ಬಿಎಫ್‌ಸಿ ಕನಸು ಭಗ್ನ

ಶುಕ್ರವಾರ, ಏಪ್ರಿಲ್ 19, 2019
27 °C

ಬಿಎಫ್‌ಸಿ ಕನಸು ಭಗ್ನ

Published:
Updated:

ಭುವನೇಶ್ವರ: ಸೂಪರ್‌ ಕಪ್‌ ಫುಟ್‌ಬಾಲ್‌ ಟೂರ್ನಿಯಲ್ಲಿ ಸತತ ಎರಡನೇ ಪ್ರಶಸ್ತಿ ಗೆಲ್ಲುವ ಬೆಂಗಳೂರು ಫುಟ್‌ಬಾಲ್‌ ಕ್ಲಬ್‌ (ಬಿಎಫ್‌ಸಿ) ಕನಸು ಗುರುವಾರ ಭಗ್ನವಾಗಿದೆ.

ಕಳಿಂಗ ಕ್ರೀಡಾಂಗಣದಲ್ಲಿ ನಡೆದ ಕ್ವಾರ್ಟರ್‌ ಫೈನಲ್‌ನಲ್ಲಿ ಹಾಲಿ ಚಾಂಪಿಯನ್‌ ಬಿಎಫ್‌ಸಿ 1–2 ಗೋಲುಗಳಿಂದ ಚೆನ್ನೈ ಸಿಟಿ ಎಫ್‌ಸಿ ಎದುರು ಆಘಾತ ಕಂಡಿದೆ.

ಈ ಬಾರಿಯ ಇಂಡಿಯನ್‌ ಸೂಪರ್‌ ಲೀಗ್‌ನಲ್ಲಿ (ಐಎಸ್‌ಎಲ್‌) ಪ್ರಶಸ್ತಿ ಗೆದ್ದು ವಿಶ್ವಾಸದಿಂದ ಬೀಗುತ್ತಿದ್ದ ಬೆಂಗಳೂರಿನ ತಂಡ ಗುರುವಾರ ಪರಿಣಾಮಕಾರಿ ಆಟ ಆಡಲು ವಿಫಲವಾಯಿತು.

ಚೆನ್ನೈ ಸಿಟಿ ಆರಂಭದಿಂದಲೇ ಆಕ್ರಮಣಕಾರಿ ಆಟಕ್ಕೆ ಮುಂದಾಯಿತು. ಈ ತಂಡ 15ನೇ ನಿಮಿಷದಲ್ಲಿ ಖಾತೆ ತೆರೆಯಿತು. ನೆಸ್ಟರ್‌ ಗೋಲು ಬಾರಿಸಿದರು. ನಂತರದ ಅವಧಿಯಲ್ಲಿ ಎರಡೂ ತಂಡಗಳು ಜಿದ್ದಾಜಿದ್ದಿನ ಪೈಪೋಟಿ ನಡೆಸಿದವು. ಹೀಗಾಗಿ ಯಾರಿಗೂ ಚೆಂಡನ್ನು ಗುರಿ ಸೇರಿಸಲು ಆಗಲಿಲ್ಲ.

54ನೇ ನಿಮಿಷದಲ್ಲಿ ಚೆನ್ನೈ ಸಿಟಿ ಮುನ್ನಡೆ ಹೆಚ್ಚಿಸಿಕೊಂಡಿತು. ಮಾಂಜಿ ಕಾಲ್ಚಳಕ ತೋರಿ ಅಭಿಮಾನಿಗಳನ್ನು ರಂಜಿಸಿದರು. 65ನೇ ನಿಮಿಷದಲ್ಲಿ ಬಿಎಫ್‌ಸಿ ಖಾತೆ ತೆರೆಯಿತು. ನಾಯಕ ಸುನಿಲ್‌ ಚೆಟ್ರಿ ಗೋಲು ಹೊಡೆದು ಹಿನ್ನಡೆ ತಗ್ಗಿಸಲಷ್ಟೇ ಶಕ್ತರಾದರು.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !