ಇಂಗ್ಲೆಂಡ್‌ ಸಾಧನೆ: ಇಂಗ್ಲಿಷ್‌ ಮಾಧ್ಯಮಗಳ ಶ್ಲಾಘನೆ

7

ಇಂಗ್ಲೆಂಡ್‌ ಸಾಧನೆ: ಇಂಗ್ಲಿಷ್‌ ಮಾಧ್ಯಮಗಳ ಶ್ಲಾಘನೆ

Published:
Updated:
ಇಂಗ್ಲೆಂಡ್‌ ತಂಡದ ಗೆಲುವನ್ನು ಲಂಡನ್‌ನಲ್ಲಿ ಅಭಿಮಾನಿಗಳು ಸಂಭ್ರಮಿಸಿದ ಪರಿ –ರಾಯಿಟರ್ಸ್‌ ಚಿತ್ರ

ಲಂಡನ್‌: ವಿಶ್ವಕಪ್‌ ಟೂರ್ನಿಯ ಕ್ವಾರ್ಟರ್‌ಫೈನಲ್‌ ಪಂದ್ಯದಲ್ಲಿ ಸ್ವೀಡನ್‌ ತಂಡವನ್ನು ಮಣಿಸಿ ಸೆಮಿಫೈನಲ್‌ಗೆ ಲಗ್ಗೆ ಇಟ್ಟಿರುವ ಇಂಗ್ಲೆಂಡ್‌ ತಂಡದ ಸಾಧನೆಗೆ ಆ ರಾಷ್ಟ್ರದ ಮಾಧ್ಯಮಗಳು ಪ್ರಶಂಸೆ ವ್ಯಕ್ತಪಡಿಸಿವೆ. 

ವಿಶ್ವಕಪ್‌ ಟ್ರೋಫಿ ಎತ್ತಿ ಹಿಡಿಯುವ ಛಲದೊಂದಿಗೆ ಇಲ್ಲಿಯವರೆಗೂ ಅಮೋಘ ಸಾಧನೆ ಮಾಡಿರುವ ಇಂಗ್ಲೆಂಡ್‌ ತಂಡ, ತನ್ನ ದೇಶದ ಅಭಿಮಾನಿಗಳು ಹೊಸ ಕನಸು ಕಾಣುವಂತೆ ಮಾಡಿದೆ. ಸೆಮಿಫೈನಲ್‌ ಪಂದ್ಯದಲ್ಲಿ ಸೊಗಸಾದ ಗೊಲು ಗಳಿಸಿದ ಹ್ಯಾರಿ ಮಗೈರ್‌ ಹಾಗೂ ಡೆಲೆ ಅಲಿ ಅವರ ಚಿತ್ರಗಳು ಇಲ್ಲಿನ ಪ್ರಮುಖ ಪತ್ರಿಕೆಗಳ ಭಾನುವಾರದ ಸಂಚಿಕೆಯಲ್ಲಿ ರಾರಾಜಿಸಿವೆ. 

‘ಸಂಡೆ ಮಿರರ್‌’ ಪತ್ರಿಕೆಯು ‘ಸೆಮಿ ಗಾಡ್ಸ್‌’ ಎಂಬ ಶೀರ್ಷಿಕೆಯೊಂದಿಗೆ ಇಂಗ್ಲೆಂಡ್‌ ತಂಡದ ಆಟಗಾರರು ಸಂಭ್ರಮಿಸುತ್ತಿರುವ ಚಿತ್ರವನ್ನು ಪ್ರಕಟಿಸಿದೆ. ‘ಸಂಡೆ ಪೀಪಲ್ಸ್‌’ ಎಂಬ ಇನ್ನೊಂದು ಪ್ರಮುಖ ಪತ್ರಿಕೆಯು ‘ಕೀಪ್‌ ಕಾಮ್‌ ಆ್ಯಂಡ್‌ ಹ್ಯಾರಿ ಆನ್‌’ ಎಂಬ ಸೊಗಸಾದ ಶೀರ್ಷಿಕೆ ನೀಡಿದೆ. 

ಪ್ರತಿಷ್ಟಿತ ‘ದಿ ಆಬ್ಸರ್ವರ್‌’ ಪತ್ರಿಕೆಯು ತಂಡ ತೋರಿದ ಸಾಮರ್ಥ್ಯ ಶ್ಲಾಘನೆಗೆ ಅರ್ಹ ಎಂದು ಹೇಳಿದೆ. 

1990ರ ನಂತರ ಇದೇ ಮೊದಲ ಬಾರಿಗೆ ಇಂಗ್ಲೆಂಡ್‌ ತಂಡವು ವಿಶ್ವಕಪ್‌ ಟೂರ್ನಿಯ ಸೆಮಿಫೈನಲ್‌ ಪ್ರವೇಶಿಸಿದೆ. ಆಗ, ನಾಲ್ಕರ ಘಟ್ಟದ ಪಂದ್ಯದಲ್ಲಿ ಜರ್ಮನಿ ಎದುರು ಇಂಗ್ಲಿಷ್‌ ಪಡೆಯು ಸೋತಿತ್ತು. 

ದಾಖಲೆಯ ವೀಕ್ಷಣೆ: ಇಂಗ್ಲೆಂಡ್‌ ಹಾಗೂ ಸ್ವೀಡನ್‌ ತಂಡಗಳ ನಡುವಿನ ಕ್ವಾರ್ಟರ್‌ಫೈನಲ್‌ ಪಂದ್ಯವನ್ನು ಬ್ರಿಟನ್‌ನಲ್ಲಿ ಸುಮಾರು 2 ಕೋಟಿ ಜನರು ಟಿ.ವಿಯಲ್ಲಿ ವೀಕ್ಷಿಸಿದ್ದಾರೆ. 

‘ಬಿಬಿಸಿ ಒನ್‌ ಮೂಲಕ 1.9 ಕೋಟಿಗೂ ಹೆಚ್ಚು ಜನರು ಈ ಪಂದ್ಯವನ್ನು ನೋಡಿದ್ದಾರೆ. ಇದರಲ್ಲಿ 38 ಲಕ್ಷ ಮಂದಿ ನೇರಪ್ರಸಾರದ ಮೂಲಕವೇ ಅದನ್ನು ವೀಕ್ಷಿಸಿದ್ದಾರೆ. ಬಿಬಿಸಿಯ ಆನ್‌ಲೈನ್‌ ವೀಕ್ಷಣೆಯಲ್ಲಿ ಇದೊಂದು ದಾಖಲೆ’ ಎಂದು ಸ್ವತಃ ಬಿಬಿಸಿ ತಿಳಿಸಿದೆ. 

 

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !