ಮೊದಲ ಪಂದ್ಯದಲ್ಲೇ ಎರಡು ಗೋಲು, ಫುಟ್‌ಬಾಲ್‌ನಲ್ಲಿಯೂ ಮಿಂಚಿದ ಬೋಲ್ಟ್

7

ಮೊದಲ ಪಂದ್ಯದಲ್ಲೇ ಎರಡು ಗೋಲು, ಫುಟ್‌ಬಾಲ್‌ನಲ್ಲಿಯೂ ಮಿಂಚಿದ ಬೋಲ್ಟ್

Published:
Updated:

ಸಿಡ್ನಿ: ವೇಗದ ಓಟಗಾರ, ಜಮೈಕಾದ ಉಸೇನ್‌ ಬೋಲ್ಟ್‌ ವೃತ್ತಿಪರ ಫುಟ್‌ಬಾಲ್‌ನ ಮೊದಲ ಪಂದ್ಯದಲ್ಲಿ ಎರಡು ಗೋಲುಗಳನ್ನು ಬಾರಿಸಿ ಮಿಂಚಿದ್ದಾರೆ.
ಸೆಂಟ್ರಲ್ ಕೋಸ್ಟ್ ಮರೈನ್ಸ್‌ ತಂಡದ ಪರವಾಗಿ ಮೈದಾನಕ್ಕಿಳಿದಿರುನ ಬೋಲ್ಟ್, ಮಕಾರ್ಥರ್ ಸೌತ್ ವೆಸ್ಟ್ ತಂಡದ ಎದುರಿನ ಸೌಹಾರ್ದ ಪಂದ್ಯದಲ್ಲಿ ಈ ಸಾಧನೆ ಮಾಡಿದ್ದಾರೆ.  ಮಕಾರ್ಥರ್ ಸೌತ್ ವೆಸ್ಟ್ ತಂಡಕ್ಕೆ ಗೋಲು ಬಾರಿಸಲು ಅವಕಾಶ ನೀಡದಂತೆ ಜಿದ್ದಿನಿಂದ ಆಡಿದ ಸೆಂಟ್ರಲ್ ಕೋಸ್ಟ್ ಮರೈನ್ಸ್‌ ತಂಡ  4 ಗೋಲುಗಳಿಂದ ಪಂದ್ಯ ಗೆದ್ದುಕೊಂಡಿದೆ.

ಮಿಂಚಿನ ವೇಗದ ಓಟಗಾರ ಬೋಲ್ಟ್  ಒಲಿಂಪಿಕ್ಸ್ ನಲ್ಲಿ 8 ಬಾರಿ ಚಿನ್ನ ಗೆದ್ದಿದ್ದು, 2017ರಲ್ಲಿ ನಿವೃತ್ತಿ ಹೊಂದಿದ್ದರು.

ಪ್ರಸ್ತುತ ಫುಟ್‌ಬಾಲ್‌ ಪಂದ್ಯದಲ್ಲಿ 57 ಮತ್ತು 68ನೇ ನಿಮಿಷದಲ್ಲಿ ಗೋಲು ದಾಖಲಿಸಿದ ಬೋಲ್ಟ್, ಮೈದಾನದಲ್ಲಿ ಕುಣಿದದ್ದೂ ಕ್ರೀಡಾಭಿಮಾನಿಗಳ ಗಮನ ಸೆಳೆಯಿತು.
ಪಂದ್ಯವನ್ನಾಡುವಾಗ ಕೆಲವು ತಪ್ಪುಗಳಾಗಿವೆ. ಆದರೆ ಹೀಗೊಂದು ಅವಕಾಶ ಸಿಕ್ಕಿದ್ದು ಖುಷಿ ಮತ್ತು ಹೆಮ್ಮೆ ಅನುಭವಿಸುವಂತಾಗಿದೆ ಎಂದು ಪಂದ್ಯದ ನಂತರ ಮಾಧ್ಯಮದವರೊಡನೆ ಮಾತನಾಡಿದ ಬೋಲ್ಟ್ ಹೇಳಿದ್ದಾರೆ.
 

ಬರಹ ಇಷ್ಟವಾಯಿತೆ?

 • 7

  Happy
 • 0

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !