ಫಿಫಾ ಅಂಗಳದಲ್ಲಿ ತಮಿಳುನಾಡು ಬಾಲೆ

7

ಫಿಫಾ ಅಂಗಳದಲ್ಲಿ ತಮಿಳುನಾಡು ಬಾಲೆ

Published:
Updated:

ಸೋಚಿ: ತಮಿಳುನಾಡಿನ ಬಾಲಕಿ ನಥಾನಿಕಾ ಜಾನ್ ಕೆ ಅವರು ಗುರುವಾರ ರಾತ್ರಿ ಬ್ರೆಜಿಲ್‌ ಮತ್ತು ಕೋಸ್ಟರಿಕಾ ನಡುವಿನ ಪಂದ್ಯದಲ್ಲಿ ಅಧಿಕೃತ ಚೆಂಡನ್ನು ಹಿಡಿದು ಹೆಜ್ಜೆ ಹಾಕಿದಳು.
 
ತಮಿಳುನಾಡಿನ ನೀಲಗಿರಿಸ್ ಮೂಲದ ನಥಾನಿಕಾಗೆ ಈಗ 11 ವರ್ಷ. ಫುಟ್‌ಬಾಲ್ ಆಟಗಾರ್ತಿಯಾಗಿರುವ ನಥಾನಿಕಾ 'ಅಫೀಶಿಯಲ್ ಮ್ಯಾಚ್ ಬಾಲ್ ಕ್ಯಾರಿಯರ್' (ಒಎಂಬಿಸಿ) ಆದ ಮೊದಲ ಭಾರತೀಯ ಬಾಲಕಿ ಎಂಬ ಗೌರವಕ್ಕೆ ಪಾತ್ರಳಾಗಿದ್ದಾಳೆ.
 
ಈಚೆಗೆ ಬೆಂಗಳೂರಿನ ಬಾಲಕ ರಿಶಿ ತೇಜ್ ಬೆಲ್ಜಿಯಂ-ಪನಾಮ ನಡುವಿನ ಪಂದ್ಯದಲ್ಲಿ ಚೆಂಡನ್ನು ಹಿಡಿದು ತಂಡದೊಂದಿಗೆ ಅಂಗಳಕ್ಕೆ ಪ್ರವೇಶಿಸುವ ಗೌರವ ಪಡೆದಿದ್ದ. 
 
ಫಿಫಾ ವಿಶ್ವಕಪ್'ನ ಪ್ರತೀ ಪಂದ್ಯದ ಆರಂಭಕ್ಕೆ ಮಕ್ಕಳು ಅಂಪೈರ್ ಗಳ ಕೈಗೆ ಚೆಂಡನ್ನು ಹಸ್ತಾಂತರಿಸುತ್ತಾರೆ. ಇದಕ್ಕಾಗಿ ಏರ್ಪಡಿಸಿದ್ದ ಆಯ್ಕೆ ಸ್ಪರ್ಧೆಯಲ್ಲಿ ವಿಶ್ವದೆಲ್ಲೆಡೆಯಿಂದ ಒಟ್ಟು 1600 ಮಕ್ಕಳು ಆಯ್ಕೆಗೊಂಡಿದ್ದರು. ಅದರಲ್ಲಿ ಅಂತಿಮವಾಗಿ 64 ಮಕ್ಕಳನ್ನು ಊಳಿಸಿಕೊಳ್ಳಲಾಗಿತ್ತು.  

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !