ರಾಜ್ಯ ತಂಡಕ್ಕೆ ಹರ್ಷ ಹರಿ ನಾಯಕ

7

ರಾಜ್ಯ ತಂಡಕ್ಕೆ ಹರ್ಷ ಹರಿ ನಾಯಕ

Published:
Updated:

ಬೆಂಗಳೂರು: ಹರ್ಷ ಹರಿ ವೆಂಕಟನಾರಾಯಣ್‌ ಅವರು ಮುಂಬರುವ ರಾಷ್ಟ್ರೀಯ ಸಬ್‌ ಜೂನಿಯರ್‌ ಫುಟ್‌ಬಾಲ್‌ ಚಾಂಪಿಯನ್‌ಷಿಪ್‌ನಲ್ಲಿ ಕರ್ನಾಟಕ ತಂಡವನ್ನು ಮುನ್ನಡೆಸಲಿದ್ದಾರೆ.

ಈ ಟೂರ್ನಿಗೆ ಕರ್ನಾಟಕ ರಾಜ್ಯ ಫುಟ್‌ಬಾಲ್‌ ಸಂಸ್ಥೆ (ಕೆಎಸ್‌ಎಫ್‌ಎ) ಬುಧವಾರ 20 ಸದಸ್ಯರ ತಂಡವನ್ನು ಪ್ರಕಟಿಸಿದೆ.

ಹೈದರಾಬಾದ್‌ನ ಗಚಿಬೌಲಿ ಕ್ರೀಡಾಂಗಣದಲ್ಲಿ ಆಗಸ್ಟ್‌ 11ರಿಂದ 16ರವರೆಗೆ ಟೂರ್ನಿ ಆಯೋಜನೆಯಾಗಿದೆ. ಕರ್ನಾಟಕ ತಂಡ ತೆಲಂಗಾಣ ಮತ್ತು ಪುದುಚೇರಿ ಜೊತೆ ‘ಎ’ ಗುಂಪಿನಲ್ಲಿ ಸ್ಥಾನ ಗಳಿಸಿದೆ. ಕೇರಳ, ತಮಿಳುನಾಡು ಮತ್ತು ಆಂಧ್ರಪ್ರದೇಶ ತಂಡಗಳು ‘ಬಿ’ ಗುಂಪಿನಲ್ಲಿವೆ.

ಆಗಸ್ಟ್‌ 11ರಂದು ನಡೆಯುವ ತನ್ನ ಮೊದಲ ಪಂದ್ಯದಲ್ಲಿ ಕರ್ನಾಟಕ ತಂಡ ಪುದುಚೇರಿ ಎದುರು ಸೆಣಸಲಿದೆ.

ತಂಡ ಇಂತಿದೆ: ಹರ್ಷ ಹರಿ ವೆಂಕಟನಾರಾಯಣ್‌ (ನಾಯಕ), ಬಿ.ಪ್ರಣವ್‌, ರಾಹುಲ್‌ ಕುಮಾರ್‌ ನೆಹ್ರಾ (ಉಪ ನಾಯಕ), ಬಿ.ಪಿ.ಅಕಿಂತ್‌, ಜಿ.ಅಮೋಘ್‌, ರಯಾನ್‌ ಶಕೀರ್‌, ಕ್ಷಿತಿಜ್‌ ಗುಪ್ತಾ, ಎಸ್‌.ಎಬೆನೆಜರ್‌ ಪಾಲ್‌, ಆರ್‌.ನೀಲ್‌ ಜೋಸೆಫ್‌, ವಿನೋದ್‌ ಸಿಂಗ್‌, ಆರ್‌.ವಿಶಾಲ್‌, ಪರಿಕ್ರಮ್‌ ಬೋರಾ, ಹಿಮದೀಪ್‌ ಗೌಡ, ಬಿ.ಗಂಭೀರ್‌, ಮೆಲೆಮ್‌ ತೊಮ್‌ತಿನ್‌ ಮೀಟೈ, ಜಿ.ಉದಿತ್‌, ಎಸ್‌.ಆದಿತ್ಯನ್‌, ಅಹಾನ್‌ ಪ್ರಕಾಶ್‌, ನಿನಾದ್‌ ಅನಿರುದ್ಧ್‌ ದೇಶವಾಂಡಿಕರ್‌ ಮತ್ತು ಶ್ರೇಯಸ್‌ ಸ್ವಾಮಿ.

ಮುಖ್ಯ ಕೋಚ್‌: ಎ.ಶರವಣನ್‌, ಸಹಾಯಕ ಕೋಚ್‌: ಜೆ.ಸಂತೋಷ್‌ ಕುಮಾರ್‌, ಮ್ಯಾನೇಜರ್‌: ಎಂ.ವಿ.ಬಾಲಾಜಿ ನರಸಿಂಹನ್‌.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !