ಭಾನುವಾರ, ಡಿಸೆಂಬರ್ 8, 2019
19 °C

ಸೂಪರ್‌ ಡಿವಿಷನ್‌ ಫುಟ್‌ಬಾಲ್‌: ಓಜೋನ್‌ ಎಫ್‌ಸಿಗೆ ಜಯ

Published:
Updated:
Deccan Herald

ಬೆಂಗಳೂರು: ಮನ್ವೀರ್‌ ಗಳಿಸಿದ ಏಕೈಕ ಗೋಲಿನ ನೆರವಿನಿಂದ ಓಜೋನ್‌ ಎಫ್‌ಸಿ ಬೆಂಗಳೂರು ತಂಡ ಬಿಡಿಎಫ್‌ಎ ಆಶ್ರಯದ ಸೂಪರ್‌ ಡಿವಿಷನ್‌ ಲೀಗ್‌ ಫುಟ್‌ಬಾಲ್‌ ಪಂದ್ಯದಲ್ಲಿ ಗೆದ್ದಿದೆ.

ಅಶೋಕನಗರದಲ್ಲಿರುವ ಬೆಂಗಳೂರು ಫುಟ್‌ಬಾಲ್‌ ಕ್ರೀಡಾಂಗಣದಲ್ಲಿ ಸೋಮವಾರ ನಡೆದ ಹಣಾಹಣಿಯಲ್ಲಿ ಓಜೋನ್‌ ಎಫ್‌ಸಿ 1–0 ಗೋಲಿನಿಂದ ಬೆಂಗಳೂರು ಇಂಡಿಪೆಂಡೆಂಟ್‌ ತಂಡವನ್ನು ಸೋಲಿಸಿತು.

ಮನ್ವೀರ್‌ 45ನೇ ನಿಮಿಷದಲ್ಲಿ ಚೆಂಡನ್ನು ಗುರಿ ಮುಟ್ಟಿಸಿದರು.

‘ಎ’ ಡಿವಿಷನ್‌ ಲೀಗ್‌ ಪಂದ್ಯದಲ್ಲಿ ಎಜಿಒಆರ್‌ಸಿ ಎಫ್‌ಸಿ ತಂಡ ಗೆಲುವಿನ ಸಿಹಿ ಸವಿಯಿತು.

ಎಜಿಒಆರ್‌ಸಿ 3–1 ಗೋಲುಗಳಿಂದ ಆರ್‌.ಎಸ್‌.ಸ್ಪೋರ್ಟ್ಸ್‌ ಎಫ್‌ಸಿ ತಂಡವನ್ನು ಮಣಿಸಿತು.

ವಿಜಯಿ ತಂಡದ ಪ್ರದೀಪ್‌ ಎರಡು ಗೋಲು ಬಾರಿಸಿ ಗಮನ ಸೆಳೆದರು. ಅವರು 55 ಮತ್ತು 68ನೇ ನಿಮಿಷಗಳಲ್ಲಿ ಚೆಂಡನ್ನು ಗುರಿ ತಲುಪಿಸಿದರು. ನರೇಶ್‌ 59ನೇ ನಿಮಿಷದಲ್ಲಿ ಕಾಲ್ಚಳಕ ತೋರಿದರು.

ಆರ್‌.ಎಸ್‌.ಸ್ಪೋರ್ಟ್ಸ್‌ ತಂಡದ ಸೂರ್ಯ 30ನೇ ನಿಮಿಷದಲ್ಲಿ ಗೋಲು ಬಾರಿಸಿದರು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು