ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ಕಾಟ್ಲೆಂಡ್‌ನ ರೇಂಜರ್ಸ್‌ಗೆ ಬಾಲಾ ದೇವಿ

Last Updated 29 ಜನವರಿ 2020, 19:45 IST
ಅಕ್ಷರ ಗಾತ್ರ

ಬೆಂಗಳೂರು: ಭಾರತ ಮಹಿಳಾ ಫುಟ್‌ಬಾಲ್ ತಂಡದ ಆಕ್ರಮಣಕಾರಿ ಆಟಗಾರ್ತಿ ಬಾಲಾದೇವಿ ಒಂದೂವರೆ ವರ್ಷ ಸ್ಕಾಟ್ಲೆಂಡ್‌ನ ರೇಂಜರ್ಸ್ ಫುಟ್‌ಬಾಲ್ ಕ್ಲಬ್‌ನಲ್ಲಿ ಆಡಲಿದ್ದಾರೆ. ಬೆಂಗಳೂರು ಫುಟ್‌ಬಾಲ್ ಕ್ಲಬ್ ಜೊತೆ ಸಹಯೋಗ ಹೊಂದಿರುವ ರೇಂಜರ್ಸ್‌ ಕ್ಲಬ್‌ ಬುಧವಾರ ಕಂಠೀರವ ಕ್ರೀಡಾಂಗಣದಲ್ಲಿ ನಡೆದ ಸಮಾರಂಭದಲ್ಲಿ ಬಾಲಾದೇವಿ ಜೊತೆ ಒಪ್ಪಂದ ಮಾಡಿಕೊಂಡಿತು.

ಮಣಿಪುರ ಪೊಲೀಸ್ ಸ್ಪೋರ್ಟ್ಸ್ ಕ್ಲಬ್‌ ತಂಡದಲ್ಲಿ ಆಡುತ್ತಿರುವ ಬಾಲಾದೇವಿ ವಿದೇಶಿ ಕ್ಲಬ್ ಒಂದರಲ್ಲಿ ಆಡಲು ಆಯ್ಕೆಯಾಗಿರುವ ಭಾರತದ ಮೊದಲ ಆಟಗಾರ್ತಿ ಎನಿಸಿದ್ದಾರೆ. ರೇಂಜರ್ಸ್‌ನಲ್ಲಿ ಆಡುವ ಏಷ್ಯಾದ ಮೊದಲ ಆಟಗಾರ್ತಿಯೂ ಆಗಿದ್ದಾರೆ. 29 ವರ್ಷದ ಬಾಲಾದೇವಿ ರೇಂಜರ್ಸ್‌ ಕ್ಲಬ್‌ನಲ್ಲಿ ನವೆಂಬರ್‌ ತಿಂಗಳಲ್ಲಿ ನಡೆದ ಟ್ರಯಲ್ಸ್‌ನಲ್ಲಿ ಪಾಲ್ಗೊಂಡಿದ್ದರು.

2010ರಿಂದ ಭಾರತ ತಂಡದಲ್ಲಿ ಆಡುತ್ತಿರುವ ಬಾಲಾದೇವಿ 58 ಪಂದ್ಯಗಳಲ್ಲಿ 52 ಗೋಲುಗಳನ್ನು ಗಳಿಸಿದ್ದಾರೆ. ಈ ಮೂಲಕ ದಕ್ಷಿಣ ಏಷ್ಯಾದಲ್ಲಿ ಅತ್ಯಧಿಕ ಅಂತರರಾಷ್ಟ್ರೀಯ ಗೋಲು ಗಳಿಸಿದ ಆಟಗಾರ್ತಿ ಎನಿಸಿದ್ದಾರೆ. ದೇಶಿ ಫುಟ್‌ಬಾಲ್‌ನಲ್ಲಿ 120 ಪಂದ್ಯಗಳಲ್ಲಿ 100 ಗೋಲುಗಳನ್ನು ಗಳಿಸಿದ್ದಾರೆ.

‘ಯುರೋಪ್‌ನ ಪ್ರತಿಷ್ಠಿತ ಕ್ಲಬ್ ಒಂದರಲ್ಲಿ ಆಡಲು ಅವಕಾಶ ಲಭಿಸುತ್ತದೆ ಎಂದು ಕನಸಿನಲ್ಲೂ ಎನಿಸಿರಲಿಲ್ಲ. ಈಗ ಅತ್ಯಂತ ಖುಷಿಯಾಗಿದೆ. ಈ ಬೆಳವಣಿಗೆಯು ಭಾರತದ ಮಹಿಳಾ ಫುಟ್‌ಬಾಲ್ ಮೇಲೆ ಪೂರಕ ಪರಿಣಾಮ ಬೀರುವ ಭರವಸೆ ಇದೆ’ ಎಂದು ಬಾಲಾದೇವಿ ಹೇಳಿದರು.

ರೇಂಜರ್ಸ್‌ ಕ್ಲಬ್‌ನ ರಾಯಾಭಾರಿ ಮಾರ್ಕ್ ಹೇಟ್ಲಿ ಮತ್ತು ಬಿಎಫ್‌ಸಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮಂದಾರ್ ತಮ್ಹಾನೆ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT