ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗೋಲು ಮಳೆಗರೆದ ಸ್ಪೇನ್‌ ತಂಡ

Last Updated 23 ನವೆಂಬರ್ 2022, 19:50 IST
ಅಕ್ಷರ ಗಾತ್ರ

ದೋಹಾ (ರಾಯಿಟರ್ಸ್): ಸ್ಪೇನ್ ತಂಡವು ವಿಶ್ವಕಪ್ ಟೂರ್ನಿಯಲ್ಲಿ ಭರ್ಜರಿ ಆರಂಭ ಮಾಡಿತು.

ಇಲ್ಲಿಯ ಅಲ್‌ ತುಮಾಮಾ ಕ್ರೀಡಾಂಗಣದಲ್ಲಿ ಬುಧವಾರ ನಡೆದ ‘ಇ’ ಗುಂಪಿನ ಹಣಾಹಣಿಯಲ್ಲಿ 7–0ಯಿಂದ ಕೋಸ್ಟರಿಕಾ ತಂಡವನ್ನು ಪರಾಭವಗೊಳಿಸಿತು. ಮೊದಲಾರ್ಧದಲ್ಲಿ ಸ್ಪೇನ್‌ 3–0ಯಿಂದ ಮುಂದಿತ್ತು. ಅದೇ ಲಯದೊಂದಿಗೆ ಮುನ್ನುಗ್ಗಿ ಗೆಲುವು ಒಲಿಸಿಕೊಂಡಿತು. ವಿಶ್ವಕಪ್ ಟೂರ್ನಿಯಲ್ಲಿ ಆ ತಂಡಕ್ಕೆ ದೊರೆತ ಅತಿ ದೊಡ್ಡ ಅಂತರದ ಜಯ ಇದು.

ಸ್ಪೇನ್ ತಂಡಕ್ಕಾಗಿ ಡ್ಯಾನಿ ಒಲ್ಮೊ (11ನೇ ನಿಮಿಷ), ಮಾರ್ಕೊ ಅಸೆನ್ಸಿಯೊ (21ನೇ ನಿ.), ಫೆರಾನ್ ಟೊರೆಸ್‌ (31 ಮತ್ತು 54ನೇ ನಿ, ಪೆನಾಲ್ಟಿ), ಗಾವಿ (74ನೇ ನಿ.), ಕಾರ್ಲೊಸ್‌ ಸೊಲೆರ್ (90ನೇ ನಿ.) ಮತ್ತು ಅಲ್ವಾರೊ ಮೊರಾಟ (90+2ನೇ ನಿ.) ಗೋಲು ದಾಖಲಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT