ಫಿಫಾ: ಡೆನ್ಮಾರ್ಕ್‌ ತಂಡಕ್ಕೆ ಅಗ್ನಿಪರೀಕ್ಷೆ

7
ಸಿ ಗುಂಪಿನ ಪಂದ್ಯ: ಬಲಿಷ್ಠ ಫ್ರಾನ್ಸ್‌ ವಿರುದ್ಧ ಸೆಣಸು

ಫಿಫಾ: ಡೆನ್ಮಾರ್ಕ್‌ ತಂಡಕ್ಕೆ ಅಗ್ನಿಪರೀಕ್ಷೆ

Published:
Updated:
ಫ್ರಾನ್ಸ್ ತಂಡದ ಮಿಡ್‌ಫೀಲ್ಡರ್‌ ಥಾಮಸ್‌ ಲೆಮರ್‌ (ಎಡ) ಹಾಗೂ ಕೈಲಿಯಾನ್‌ ಬಾಪೆ ಅವರು ಅಭ್ಯಾಸ ನಡೆಸಿದರು   ಎಎಫ್‌ಪಿ ಚಿತ್ರ

ಮಾಸ್ಕೊ : ಪ್ರೀ ಕ್ವಾರ್ಟ ರ್‌ಫೈನಲ್‌ ಹಂತಕ್ಕೆ ಪ್ರವೇಶ ಪಡೆಯಲು ಡೆನ್ಮಾರ್ಕ್‌ ತಂಡವು ಮಂಗಳವಾರ ನಡೆಯುವ ನಿರ್ಣಾಯಕ ಪಂದ್ಯದಲ್ಲಿ ಗೆಲ್ಲಲೇಬೇಕಾದ ಒತ್ತಡಕ್ಕೆ ಸಿಲುಕಿದೆ. 

ಇಲ್ಲಿನ ಕಜನ್‌ ಅರೆನಾದಲ್ಲಿ ನಡೆಯುವ ಸಿ ಗುಂಪಿನ ಪಂದ್ಯದಲ್ಲಿ ಬಲಿಷ್ಠ ಫ್ರಾನ್ಸ್‌ ಹಾಗೂ ಡೆನ್ಮಾರ್ಕ್‌ ತಂಡಗಳು ಸೆಣಸಲಿವೆ. 

ಫ್ರಾನ್ಸ್‌ ತಂಡವು ಎರಡು ಪಂದ್ಯಗಳನ್ನು ಗೆದ್ದು ಈಗಾಗಲೇ ಹದಿನಾರರ ಘಟ್ಟಕ್ಕೆ ತಲುಪಿದೆ. ತನ್ನ ಮೊದಲ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ 2–1ರಿಂದ ಹಾಗೂ ಎರಡನೇ ಪಂದ್ಯದಲ್ಲಿ 1–0ಯಿಂದ ಪೆರು ವಿರುದ್ಧ ಗೆದ್ದಿರುವ ಫ್ರಾನ್ಸ್‌, ಈ ಪಂದ್ಯದಲ್ಲೂ ಗೆಲುವು ಸಾಧಿಸುವ ವಿಶ್ವಾಸದಲ್ಲಿದೆ. 

ಇನ್ನೂ ಆಡಿದ ಎರಡು ಪಂದ್ಯಗಳಲ್ಲಿ ಒಂದರಲ್ಲಿ ಡೆನ್ಮಾರ್ಕ್‌ ತಂಡ ಗೆದ್ದಿದೆ. ಆಸ್ಟ್ರೇಲಿಯಾ ವಿರುದ್ಧದ ಇನ್ನೊಂದು ಪಂದ್ಯವು ಡ್ರಾದಲ್ಲಿ ಅಂತ್ಯವಾಗಿತ್ತು. 

ಫ್ರಾನ್ಸ್ ತಂಡದ ರಕ್ಷಣಾ, ಮಂಚೂಣಿ ಹಾಗೂ ಮಿಡ್‌ಫೀಲ್ಡ್‌ ವಿಭಾಗಗಳು ಬಲಿಷ್ಠವಾಗಿವೆ. ಕೈಲಿಯಾನ್‌ ಬಾಪೆ, ಆ್ಯಂಟೋನಿ ಗ್ರಿಜ್‌ಮನ್‌ ಹಾಗೂ ಬೆಹಿಚ್‌ ಅವರು ಹಿಂದಿನ ಪಂದ್ಯಗಳಲ್ಲಿ ತಂಡ ಜಯಿಸಲು ಕಾರಣರಾಗಿದ್ದರು. ಹಾಗಾಗಿ ಈ ಪಂದ್ಯದಲ್ಲೂ ಅವರ ಮೇಲೆ ಹೆಚ್ಚಿನ ನಿರೀಕ್ಷೆ ಇದೆ.

‘ಟೂರ್ನಿ ಆರಂಭದಿಂದಲೂ ನಿರೀಕ್ಷೆಯ ಭಾರ ಹೊತ್ತಿಕೊಂಡಿರುವ ಗ್ರಿಜ್‌ಮನ್‌ ಅವರು ಇನ್ನೂ ಹೆಚ್ಚಿನ ಸಾಮರ್ಥ್ಯ ತೋರಬೇಕಿದೆ. ಅವರು ತಂಡದ ತಾರಾ ಆಟಗಾರರಲ್ಲಿ ಒಬ್ಬರು. ಎಂತಹ ಒತ್ತಡದ ಸಮಯದಲ್ಲೂ ತಂಡದ ಗೆಲುವಿಗೆ ಶ್ರಮಿಸುವ ಅವರು ಇನ್ನೂ ಹೆಚ್ಚಿನ ಮೋಡಿ ಮಾಡುವ ನಿರೀಕ್ಷೆ ಇದೆ’ ಎಂದು ತಂಡದ ಒಲಿವಿಯರ್‌ ಗಿರೌದ್‌ ಹೇಳಿದ್ದಾರೆ. 

ದಿದಿಯರ್‌ ದೇಶ್ಯಾಂಪ್ಸ್‌ ಮಾರ್ಗದರ್ಶನದ ಫ್ರಾನ್ಸ್‌ ತಂಡವು ಈ ಪಂದ್ಯದಲ್ಲಿ 4–3–3ರ ರಣನೀತಿಯೊಂದಿಗೆ ಅಂಗಳಕ್ಕಿಳಿಯುವ ಸಾಧ್ಯತೆ ಹೆಚ್ಚಿದೆ. 

ಪಕ್ಕೆಲುಬು ಗಾಯಕ್ಕೊಳಗಾಗಿರುವ ಡೆನ್ಮಾರ್ಕ್‌ ತಂಡದ ಪ್ರಮುಖ ಆಟಗಾರ ವಿಲಿಯಮ್‌ ಕ್ವಿಸ್ಟ್‌ ಅವರು ಈ ಪಂದ್ಯದಲ್ಲಿ ಆಡುವುದು ಅನುಮಾನ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !