ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಏಷ್ಯನ್ ಫುಟ್‌ಬಾಲ್‌ ಚಾಂಪಿಯನ್‌ಷಿಪ್‌ನಲ್ಲಿ ವಿಎಆರ್ ಬಳಕೆ

Last Updated 24 ಆಗಸ್ಟ್ 2020, 15:59 IST
ಅಕ್ಷರ ಗಾತ್ರ

ಕ್ವಾಲಾಲಂಪುರ: ಮುಂದಿನ ತಿಂಗಳಲ್ಲಿ ನಡೆಯಲಿರುವ ಏಷ್ಯನ್ ಫುಟ್‌ಬಾಲ್ ಚಾಂಪಿಯನ್ಸ್ ಲೀಗ್‌ನಲ್ಲಿ ವಿಎಆರ್‌ (ವಿಡಿಯೊ ಸಹಾಯಕ ರೆಫರಿ) ಪದ್ಧತಿಯನ್ನು ಅಳವಡಿಸಲಾಗುವುದು ಎಂದು ಏಷ್ಯನ್ ಫುಟ್‌ಬಾಲ್ ಫೆಡರೇಷನ್ ಸೋಮವಾರ ತಿಳಿಸಿದೆ.

ಲೀಗ್‌ನ ಕ್ವಾರ್ಟರ್‌ ಫೈನಲ್ ಹಂತದ ‍ಪಂದ್ಯಗಳಿಂದ ಈ ತಂತ್ರಜ್ಞಾನವನ್ನು ಬಳಸಲಾಗುವುದು. ಈ ಮೂಲಕ ಪಂದ್ಯಗಳ ತೀರ್ಪಿನ ವಿಷಯದಲ್ಲಿ ತಂತ್ರಜ್ಞಾನದ ಸಂಪೂರ್ಣ ಲಾಭ ಪಡೆಯಲು ಫೆಡರೇಷನ್ ಮುಂದಾಗಲಿದೆ ಎಂದು ಹೇಳಲಾಗಿದೆ.

ಪಶ್ಚಿಮ ವಲಯದ ತಂಡಗಳ ಕ್ವಾರ್ಟರ್ ಫೈನಲ್ ಪಂದ್ಯಗಳು ಸೆಪ್ಟೆಂಬರ್ 30ರಿಂದ ನಡೆಯಲಿವೆ. ಪೂರ್ವ ವಲಯದ ಎಂಟರ ಘಟ್ಟದ ಪಂದ್ಯಗಳು ನವೆಂಬರ್ 25ರಂದು ಆರಂಭವಾಗಲಿವೆ. ಒಂದೇ ಲೆಗ್‌ನ ಫೈನಲ್ ಪಂದ್ಯ ಡಿಸೆಂಬರ್ ಐದರಂದು ನಡೆಯಲಿದೆ.

ಪೂರ್ವ ವಲಯದ ಜಪಾನ್‌ನಿಂದ ಹಿಡಿದು ಪಶ್ಚಿಮ ವಲಯದ ಸೌದಿ ಅರೆಬಿಯಾ ವರೆಗಿನ ಒಟ್ಟು 32 ತಂಡಗಳು ಚಾಂಪಿಯನ್‌ಷಿಪ್‌ನಲ್ಲಿ ಪಾಲ್ಗೊಳ್ಳಲಿವೆ. ಮಾರ್ಚ್‌ನಲ್ಲಿ ನಡೆಯಬೇಕಾಗಿದ್ದ ಟೂರ್ನಿಯನ್ನು ಕೊರೊನಾ ವೈರಾಣು ಹಾವಳಿಯಿಂದಾಗಿ ಮುಂದೂಡಲಾಗಿತ್ತು.

ಪ್ರೀಮಿಯರ್ ಲೀಗ್‌ ಮತ್ತು 2018ರ ವಿಶ್ವಕಪ್ ಟೂರ್ನಿಯಲ್ಲಿ ವಿಎಆರ್ ಪದ್ಧತಿಯನ್ನು ಅಳವಡಿಸಲಾಗಿತ್ತು. ಆದರೆ ಕೆಲವು ತೀರ್ಪುಗಳ ಬಗ್ಗೆ ವಿವಾದ ಉಂಟಾಗಿತ್ತು. 2019ರ ಏಷ್ಯಾ ಕಪ್‌ ಟೂರ್ನಿಯಲ್ಲಿ ವಿಎಆರ್ ಪದ್ಧತಿಯನ್ನು ಏಷ್ಯಾದಲ್ಲಿ ಮೊದಲ ಬಾರಿ ಬಳಸಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT