6

ವುಕೊಜೆವಿಚ್‌ಗೆ ಉದ್ಯೋಗ ನೀಡಲು ಮುಂದಾದ ಉಕ್ರೇನ್‌

Published:
Updated:
ವುಕೊಜೆವಿಚ್‌

ಕೀವ್‌: ಕ್ರೊವೇಷ್ಯಾ ಫುಟ್‌ಬಾಲ್‌ ತಂಡದ ಸಹಾಯಕ ಕೋಚ್‌ ಹುದ್ದೆಯಿಂದ ವಜಾಗೊಂಡಿರುವ ಒಗ್‌ನೆಜೆನ್‌ ವುಕೊಜೆವಿಚ್‌ ಅವರಿಗೆ ಉದ್ಯೋಗ ನೀಡುವುದಾಗಿ ಉಕ್ರೇನ್‌ ಫುಟ್‌ಬಾಲ್‌ ಫೆಡರೇಷನ್‌ ಮಂಗಳವಾರ ತಿಳಿಸಿದೆ.

ಈ ಬಾರಿಯ ಟೂರ್ನಿಯ ಕ್ವಾರ್ಟರ್‌ ಫೈನಲ್‌ನಲ್ಲಿ ಕ್ರೊವೇಷ್ಯಾ ತಂಡ ಪೆನಾಲ್ಟಿ ಶೂಟೌಟ್‌ನಲ್ಲಿ ರಷ್ಯಾ ತಂಡವನ್ನು ಮಣಿಸಿತ್ತು. ಪಂದ್ಯ ಗೆದ್ದ ನಂತರ ವುಕೊಜೆವಿಚ್‌ ಮತ್ತು ಡಿಫೆಂಡರ್‌ ಡೊಮಗೊಜ್‌ ವಿಡಾ ಅವರು ‘ಉಕ್ರೇನ್‌ನ ಗತಕಾಲದ ವೈಭವ ಇಂದು ಮರುಕಳಿಸಿದೆ’ ಎಂದು ಹೇಳಿ ಸಂಭ್ರಮಿಸಿದ್ದರು.ಈ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿತ್ತು.

ವುಕೊಜೆವಿಚ್ ಅವರ ಹೇಳಿಕೆ ರಾಜಕೀಯ ಸಂಘರ್ಷಕ್ಕೆ ಪ್ರಚೋದನೆ ನೀಡುವಂತಿದೆ ಎಂದು ಹಲವರು ಟೀಕಿಸಿದ್ದರು. ಇದನ್ನು ಗಂಭೀರವಾಗಿ ಪರಿಗಣಿಸಿದ್ದ ಕ್ರೊವೇಷ್ಯಾ ಫುಟ್‌ಬಾಲ್‌ ಫೆಡರೇಷನ್‌ ಒಗ್‌ನೆಜೆನ್‌ ಅವರನ್ನು ಸಹಾಯಕ ಕೋಚ್‌ ಸ್ಥಾನದಿಂದ ಕೆಳಗಿಳಿಸಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಒಗ್‌ನೆಜೆನ್‌ ಮೇಲೆ ₹ 11 ಲಕ್ಷ ದಂಡ ವಿಧಿಸಿದ್ದ ಫಿಫಾ, ವಿಡಾ ಅವರಿಗೆ ಎಚ್ಚರಿಕೆ ನೀಡಿತ್ತು.

‘ಫಿಫಾ ವಿಧಿಸಿರುವ ದಂಡದ ಮೊತ್ತವನ್ನು ಒಗ್‌ನೆಜೆನ್‌ ಅವರಿಗೆ ನೀಡಲು ನಾವು ಸಿದ್ಧರಿದ್ದೇವೆ. ಒಗ್‌ನೆಜೆನ್‌ ಅವರ ಹೇಳಿಕೆಗೆ ರಾಜಕೀಯ ಬಣ್ಣ ಬಳಿಯಲಾಗುತ್ತಿದೆ. ಅವರು ಯಾವುದೇ ತಪ್ಪು ಮಾಡಿಲ್ಲ’ ಎಂದು ಉಕ್ರೇನ್‌ ಫುಟ್‌ಬಾಲ್‌ ಫೆಡರೇಷನ್‌ನ ಮುಖ್ಯಸ್ಥ ಆ್ಯಂಡ್ರಿಯ ಪ್ಯಾವೆಲ್ಕೊ ಹೇಳಿದ್ದಾರೆ.

ಬರಹ ಇಷ್ಟವಾಯಿತೆ?

  • 0

    Happy
  • 0

    Amused
  • 0

    Sad
  • 0

    Frustrated
  • 0

    Angry

Comments:

0 comments

Write the first review for this !