ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗೋಲು ಮಳೆ ಸುರಿಸಿದ ಭಾರತ; ಕೊಚ್ಚಿಹೋದ ಪಾಕ್

19 ವರ್ಷದೊಳಗಿನ ಮಹಿಳೆಯರ ಫುಟ್‌ಬಾಲ್‌: ಐದು ಗೋಲು ಗಳಿಸಿದ ರೇಣು
Last Updated 24 ಅಕ್ಟೋಬರ್ 2018, 15:25 IST
ಅಕ್ಷರ ಗಾತ್ರ

ಚೊನ್‌ಬುರಿ, ಥಾಯ್ಲೆಂಡ್‌: ಪಾಕಿಸ್ತಾನ ತಂಡದ ಮೇಲೆ ಗೋಲಿನ ಮಳೆ ಸುರಿದ ಭಾರತ ತಂಡದವರು 19 ವರ್ಷದೊಳಗಿನ ಮಹಿಳೆಯರ ಎಎಫ್‌ಸಿ ಫುಟ್‌ಬಾಲ್ ಚಾಂಪಿಯನ್‌ಷಿಪ್‌ನ ಅರ್ಹತಾ ಸುತ್ತಿನ ಪಂದ್ಯದಲ್ಲಿ ಭರ್ಜರಿ ಜಯಿಸಿತು.

ಬುಧವಾರ ಇಲ್ಲಿ ನಡೆದ ಪಂದ್ಯದಲ್ಲಿ ರೇಣು ಗಳಿಸಿದ ಐದು ಗೋಲುಗಳ ನೆರವಿನಿಂದ ಭಾರತ 18 ಗೋಲು ಗಳಿಸಿದರೆ ಪಾಕಿಸ್ತಾನ ಒಂದೂ ಗೋಲು ಗಳಿಸಲಿಲ್ಲ.

ಏಕಪಕ್ಷೀಯವಾಗಿದ್ದ ಪಂದ್ಯದ ಮೊದಲಾರ್ಧದಲ್ಲಿ ಭಾರತ 9–0 ಮುನ್ನಡೆ ಗಳಿಸಿತ್ತು. ದ್ವಿತೀಯಾರ್ಧದಲ್ಲಿ ಬದಲಿ ಆಟಗಾರ್ತಿಯಾಗಿ ಕಣಕ್ಕೆ ಇಳಿದ ರೇಣು 52, 54, 75, 89 ಮತ್ತು 90ನೇ ನಿಮಿಷದಲ್ಲಿ ಚೆಂಡನ್ನು ಗುರಿ ಸೇರಿಸಿ ಮಿಂಚಿದರು.

ಎರಡನೇ ನಿಮಿಷದಲ್ಲಿ ಮನಿಷಾ ಅವರ ಮೂಲಕ ಭಾರತ ಖಾತೆ ತೆರೆಯಿತು. ಇದರ ಬೆನ್ನಲ್ಲೇ ದೇವನೇತಾ (9ನೇ ನಿಮಿಷ) ಗೋಲು ಗಳಿಸಿದರು. 25ನೇ ನಿಮಿಷದಲ್ಲಿ ಮನಿಷಾ ಮತ್ತೊಂದು ಗೋಲು ಗಳಿಸಿದರೆ, ದೇವನೇತಾ 25ನೇ ನಿಮಿಷದಲ್ಲಿ ಮತ್ತು ದಯಾದೇವಿ 27ನೇ ನಿಮಿಷದಲ್ಲಿ ಗುರಿ ಮುಟ್ಟಿದರು. 30ನೇ ನಿಮಿಷದಲ್ಲಿ ಪಾಕಿಸ್ತಾನದ ಗೋಲ್‌ಕೀಪರ್‌ ಭಾರತಕ್ಕೆ ‘ಉಡುಗೊರೆ’ ನೀಡಿದರು. ಇಂಜುರಿ ಸಮಯದಲ್ಲಿ ಪಾಪ್‌ಕಿ ದೇವಿ ಮತ್ತು ನಾಯಕಿ ಜಪಮಣಿ ಕೂಡ ಮಿಂಚಿದರು.

ದ್ವಿತೀಯಾರ್ಧದಲ್ಲಿ ಮನೀಷಾ (47ನೇ ನಿ), ದಯಾದೇವಿ (56ನೇ ನಿ), ರೋಜಾದೇವಿ (59ನೇ ನಿ) ಮತ್ತು ಸೌಮಿತಾ ಗುಗುಲೊತ್‌ (77ನೇ ನಿ) ಕೂಡ ಗೋಲು ತಂದುಕೊಟ್ಟರು.

‘ಇದು ಅತ್ಯಮೋಘ ಜಯ. ಇಂಥ ಪಂದ್ಯಗಳು ತಂಡದ ಆಟಗಾರ್ತಿಯರಲ್ಲಿ ಭರವಸೆ ತುಂಬಲು ನೆರವಾಗಲಿವೆ. ಮುಂದಿನ ಪಂದ್ಯಗಳಲ್ಲಿ ತಂಡ ಇನ್ನಷ್ಟು ಪರಿಣಾಮಕಾರಿ ಆಟವಾಡಲಿದೆ’ ಎಂದು ಭಾರತ ತಂಡದ ಕೋಚ್‌ ಅಲೆಕ್ಸ್ ಆ್ಯಂಬ್ರೋಸ್‌ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT