ಜೊತಿನ್ ಸಿಂಗ್ ಮೋಡಿ

7
ಸೂಪರ್‌ ಡಿವಿಷನ್‌ ಲೀಗ್ ಫುಟ್‌ಬಾಲ್‌ ಚಾಂಪಿಯನ್‌ಷಿಪ್‌

ಜೊತಿನ್ ಸಿಂಗ್ ಮೋಡಿ

Published:
Updated:
Deccan Herald

ಬೆಂಗಳೂರು: ಪೆನಾಲ್ಟಿ ಅವಕಾಶದಲ್ಲಿ ಜೊತಿನ್‌ ಸಿಂಗ್ ಗಳಿಸಿದ ಎರಡು ಗೋಲುಗಳ ಬಲದಿಂದ ಎಎಸ್‌ಸಿ ಆ್ಯಂಡ್‌ ಸೆಂಟರ್‌ ಎಫ್‌ಸಿ ತಂಡ ಬೆಂಗಳೂರು ಜಿಲ್ಲಾ ಫುಟ್‌ಬಾಲ್‌ ಸಂಸ್ಥೆ (ಬಿಡಿಎಫ್‌ಎ) ಆಶ್ರಯದ ಸೂಪರ್‌ ಡಿವಿಷನ್‌ ಲೀಗ್‌ ಪಂದ್ಯದಲ್ಲಿ ಗೆದ್ದಿದೆ.

ಅಶೋಕನಗರದಲ್ಲಿರುವ ಬೆಂಗಳೂರು ಫುಟ್‌ಬಾಲ್‌ ಕ್ರೀಡಾಂಗಣದಲ್ಲಿ ಶನಿವಾರ ನಡೆದ ಪೈಪೋಟಿಯಲ್ಲಿ ಎಎಸ್‌ಸಿ 2–0 ಗೋಲುಗಳಿಂದ ಬೆಂಗಳೂರು ಈಗಲ್ಸ್‌ ಎಫ್‌ಸಿ ತಂಡವನ್ನು ಸೋಲಿಸಿತು.

ಉಭಯ ತಂಡಗಳು ಆರಂಭದಿಂದಲೇ ಆಕ್ರಮಣಕಾರಿ ಆಟಕ್ಕೆ ಮುಂದಾದವು. ಹೀಗಾಗಿ 40 ನಿಮಿಷಗಳ ಆಟ ಗೋಲುರಹಿತವಾಗಿತ್ತು. 44ನೇ ನಿಮಿಷದಲ್ಲಿ ಎಎಸ್‌ಸಿ ತಂಡಕ್ಕೆ ಪೆನಾಲ್ಟಿ ಸಿಕ್ಕಿತು. ಈ ಅವಕಾಶದಲ್ಲಿ ಜೊತಿನ್‌, ಚೆಂಡನ್ನು ಗುರಿ ಮುಟ್ಟಿಸಿದರು.

ದ್ವಿತೀಯಾರ್ಧದಲ್ಲೂ ಉಭಯ ತಂಡಗಳು ಚುರುಕಿನ ಸಾಮರ್ಥ್ಯ ತೋರಿದವು. 90ನೇ ನಿಮಿಷದಲ್ಲಿ ಎಎಸ್‌ಸಿಗೆ ಮತ್ತೊಂದು ಪೆನಾಲ್ಟಿ ಲಭಿಸಿತು. ಈ ಅವಕಾಶವನ್ನು ಗೋಲಾಗಿ ಪರಿವರ್ತಿಸಿದ ಜೊತಿನ್‌ ಸಂಭ್ರಮಿಸಿದರು.

‘ಎ’ ಡಿವಿಷನ್ ಲೀಗ್‌ ಪಂದ್ಯದಲ್ಲಿ ಪರಿಕ್ರಮ ಎಫ್‌ಸಿ 3–1 ಗೋಲುಗಳಿಂದ ಆರ್‌.ಎಸ್‌.ಸ್ಪೋರ್ಟ್ಸ್‌ ಎಫ್‌ಸಿ ತಂಡವನ್ನು ಸೋಲಿಸಿತು.

ಪರಿಕ್ರಮ ತಂಡದ ಜೋರ್ಡನ್‌ ಲೆನ್‌ (4ನೇ ನಿಮಿಷ), ಚಿರಂಜೀವಿ (9ನೇ ನಿ.) ಮತ್ತು ನಂದಾ (23ನೇ ನಿ.) ಚೆಂಡನ್ನು ಗುರಿ ಮುಟ್ಟಿಸಿದರು.

ಆರ್‌.ಎಸ್‌.ಸ್ಪೋರ್ಟ್ಸ್‌ ಪರ ಅಜಯ್‌ 19ನೇ ನಿಮಿಷದಲ್ಲಿ ಕಾಲ್ಚಳಕ ತೋರಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !