ಬೆಂಗಳೂರು: ರಿಯಲ್ ಚಿಕ್ಕಮಗಳೂರು ಎಫ್‌ಸಿ ತಂಡವು ಬಿಡಿಎಫ್‌ಎ ಸೂಪರ್ ಡಿವಿಷನ್ ಫುಟ್‌ಬಾಲ್ ಲೀಗ್ ಚಾಂಪಿಯನ್‌ಷಿಪ್‌ನ ಪಂದ್ಯದಲ್ಲಿ 5–1ರಿಂದ ಎಫ್‌ಸಿ ಅಗ್ನಿಪುತ್ರ ತಂಡವನ್ನು ಮಣಿಸಿತು.
ಶುಕ್ರವಾರ ನಡೆದ ಪಂದ್ಯದಲ್ಲಿ ಚಿಕ್ಕಮಗಳೂರು ತಂಡದ ಪರ ಗೌರವ್ (63, 71ನೇ) ಎರಡು ಗೋಲು ಗಳಿಸಿದರೆ, ವೀರೇಂದ್ರ ಸಿಂಗ್ ತಾಪಾ (35ನೇ), ನಿಶ್ಚಿತ್ ಸಿಂಗ್ ತಾಪಾ (37ನೇ), ಅಲೋಕ್ ಸಿಂಗ್ (84) ತಲಾ ಒಂದು ಬಾರಿ ಚೆಂಡನ್ನು ಗುರಿ ಸೇರಿಸಿದರು. ಲಾಲ್ನುನ್ಜಮಾ (13) ಅಗ್ನಿಪುತ್ರ ಪರವಾಗಿ ಏಕೈಕ ಗೋಲು ತಂದಿತ್ತು.
ಮತ್ತೊಂದು ಪಂದ್ಯದಲ್ಲಿ ಬೆಂಗಳೂರು ಡ್ರೀಮ್ ಯುನೈಟೆಡ್ ಎಫ್‌ಸಿ ತಂಡವು 1–0ಯಿಂದ ರೆಬೆಲ್ಸ್ ಎಫ್‌ಸಿ ತಂಡವನ್ನು ಪರಾಭವಗೊಳಿಸಿತು. ಎಂ.ಪಿ. ಮೊಹಮ್ಮದ್ ಅದಿಲ್ಸನ್ (55) ಯುನೈಟೆಡ್ ಪರ ಒಂದು ಗೋಲು ಗಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.