ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉಸೇನ್‌ ಬೋಲ್ಟ್‌ ಜೊತೆ ವಲ್ಲೆಟ್ಟಾ ಕ್ಲಬ್ ಒಪ್ಪಂದ?

Last Updated 16 ಅಕ್ಟೋಬರ್ 2018, 13:27 IST
ಅಕ್ಷರ ಗಾತ್ರ

ಸಿಡ್ನಿ: ಜಮೈಕಾದ ಓಟಗಾರ ಉಸೇನ್‌ ಬೋಲ್ಟ್‌ ಯೂರೋಪ್‌ನ ಚಾಂಪಿಯನ್ಸ್‌ ಲೀಗ್‌ ಫುಟ್‌ಬಾಲ್‌ ಟೂರ್ನಿಯಲ್ಲಿ ಆಡುವ ಸಾಧ್ಯತೆ ಇದೆ.

ಈ ಲೀಗ್‌ನಲ್ಲಿ ಆಡುವ ಮಾಲ್ಟಾದ ವಲ್ಲೆಟ್ಟಾ ಫುಟ್‌ಬಾಲ್‌ ಕ್ಲಬ್‌, ಬೋಲ್ಟ್‌ ಜೊತೆ ಎರಡು ವರ್ಷಗಳ ಅವಧಿಗೆ ಒಪ್ಪಂದ ಮಾಡಿಕೊಳ್ಳಲು ಉತ್ಸುಕವಾಗಿದೆ ಎಂದು ಸಿಡ್ನಿಯ ಡೈಲಿ ಟೆಲಿಗ್ರಾಫ್‌ ಪತ್ರಿಕೆ ವರದಿ ಮಾಡಿದೆ.

ಒಲಿಂಪಿಕ್ಸ್‌ನಲ್ಲಿ ಎಂಟು ಚಿನ್ನದ ಪದಕಗಳನ್ನು ಗೆದ್ದ ಹಿರಿಮೆ ಹೊಂದಿರುವ ಬೋಲ್ಟ್‌, ಆಸ್ಟ್ರೇಲಿಯಾದ ಸೆಂಟ್ರಲ್‌ ಕೋಸ್ಟ್‌ ಮರಿನರ್ಸ್‌ ಕ್ಲಬ್‌ ಪರ ‘ಎ’ ಲೀಗ್‌ನಲ್ಲಿ ಆಡಿದ್ದರು.

ಹೋದ ಶುಕ್ರವಾರ ನಡೆದಿದ್ದ ಮಾಕಾರ್ಥರ್‌ ಸೌತ್‌ ವೆಸ್ಟ್‌ ಯುನೈಟೆಡ್‌ ಎದುರಿನ ಪಂದ್ಯದಲ್ಲಿ ಅವರು ಎರಡು ಗೋಲು ದಾಖಲಿಸಿ ಮಿಂಚಿದ್ದರು.

ವಲ್ಲೆಟ್ಟಾ ಕ್ಲಬ್‌ ಸೇರುವ ಕುರಿತು ಬೋಲ್ಟ್‌ ಇನ್ನೂ ಅಂತಿಮ ನಿರ್ಧಾರ ಪ್ರಕಟಿಸಿಲ್ಲ.

ಮೂಲಗಳ ಪ್ರಕಾರ ಮರಿನರ್ಸ್‌ ಕ್ಲಬ್‌ ₹ 1.54 ಕೋಟಿ ನೀಡಿ ಬೋಲ್ಟ್ ಅವರನ್ನು ತಂಡದಲ್ಲಿ ಉಳಿಸಿಕೊಳ್ಳಲು ತೀರ್ಮಾನಿಸಿದ್ದು, ಆಸ್ಟ್ರೇಲಿಯಾ ಫುಟ್‌ಬಾಲ್‌ ಫೆಡರೇಷನ್‌ನ ಅನುಮತಿಗಾಗಿ ಕಾಯುತ್ತಿದೆ ಎನ್ನಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT