ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ಪೇನ್– ಮೊರೊಕ್ಕೊ ಪೈಪೋಟಿ

16ರ ಘಟ್ಟದ ಪಂದ್ಯ: ಮಾಜಿ ಚಾಂಪಿಯನ್‌ಗೆ ಜಯದ ವಿಶ್ವಾಸ
Last Updated 5 ಡಿಸೆಂಬರ್ 2022, 13:24 IST
ಅಕ್ಷರ ಗಾತ್ರ

ದೋಹಾ: ಬಲಿಷ್ಠ ಬೆಲ್ಜಿಯಂ ತಂಡವನ್ನು ಮಣಿಸಿ ಆತ್ಮವಿಶ್ವಾಸದಲ್ಲಿರುವ ಮೊರೊಕ್ಕೊ, ವಿಶ್ವಕಪ್ ಟೂರ್ನಿಯ 16ರ ಘಟ್ಟದ ಪಂದ್ಯದಲ್ಲಿ ಮಂಗಳವಾರ ಸ್ಪೇನ್ ಸವಾಲಿಗೆ ಸಜ್ಜಾಗಿದೆ.

ಗುಂಪುಹಂತದಲ್ಲಿ ಬೆಲ್ಜಿಯಂ ಮತ್ತು ಕೆನಡಾ ತಂಡಗಳಿಗೆ ಆಘಾತ ನೀಡಿದ್ದ ಮೊರೊಕ್ಕೊ, ಕ್ರೊವೇಷ್ಯಾದೊಂದಿಗೆ ಡ್ರಾ ಸಾಧಿಸಿ ಪಾಯಿಂಟ್ಸ್ ಪಟ್ಟಿಯಲ್ಲಿಅಗ್ರಸ್ಥಾನದೊಂದಿಗೆ ಪ್ರೀಕ್ವಾರ್ಟರ್‌ ಪ್ರವೇಶಿಸಿದೆ. 1986ರ ನಂತರ ಇದೇ ಮೊದಲ ಬಾರಿಗೆ ಮೊರೊಕ್ಕೊ 16ರ ಘಟ್ಟ ತಲುಪಿದೆ.

ಎಜುಕೇಶನ್ ಸಿಟಿ ಕ್ರೀಡಾಂಗಣದಲ್ಲಿ ಮೊರೊಕ್ಕೊ– ಸ್ಪೇನ್ ಪೈಪೋಟಿ ನಡೆಯಲಿದೆ.

‘ವಿಶ್ವದ ಪ್ರಮುಖ ತಂಡಗಳಲ್ಲಿ ಒಂದೆನಿಸಿರುವ ಸ್ಪೇನ್‌ ವಿರುದ್ಧ ಆಡುವುದು ದೊಡ್ಡ ಸವಾಲು. ನಮ್ಮದೇ ಆದ ತಂತ್ರಗಳಿವೆ. ಸ್ಪೇನ್‌ ಎದುರು ಗೆದ್ದರೆ ಅದೊಂದು ದೊಡ್ಡ ಅಚ್ಚರಿ‘ ಎಂದು ಮೊರೊಕ್ಕೊ ತಂಡದ ಮುಖ್ಯ ಕೋಚ್‌ ವಾಲಿದ್‌ ರೆಗ್ರಾಗಿ ಹೇಳಿದ್ದಾರೆ.

2010ರ ಆವೃತ್ತಿಯಲ್ಲಿ ಸ್ಪೇನ್ ತಂಡವು 1–0ಯಿಂದ ನೆದರ್ಲೆಂಡ್ಸ್ ಎದುರು ಗೆದ್ದು ಚಾಂಪಿಯನ್‌ ಆಗಿತ್ತು. ಇಲ್ಲಿಯೂ ಟ್ರೋಫಿ ಜಯಿಸುವ ನೆಚ್ಚಿನ ತಂಡಗಳಲ್ಲಿ ಒಂದೆನಿಸಿದ್ದು, ಉಭಯ ತಂಡಗಳ ಮಧ್ಯೆ ತೀವ್ರ ಪೈಪೋಟಿ ನಡೆಯಬಹುದು.

ಸ್ಪೇನ್ ಮತ್ತು ಮೊರೊಕ್ಕೊ ಮೂರು ಅಂತರರಾಷ್ಟ್ರೀಯ ಪಂದ್ಯಗಳಲ್ಲಿ ಮುಖಾಮುಖಿಯಾಗಿದ್ದು, ಸ್ಪೇನ್‌ ಎರಡರಲ್ಲಿ ಜಯ ಸಾಧಿಸಿದೆ. ಒಂದು ಪಂದ್ಯ ಡ್ರಾ ಆಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT