ಫುಟ್‌ಬಾಲ್‌: ಸೋಲಿನಿಂದ ಪಾರಾದ ಎಎಸ್‌ಸಿ

7

ಫುಟ್‌ಬಾಲ್‌: ಸೋಲಿನಿಂದ ಪಾರಾದ ಎಎಸ್‌ಸಿ

Published:
Updated:
Deccan Herald

ಬೆಂಗಳೂರು: ಹೆಚ್ಚುವರಿ ಅವಧಿಯಲ್ಲಿ ಎರಡು ಗೋಲು ಬಾರಿಸಿದ ಜೊತಿನ್‌ ಸಿಂಗ್‌, ಎಎಸ್‌ಸಿ ಆ್ಯಂಡ್‌ ಸೆಂಟರ್‌ ಎಫ್‌ಸಿ ತಂಡವನ್ನು ಸೋಲಿನಿಂದ ಪಾರು ಮಾಡಿದರು.

ಅಶೋಕನಗರದಲ್ಲಿರುವ ಬೆಂಗಳೂರು ಫುಟ್‌ಬಾಲ್‌ ಕ್ರೀಡಾಂಗಣದಲ್ಲಿ ಶನಿವಾರ ನಡೆದ ಬಿಡಿಎಫ್‌ಎ ಸೂಪರ್‌ ಡಿವಿಷನ್‌ ಲೀಗ್‌ ಪಂದ್ಯದಲ್ಲಿ ಎಎಸ್‌ಸಿ 2–2 ಗೋಲುಗಳಿಂದ ಬೆಂಗಳೂರು ಡ್ರೀಮ್‌ ಯುನೈಟೆಡ್‌ ಎಫ್‌ಸಿ ವಿರುದ್ಧ ಡ್ರಾ ಮಾಡಿಕೊಂಡಿತು.

ಮೊದಲಾರ್ಧದಲ್ಲಿ ಡ್ರೀಮ್‌ ಯುನೈಟೆಡ್‌ ಎಫ್‌ಸಿ ಮಿಂಚಿತು. 14ನೇ ನಿಮಿಷದಲ್ಲಿ ನಿಯಾಜ್‌ ಗೋಲು ಬಾರಿಸಿ 1–0ರ ಮುನ್ನಡೆಗೆ ಕಾರಣರಾದರು. ನಂತರದ ಅವಧಿಯಲ್ಲಿ ಸಮಬಲದ ಪೈಪೋಟಿ ಕಂಡುಬಂತು.

ದ್ವಿತೀಯಾರ್ಧದಲ್ಲಿ ಜಿದ್ದಾಜಿದ್ದಿನ ಪೈಪೋಟಿ ಏರ್ಪಟ್ಟಿತ್ತು. 80ನೇ ನಿಮಿಷದಲ್ಲಿ ನಿಯಾಜ್‌ ಮತ್ತೊಮ್ಮೆ ಕಾಲ್ಚಳಕ ತೋರಿದರು. ನಿಗದಿತ ಅವಧಿಯ ಆಟ (90 ನಿಮಿಷ) ಮುಗಿದಾಗ ಡ್ರೀಮ್‌ ಯುನೈಟೆಡ್‌ 2–0ರಿಂದ ಮುನ್ನಡೆ ಹೊಂದಿತ್ತು.

ಹೆಚ್ಚುವರಿ ಅವಧಿಯಲ್ಲಿ ಜೊತಿನ್‌ ಮೋಡಿ ಮಾಡಿದರು. 90+2ನೇ ನಿಮಿಷದಲ್ಲಿ ಚೆಂಡನ್ನು ಗುರಿ ಸೇರಿಸಿ ಹಿನ್ನಡೆಯನ್ನು 1–2ಕ್ಕೆ ತಗ್ಗಿಸಿದರು. ಇದರ ಬೆನ್ನಲ್ಲೇ (90+4ನೇ ನಿ.) ಮತ್ತೊಮ್ಮೆ ಎದುರಾಳಿ ತಂಡದ ರಕ್ಷಣಾ ಕೋಟೆ ಭೇದಿಸಿ ಎಲ್ಲರ ಮೆಚ್ಚುಗೆಗೆ ಪಾತ್ರರಾದರು.

ಚಾಲೆಂಜರ್ಸ್‌ಗೆ ಜಯ: ‘ಎ’ ಡಿವಿಷನ್‌ ಲೀಗ್‌ ಪಂದ್ಯದಲ್ಲಿ ಯಂಗ್‌ ಚಾಲೆಂಜರ್ಸ್‌ ಎಫ್‌ಸಿ ಗೆದ್ದಿತು. ಚಾಲೆಂಜರ್ಸ್‌ 4–0 ಗೋಲುಗಳಿಂದ ಆರ್‌.ಎಸ್‌.ಸ್ಪೋರ್ಟ್ಸ್‌ ಎಫ್‌ಸಿ ತಂಡವನ್ನು ಮಣಿಸಿತು.

ವಿಜಯೀ ತಂಡದ ನದೀಮ್‌ ಎರಡು ಗೋಲು ದಾಖಲಿಸಿ ಮಿಂಚಿದರು. ಅರಿವು (13ನೇ ನಿಮಿಷ) ಮತ್ತು ಭರತ್‌ (65ನೇ ನಿ.) ತಲಾ ಒಂದು ಗೋಲು ಬಾರಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !