ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಾಲಾದೇವಿ ಹೆಜ್ಜೆ ಅನುಸರಿಸಲಿರುವ ಕಿರಿಯರು: ಗೋಲ್‌ಕೀಪರ್‌ ಅದಿತಿ ಅಭಿಮತ

ಭಾರತ ಮಹಿಳಾ ಫುಟ್‌ಬಾಲ್‌ ತಂಡದ ಗೋಲ್‌ಕೀಪರ್‌ ಅದಿತಿ ಅಭಿಮತ
Last Updated 28 ಜೂನ್ 2020, 12:27 IST
ಅಕ್ಷರ ಗಾತ್ರ

ನವದೆಹಲಿ: ‘ದೇಶದಲ್ಲಿ ಫುಟ್‌ಬಾಲ್‌ ಪ್ರಗತಿ ಕಾಣುತ್ತಿದೆ. ಮಹಿಳಾ ತಂಡದ ಬಹಳಷ್ಟು ಆಟಗಾರ್ತಿಯರು ಬಾಲಾ ದೇವಿ ಅವರ ಸಾಧನೆಯ ಹೆಜ್ಜೆಗಳನ್ನು ಅನುಸರಿಸಲಿದ್ದಾರೆ’ ಎಂದು ಭಾರತ ತಂಡದ ಗೋಲ್‌ಕೀಪರ್‌ ಅದಿತಿ ಚೌಹಾನ್‌ ಅಭಿಪ್ರಾಯಪಟ್ಟಿದ್ದಾರೆ.

2021ರಲ್ಲಿ ಫಿಫಾ 17 ವರ್ಷದೊಳಗಿನವರ ವಿಶ್ವಕಪ್‌ ಹಾಗೂ 2022ರ ಎಎಫ್‌ಸಿ ಏಷ್ಯಾಕಪ್‌ ಟೂರ್ನಿಗಳಿಗೆ ದೇಶ ಆತಿಥ್ಯ ವಹಿಸಲಿರುವುದರಿಂದ ಭಾರತದಲ್ಲಿ ಮಹಿಳಾ ಫುಟ್‌ಬಾಲ್‌ಗೆ ಉತ್ತೇಜನ ಸಿಗುವ ನಿರೀಕ್ಷೆಯಿದೆ.

ಬಾಲಾ ದೇವಿ ಅವರು ಕಳೆದ ವರ್ಷ ಯೂರೋಪ್‌ನ ಪ್ರಮುಖ ವೃತ್ತಿಪರ ಲೀಗ್‌ ಆಡುವ ಕ್ಲಬ್‌ವೊಂದಕ್ಕೆ ಸಹಿ ಹಾಕುವ ಮೂಲಕ ಈ ಗೌರವಕ್ಕೆ ಪಾತ್ರರಾದ ಭಾರತದ ಮೊದಲ ಫುಟ್‌ಬಾಲ್‌ ಆಟಗಾರ್ತಿ ಎನಿಸಿಕೊಂಡಿದ್ದಾರೆ. ಗ್ಲಾಸ್ಗೊ ಮೂಲದ ಸ್ಕಾಟಿಷ್‌ ಪ್ರೀಮಿಯರ್‌ ಲೀಗ್‌ನ ರೇಂಜರ್ಸ್‌ ತಂಡದ ಪರ ಅವರು ಆಡುತ್ತಿದ್ದಾರೆ.

‘ಹೆಚ್ಚಿನ ಆಟಗಾರ್ತಿಯರು ಬಾಲಾ ದೇವಿ ಅವರ ರೀತಿ ಮಾನ್ಯತೆ ಪಡೆಯಬೇಕು. ಬಲಿಷ್ಠ ಎದುರಾಳಿಗಳ ಎದುರು ಆಡುವುದನ್ನು ಕಲಿಯಬೇಕು. ಕಿರಿಯರಿಗೆ ಹೆಚ್ಚಿನ ಅವಕಾಶಗಳು ಸಿಗುತ್ತಿರುವ ಕಾರಣ ಖಂಡಿತವಾಗಿಯೂ ಅವರು ಬಾಲಾ ದೇವಿ ಅವರ ಹೆಜ್ಜೆ ಅನುಸರಿಸಲಿದ್ದಾರೆ’ ಎಂದು ಅದಿತಿ ಅವರು ಎಐಎಫ್‌ಎಫ್‌ ಬಿಡುಗಡೆ ಮಾಡಿರುವ ಹೇಳಿಕೆಯಲ್ಲಿ ತಿಳಿಸಿದ್ದಾರೆ.

‘ಬಾಲಾ ಒಂದು ಮುತ್ತು ಇದ್ದಂತೆ. ಅವರು ರೇಂಜರ್ಸ್‌ ಕ್ಲಬ್‌ ಸೇರಿಕೊಂಡಿದ್ದು ಅದ್ಭುತ’ ಎಂದೂ ಅದಿತಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

2015ರಿಂದ 2018ರ ಅವಧಿಯಲ್ಲಿ ಇಂಗ್ಲೆಂಡ್‌ನಲ್ಲಿ ಶಿಕ್ಷಣ ಪಡೆಯುತ್ತಿದ್ದ ವೇಳೆ ಅದಿತಿ ಕೂಡ ಅಲ್ಲಿಯ ವೆಸ್ಟ್‌ ಹ್ಯಾಮ್‌ ಕ್ಲಬ್‌ ಪರ ಆಡಿದ್ದರು. ಆದರೆ ಅದು ಪ್ರಮುಖ ಟೂರ್ನಿಯಾಗಿರಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT