೊನೆಯ ನಿಮಿಷದಲ್ಲಿ ಪೀಟರ್ ಹಾರ್ಟ್ಲಿ ಚೆಂಡನ್ನು ಗುರಿ ಮುಟ್ಟಿಸಿ ಜೆಮ್ಶೆಡ್‌ಪುರ ಎಫ್‌ಸಿಗೆ ಸಮಬಲ ತಂದುಕೊಟ್ಟರು.

ಮುಂಬೈಗೆ ಗೋವಾ ಸವಾಲು

ಕಳೆದ ಆವೃತ್ತಿಯಲ್ಲಿ ಅಮೋಘ ಆಟವಾಡಿರುವ ಎಫ್‌ಸಿ ಗೋವಾ ತಂಡ ಹಾಲಿ ಚಾಂಪಿಯನ್‌ ಮುಂಬೈ ಸಿಟಿ ಎಫ್‌ಸಿಯನ್ನು ಸೋಮವಾರ ಎದುರಿಸಲಿದೆ.

ಎರಡೂ ತಂಡಗಳು ಅನೇಕ ಬದಲಾವಣೆಗಳನ್ನು ಮಾಡಿಕೊಂಡಿವೆ. ಮುಂಬೈ ತಂಡ ಚಾಂಪಿಯನ್ ಪಟ್ಟ ಉಳಿಸಿಕೊಳ್ಳುವ ಛಲದಲ್ಲಿ ಕಣಕ್ಕೆ ಇಳಿಯಲಿದ್ದು ಮೊದಲ ಪಂದ್ಯದಲ್ಲೇ ಜಯ ಗಳಿಸಿ ಈ ಕನಸಿಗೆ ಜೀವ ತುಂಬಲು ಪ್ರಯತ್ನಿಸಲಿದೆ.

ಲೀಗ್ ಹಂತದ 20 ಪಂದ್ಯಗಳಲ್ಲಿ 40 ಪಾಯಿಂಟ್ ಕಲೆ ಹಾಕಿದ್ದ ಮುಂಬೈ ಸಿಟಿ ಎಫ್‌ಸಿ ತಂಡ ಲೀಗ್ ಚಾಂಪಿಯನ್ ಆಗಿತ್ತು. ಫೈನಲ್‌ನಲ್ಲಿ ಎಟಿಕೆ ಮೋಹನ್ ಬಾಗನ್‌ ಎದುರು 2–1ರಿಂದ ಗೆದ್ದ ಪ್ರಶಸ್ತಿ ಗಳಿಸಿತ್ತು. ಗೋವಾ ತಂಡ ಟೂರ್ನಿಯುದ್ದಕ್ಕೂ ಉತ್ತಮ ಆಟವಾಡಿತ್ತು. ಆದರೆ ಫೈನಲ್‌ ಪಂದ್ಯದಲ್ಲಿ ಸ್ಥಾನ ಗಳಿಸಲು ಸಾಧ್ಯವಾಗಲಿಲ್ಲ.

ಗೋವಾ ತಂಡದಲ್ಲಿದ್ದ ಇಗರ್ ಆಂಗುಲೊ ಮತ್ತು ಮೊಹಮ್ಮದ್ ನವಾಜ್‌ ಈಗ ಮುಂಬೈ ಪಾಳಯದಲ್ಲಿದ್ದಾರೆ. ನಾರ್ತ್ ಈಸ್ಟ್ ಯುನೈಟೆಡ್‌ನಲ್ಲಿದ್ದ ಲಾಲೆಂಗ್‌ಮಾವಿಯಾ ರಾಲ್ಟೆ, ಬೆಂಗಳೂರು ಎಫ್‌ಸಿಯಲ್ಲಿದ್ದ ರಾಹುಲ್ ಭೆಕೆ ಅವರೊಂದಿಗೆ ಬ್ರೆಜಿಲ್‌ನ ವಿಲಾ ನೋವಾ ಎಫ್‌ಸಿಯಿಂದ ಬಂದಿರುವ ಕಾಸಿಯೊ ಗ್ಯಾಬ್ರಿಯೆಲ್, ಮಡುರೇರಾ ಕ್ಲಬ್‌ನ ವೈಗರ್‌ ಕ್ಯಾಟಟವು ಮುಂತಾದವರಿಂದ ತೊಡಗಿ ಅನೇಕ ಹೊಸ ಮುಖಗಳು ತಂಡದಲ್ಲಿದ್ದು ಬಲ ತುಂಬಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT