ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜ್‌ಕಿರಣ್ ಮಿಂಚು: ಎಡಿಇಗೆ ಜಯ

ಸೂಪರ್‌ ಡಿವಿಷನ್‌ ಲೀಗ್‌ ಫುಟ್‌ಬಾಲ್‌ ಚಾಂಪಿಯನ್‌ಷಿಪ್‌
Last Updated 28 ಡಿಸೆಂಬರ್ 2018, 20:07 IST
ಅಕ್ಷರ ಗಾತ್ರ

ಬೆಂಗಳೂರು: ರಾಜ್‌ಕಿರಣ್‌ ಗಳಿಸಿದ ಎರಡು ಗೋಲುಗಳ ಬಲದಿಂದ ಎಡಿಇ ಎಫ್‌ಸಿ ತಂಡ ಬೆಂಗಳೂರು ಜಿಲ್ಲಾ ಫುಟ್‌ಬಾಲ್‌ ಸಂಸ್ಥೆ (ಬಿಡಿಎಫ್‌ಎ) ಆಶ್ರಯದ ಸೂಪರ್‌ ಡಿವಿಷನ್‌ ಲೀಗ್‌ ಫುಟ್‌ಬಾಲ್‌ ಪಂದ್ಯದಲ್ಲಿ ಗೆಲುವಿನ ಸಿಹಿ ಸವಿದಿದೆ.

ಅಶೋಕನಗರದಲ್ಲಿರುವ ಬೆಂಗಳೂರು ಫುಟ್‌ಬಾಲ್‌ ಕ್ರೀಡಾಂಗಣದಲ್ಲಿ ಶುಕ್ರವಾರ ನಡೆದ ಹಣಾಹಣಿಯಲ್ಲಿ ಎಡಿಇ 4–2 ಗೋಲುಗಳಿಂದ ಸಿಐಎಲ್‌ ಎಫ್‌ಸಿ ತಂಡವನ್ನು ಪರಾಭವಗೊಳಿಸಿತು.

ಎಡಿಇ ತಂಡದ ರಾಜ್‌ಕಿರಣ್‌ 19ನೇ ನಿಮಿಷದಲ್ಲಿ ಖಾತೆ ತೆರೆದರು. 21ನೇ ನಿಮಿಷದಲ್ಲಿ ಚೆಂಡನ್ನು ಗುರಿ ಮುಟ್ಟಿಸಿದ ಅರವಿಂದ್‌ ಕುಮಾರ್‌ 2–0 ಮುನ್ನಡೆಗೆ ಕಾರಣರಾದರು. 34ನೇ ನಿಮಿಷದಲ್ಲಿ ರಾಜ್‌ಕಿರಣ್‌ ಮತ್ತೊಮ್ಮೆ ಕಾಲ್ಚಳಕ ತೋರಿದರು. ಹೀಗಾಗಿ ತಂಡದ ಮುನ್ನಡೆ 3–0ಗೆ ಹೆಚ್ಚಿತು.

73ನೇ ನಿಮಿಷದಲ್ಲಿ ಸಿಐಎಲ್‌ ತಂಡದ ಕಾರ್ತಿಕ್‌ ಗೋಲು ಹೊಡೆದು ಮಿಂಚಿದರು. 84ನೇ ನಿಮಿಷದಲ್ಲಿ ವಶೀಕರಣ್‌ ಚೆಂಡನ್ನು ಗುರಿ ತಲುಪಿಸಿದ್ದರಿಂದ ಸಿಐಎಲ್‌ ತಂಡದ ಹಿನ್ನಡೆ 2–3ಕ್ಕೆ ತಗ್ಗಿತು. 89ನೇ ನಿಮಿಷದಲ್ಲಿ ಎಡಿಇ ತಂಡದ ಶ್ರೀಧರ್‌ ಗೋಲು ಗಳಿಸಿ ತಂಡದ ಸಂಭ್ರಮಕ್ಕೆ ಕಾರಣರಾದರು.

ಜವಾಹರ ಯೂನಿಯನ್‌ ಮತ್ತು ಬೆಂಗಳೂರು ಈಗಲ್ಸ್‌ ನಡುವಣ ದಿನದ ಇನ್ನೊಂದು ಪಂದ್ಯ ಗೋಲು ರಹಿತ ಡ್ರಾದಲ್ಲಿ ಅಂತ್ಯವಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT