ಕೆಎಸ್‌ಎಫ್‌ಎ ಮಹಿಳಾ ಫುಟ್‌ಬಾಲ್‌ ಟೂರ್ನಿ: ಬಿಯುಎಫ್‌ಸಿಗೆ ಪ್ರಶಸ್ತಿ

4
ಮಂಗಳೂರು ಎಫ್‌ಸಿ ರನ್ನರ್ಸ್‌ ಅಪ್‌

ಕೆಎಸ್‌ಎಫ್‌ಎ ಮಹಿಳಾ ಫುಟ್‌ಬಾಲ್‌ ಟೂರ್ನಿ: ಬಿಯುಎಫ್‌ಸಿಗೆ ಪ್ರಶಸ್ತಿ

Published:
Updated:
Deccan Herald

ಬೆಂಗಳೂರು: ಅಮೂಲ್ಯ ಅವರ ಕಾಲ್ಚಳಕದಲ್ಲಿ ಅರಳಿದ ಏಕೈಕ ಗೋಲಿನ ನೆರವಿನಿಂದ ಬಿಯುಎಫ್‌ಸಿ ತಂಡ ಕೆಎಸ್‌ಎಫ್‌ಎ ಇಂಪೆಟಸ್‌ ಟ್ರೋಫಿ ಮಹಿಳಾ ಫುಟ್‌ಬಾಲ್‌ ಟೂರ್ನಿಯಲ್ಲಿ ಪ್ರಶಸ್ತಿ ಗೆದ್ದಿದೆ.

ಅಶೋಕನಗರದಲ್ಲಿರುವ ಬೆಂಗಳೂರು ಫುಟ್‌ಬಾಲ್‌ ಕ್ರೀಡಾಂಗಣದಲ್ಲಿ ಸೋಮವಾರ ನಡೆದ ಫೈನಲ್‌ನಲ್ಲಿ ಬಿಯುಎಫ್‌ಸಿ 1–0 ಗೋಲಿನಿಂದ ಮಂಗಳೂರು ಎಫ್‌ಸಿ ತಂಡವನ್ನು ಪರಾಭವಗೊಳಿಸಿತು.

ಆರಂಭದಿಂದಲೇ ಆಕ್ರಮಣಕಾರಿ ಆಟಕ್ಕೆ ಮುಂದಾದ ಬಿಯುಎಫ್‌ಸಿ ತಂಡ ಏಳನೇ ನಿಮಿಷದಲ್ಲಿ ಖಾತೆ ತೆರೆಯಿತು. ಸಹ ಆಟಗಾರ್ತಿ ಒದ್ದು ಕಳುಹಿಸಿದ ಚೆಂಡಿನ ಮೇಲೆ ನಿಯಂತ್ರಣ ಸಾಧಿಸಿದ ಅಮೂಲ್ಯ ಅದನ್ನು ಕಣ್ಣೆವೆ ಮುಚ್ಚಿ ತೆರೆಯುವುದರೊಳಗೆ ಗುರಿ ಮುಟ್ಟಿಸಿ ತಂಡದ ಸಂಭ್ರಮಕ್ಕೆ ಕಾರಣರಾದರು.

ನಂತರದ ಅವಧಿಯಲ್ಲಿ ಉಭಯ ತಂಡಗಳು ಜಿದ್ದಾಜಿದ್ದಿನ ಪೈಪೋಟಿ ನಡೆಸಿದವು. ಹೀಗಿದ್ದರೂ ಯಾರಿಗೂ ಗೋಲು ದಾಖಲಿಸಲು ಆಗಲಿಲ್ಲ.

ಮಂಗಳೂರು ಎಫ್‌ಸಿ ತಂಡದ ಅಕ್ಷತಾ ಅವರು ಟೂರ್ನಿಯ ಉತ್ತಮ ಗೋಲ್‌ಕೀಪರ್‌ ಪ್ರಶಸ್ತಿಗೆ ಭಾಜನರಾದರು. ಕ್ರೈಸ್ಟ್‌ ವಿಶ್ವವಿದ್ಯಾಲಯದ ಸುಷ್ಮಿತಾ ಫರ್ನಾಂಡೀಸ್‌ (ಉತ್ತಮ ಡಿಫೆಂಡರ್‌), ಪರಿಕ್ರಮ ತಂಡದ ತಾನ್ವಿ ಹೊನ್‌ (ಉತ್ತಮ ಮಿಡ್‌ಫೀಲ್ಡರ್‌), ಬಿಯುಎಫ್‌ಸಿ ತಂಡದ ಪರೋಮಿತಾ (ಉತ್ತಮ ಫಾರ್ವರ್ಡ್‌) ಪ್ರಶಸ್ತಿಗಳನ್ನು ಪಡೆದರು.

ಶೈನಿಂಗ್‌ ಸ್ಟಾರ್‌ ತಂಡದ ರಫಿಯಾ ಫಾತೀಮಾ, ಬಿಯುಎಫ್‌ಸಿಯ ಸುಸಾನ್‌, ಮಿಸಾಕ ಯುನೈಟೆಡ್‌ನ ಸುಧಾ, ಹ್ಯಾಪನರ್ಸ್‌ ಫೌಂಡೇಷನ್‌ನ ಲಿಲ್ಲಿ, ಎಸ್‌ಎಫ್‌ಎಸ್‌ನ ತಾನಿಯಾ ಮತ್ತು ಅಕ್ಷರ ಮೊಂಟೆಸರಿ ಅಕಾಡೆಮಿಯ ಶಾರದಾ ಅವರು ಉದಯೋನ್ಮುಖ ಆಟಗಾರ್ತಿ ಪ್ರಶಸ್ತಿಗಳನ್ನು ತಮ್ಮದಾಗಿಸಿಕೊಂಡರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !