ಒಟ್ಟು 11 ಮಂದಿ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ. ಇವರಲ್ಲಿ ನಾಲ್ವರು ಆಟಗಾರರಿಗೆ ಅಮಾನತು ಶಿಕ್ಷೆ ವಿಧಿಸಲಾಗಿದೆ. ನ್ಯೂನೆಝ್ ಬಿಟ್ಟರೆ ಉಳಿದವರಿಗೆ ಶಿಕ್ಷೆಯ ಪ್ರಮಾಣ ಕಡಿಮೆಯಿದ್ದು, ಕೆಲವರಿಗೆ ನಾಲ್ಕು, ಕೆಲವರಿಗೆ ಮೂರು ಪಂದ್ಯಗಳ ನಿಷೇಧ ಹೇರಲಾಗಿದೆ. ನ್ಯೂನೆಝ್‌ಗೆ ₹17 ಲಕ್ಷ ದಂಡವನ್ನೂ ವಿಧಿಸಲಾಗಿದೆ. ಆರು ಮಂದಿಗೆ ₹13 ಲಕ್ಷ ಮತ್ತು ಅದಕ್ಕಿಂತ ಕಡಿಮೆ ದಂಡ ಹೇರಲಾಗಿದೆ.