ಬೆಂಗಳೂರು: ಶೇಕ್ ಮುಜೀಬ್ (48ನೇ) ಗಳಿಸಿದ ಗೋಲಿನ ನೆರವಿನಿಂದ ಎಂಇಜಿ ಅಂಡ್ ಸೆಂಟರ್ ಎಫ್‌ಸಿ ತಂಡವು ಮಂಗಳವಾರ ಬಿಡಿಎಫ್‌ಎ ಸೂಪರ್ ಡಿವಿಷನ್ ಫುಟ್‌ಬಾಲ್ ಲೀಗ್ ಚಾಂಪಿಯನ್‌ಷಿಪ್‌ನ ಪಂದ್ಯದಲ್ಲಿ 1–0ಯಿಂದ ರಿಯಲ್ ಚಿಕ್ಕಮಗಳೂರು ಎಫ್‌ಸಿ ತಂಡವನ್ನು ಮಣಿಸಿತು.
ಮತ್ತೊಂದು ಪಂದ್ಯದಲ್ಲಿ ಎಫ್‌ಸಿ ಬೆಂಗಳೂರು ಯುನೈಟೆಡ್ ತಂಡವು 5–0ಯಿಂದ ಯಂಗ್ ಚಾಲೆಂಜರ್ಸ್ ತಂಡವನ್ನು ಪರಾಭವಗೊಳಿಸಿತು. ಚೆಸ್ಟರ್ ಪೌಲ್ ಲಿಂಗ್ಡೋ (4, 15ನೇ) ಎರಡು ಗೋಲು ಗಳಿಸಿದರೆ, ರಿಭವ್ ಸರ್ದೇಸಾಯಿ (22ನೇ), ರಿಷಭ್ ಡೊಬ್ರಿಯಾಲ್ (47ನೇ), ಸೂರಜ್ ಹಡ್ಕೊಂಕರ್ (83) ತಲಾ ಒಂದು ಬಾರಿ ಚೆಂಡನ್ನು ಗುರಿ ಸೇರಿಸಿದರು.
ಎಂಎಫ್‌ಎಆರ್ ತಂಡಕ್ಕೆ ಗೆಲುವು: ಪ್ರತೀಕ್ ಸ್ವಾಮಿ ಅವರ ಆಟದ ಬಲದಿಂದ ಎಂಎಫ್‌ಎಆರ್ ಸ್ಟೂಡೆಂಟ್ಸ್ ಯೂನಿಯನ್ ಎಫ್‌ಸಿ ತಂಡವು 3–1ರಿಂದ ಎಎಸ್‌ಸಿ ಆ್ಯಂಡ್ ಸೆಂಟರ್ ಎಫ್‌ಸಿ ತಂಡವನ್ನು ಮಣಿಸಿತು.
ಸೋಮವಾರ ನಡೆದ ಪಂದ್ಯದಲ್ಲಿ ಎಂಎಫ್‌ಎಆರ್ ಪರ ಪ್ರತೀಕ್ ಸ್ವಾಮಿ (7, 37ನೇ) ಎರಡು ಗೋಲು ಗಳಿಸಿದರೆ, ಬಿ.ಎಸ್. ಮೃಣಾಲ್ ಮುತ್ತಣ್ಣ (16ನೇ) ಒಂದು ಬಾರಿ ಚೆಂಡನ್ನು ಗುರಿ ಸೇರಿಸಿದರು. ಎಎಸ್‌ಸಿ ಪರ ವಹೆಂಗಬಾಮ್ ನೀರಜ್ ಸಿಂಗ್ (49ನೇ) ಏಕೈಕ ಗೋಲು ತಂದಿತ್ತರು.
ಇನ್ನೊಂದು ಪಂದ್ಯದಲ್ಲಿ ಎಚ್‌ಎಎಲ್ ಎಫ್‌ಸಿ ತಂಡವು 5–0 ಯಿಂದ ಬೆಂಗಳೂರು ಡ್ರೀಮ್ ಯುನೈಟೆಡ್ ತಂಡವನ್ನು ಸೋಲಿಸಿತು. ಎಚ್‌ಎಎಲ್ ತಂಡದ ಆಂಡ್ರೊ ಗುರುಂಗ್ (57, 90+1ನೇ) ಎರಡು ಬಾರಿ ಚೆಂಡನ್ನು ಗುರಿ ಸೇರಿಸಿದರೆ, ಸೊರೊಖೈಬಮ್ ಕಫೊಯ್ ಸಿಂಗ್ (31ನೇ), ಎಸ್. ತೇಜಸ್ (39ನೇ) ಮತ್ತು ಆಸ್ಟಿನ್ ಜಿಜೊ (64ನೇ) ತಲಾ ಒಂದು ಗೋಲು ಗಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.