‘ಭಾರತದ ಪೆಲೆ’ ಕಣ್ಣನ್ ಅಂತಿಮಯಾತ್ರೆ ಇಂದು

ಶುಕ್ರವಾರ, ಮೇ 24, 2019
33 °C

‘ಭಾರತದ ಪೆಲೆ’ ಕಣ್ಣನ್ ಅಂತಿಮಯಾತ್ರೆ ಇಂದು

Published:
Updated:
Prajavani

ಬೆಂಗಳೂರು: ಹಿರಿಯ ಫುಟ್‌ಬಾಲ್ ಆಟಗಾರ ಪೂಂಗಂ ಕಣ್ಣನ್‌ ಅವರ ಪಾರ್ಥೀವ ಶರೀರವನ್ನು ಬುಧವಾರ ರಾತ್ರಿ ಬೆಂಗಳೂರಿಗೆ ತರಲಾಗುತ್ತಿದೆ. ಗೌತಮಪುರಂದಲ್ಲಿರುವ ಅವರ ಮನೆಯ ಹತ್ತಿರದ ಫುಟ್‌ಬಾಲ್ ಕ್ರೀಡಾಂಗಣದಲ್ಲಿ ಅಂತಿಮ ದರ್ಶನಕ್ಕೆ ಇಡಲಾಗಿದೆ. ಮೃತರ ಅಂತಿಮ ವಿಧಿವಿಧಾನಗಳು ಗುರುವಾರ ಮಧ್ಯಾಹ್ನ ನೆರವೇರಲಿವೆ ಎಂದು ಕುಟುಂಬದ ಸದಸ್ಯರು ತಿಳಿಸಿದ್ದಾರೆ. 

ಅವರು ಭಾರತದ ಪೆಲೆ ಎಂದು ಪ್ರಸಿದ್ಧರಾಗಿದ್ದರು. ಫಾರ್ವರ್ಡ್ ಆಟಗಾರರಾಗಿದ್ದ ಕಣ್ಣನ್‌ ಭಾರತದ ಪರ 14 ಪಂದ್ಯಗಳನ್ನು ಆಡಿದ್ದರು. ಮೋಹನ್ ಬಾಗನ್‌ ಪರ ಎಂಟು ವರ್ಷ ಮತ್ತು ಈಸ್ಟ್ ಬೆಂಗಾಲ್ ತಂಡದಲ್ಲಿ ಎರಡು ವರ್ಷ ಆಡಿದ್ದರು. ಹೋದ ಭಾನುವಾರ ಕೋಲ್ಕತ್ತದಲ್ಲಿ ನಿಧನರಾದರು.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !