7
ಐದು ದಶಕಗಳ ನಂತರ ಕ್ವಾರ್ಟರ್‌ ಫೈನಲ್‌ ಪ್ರವೇಶಿಸುವ ಭರವಸೆಯಲ್ಲಿ ಸ್ಟೀಫನ್‌ ಬಳಗ

ಸ್ವಿಟ್ಜರ್ಲೆಂಡ್‌–ಸ್ವೀಡನ್‌ಗೆ ಜಯದ ಕನಸು

Published:
Updated:

ಸೇಂಟ್‌ ಪೀಟರ್ಸ್‌ಬರ್ಗ್: ದಶಕಗಳ ನಂತರ ವಿಶ್ವಕಪ್ ಟೂರ್ನಿಯ ಕ್ವಾರ್ಟರ್ ಫೈನಲ್‌ ಹಂತಕ್ಕೇರುವ ಕನಸು ಹೊತ್ತು ಸ್ವೀಡನ್ ಮತ್ತು ಸ್ವಿಟ್ಜರ್ಲೆಂಡ್ ತಂಡಗಳು ಮಂಗಳವಾರ ಸೇಂಟ್ ಪೀಟರ್ಸ್‌ಬರ್ಗ್‌ ಅಂಗಣಕ್ಕೆ ಇಳಿಯಲಿವೆ.

1994ಲ್ಲಿ ಕಂಚಿನ ಪದಕ ಗೆದ್ದ ನಂತರ ಇಲ್ಲಿಯ ವರೆಗೆ ಸ್ವೀಡನ್ ತಂಡ ವಿಶ್ವಕಪ್‌ನ ಎಂಟರ ಘಟ್ಟ ಪ್ರವೇಶಿಸಲಿಲ್ಲ. 1954ರ ನಂತರ ಸ್ವಿಟ್ಜರ್ಲೆಂಡ್ ಕೂಡ ಕ್ವಾರ್ಟರ್‌ ಫೈನಲ್‌ ಪಂದ್ಯದಲ್ಲಿ ಆಡಲಿಲ್ಲ. ಎರಡೂ ತಂಡಗಳಿಗೆ ಈಗ ಉತ್ತಮ ಅವಕಾಶ ಲಭಿಸಿದೆ. ಇದನ್ನು ಸದುಪಯೋಗಪಡಿಸಿಕೊಂಡು ಮುಂದೆ ನುಗ್ಗಲು ಈ ತಂಡಗಳು ಶ್ರಮಿಸಲಿವೆ.

ಟೂರ್ನಿಯಲ್ಲಿ ಈ ವರೆಗೆ ಉಭಯ ತಂಡಗಳು ಉತ್ತಮ ಸಾಮರ್ಥ್ಯ ತೋರಿವೆ. ಗುಂಪು ಹಂತದ ಮೊದಲ ಪಂದ್ಯದಲ್ಲಿ ಬ್ರೆಜಿಲ್ ಜೊತೆ ಡ್ರಾ ಸಾಧಿಸಿದ್ದ ಸ್ವಿಟ್ಜರ್ಲೆಂಡ್‌ ನಂತರ ಸರ್ಬಿಯಾವನ್ನು 2–1ರಿಂದ ಮಣಿಸಿತ್ತು. ಕೊನೆಯ ಪಂದ್ಯದಲ್ಲಿ ಕೋಸ್ಟರಿಕಾ ಜೊತೆ ಡ್ರಾ ಮಾಡಿಕೊಂಡಿತ್ತು.

ಸ್ವೀಡನ್‌, ಮೊದಲ ಪಂದ್ಯದಲ್ಲಿ ದಕ್ಷಿಣ ಕೊರಿಯಾವನ್ನು 0–1ರಿಂದ ಮಣಿಸಿತ್ತು. ನಂತರ ಜರ್ಮನಿಗೆ 1–2ರಿಂದ ಮಣಿದ ತಂಡ ಮೆಕ್ಸಿಕೊ ಎದುರು 3–0ಯಿಂದ ಆಧಿಪತ್ಯ ಸ್ಥಾಪಿಸಿತ್ತು.

ಈ ಸಾಧನೆಗಳು ಎರಡೂ ತಂಡ ಗಳಲ್ಲಿ ಭರವಸೆ ತುಂಬಿವೆ. ಆದ್ದರಿಂದ ಜಿದ್ದಾಜಿದ್ದಿನ ಹಣಾಹಣಿಗೆ ಪಂದ್ಯ ಸಾಕ್ಷಿಯಾಗುವ ನಿರೀಕ್ಷೆಯಲ್ಲಿದ್ದಾರೆ ಫುಟ್‌ಬಾಲ್ ಪ್ರಿಯರು. ಫಿಫಾ ರ‍್ಯಾಂಕಿಂಗ್‌ನಲ್ಲಿ ಸ್ವಿಟ್ಜರ್ಲೆಂಡ್‌ಗಿಂತ ಕೆಳಗಿದ್ದರೂ ಯವುದೇ ಕ್ಷಣದಲ್ಲಿ ಪುಟಿದೇಳುವ ಶಕ್ತಿ ಸ್ವೀಡನ್‌ ತಂಡಕ್ಕೆ ಇದೆ. ತಂಡದ ರಕ್ಷಣಾ ವಿಭಾಗ ಬಲಿಷ್ಠವಾಗಿದ್ದು ಎದುರಾಳಿಗಳ ಮುನ್ನಡೆ ಯನ್ನು ತಡೆಯಲು ಸಮರ್ಥರಾಗಿದ್ದಾರೆ.

ಮೆಕ್ಸಿಕೊ ಎದುರು ಮೂರು ಗೋಲುಗಳನ್ನು ಗಳಿಸಿರುವ ತಂಡದ ಆಕ್ರಮಣ ವಿಭಾಗವೂ ಸ್ವಿಟ್ಜರ್ಲೆಂಡ್‌ಗೆ ಸವಾಲೊಡ್ಡುವ ಸಾಧ್ಯತೆ ಇದೆ. ಆರಂಭದಲ್ಲಿ ನೀರಸವಾಗಿ ಆಡಿ ನಂತರ ಪಂದ್ಯದ ಮೇಲೆ ಹಿಡಿತ ಸಾಧಿಸುವ ಸ್ವಿಟ್ಜರ್ಲೆಂಡ್‌ ಪ್ರೀ ಕ್ವಾರ್ಟರ್‌ ಫೈನಲ್‌ನಲ್ಲಿ ಯಾವ ತಂತ್ರಕ್ಕೆ ಮೊರೆ ಹೋಗುತ್ತದೆ ಎಂಬುದನ್ನು ಕಾದುನೋಡಬೇಕು. ವಿವಿಧ ಟೂರ್ನಿಗಳಲ್ಲಿ 29 ಬಾರಿ ಮುಖಾಮುಖಿಯಾದಾಗ ಸ್ವಿಟ್ಜರ್ಲೆಂಡ್‌ 11 ಬಾರಿ ಗೆದ್ದಿದ್ದು 10 ಪಂದ್ಯಗಳಲ್ಲಿ ಸ್ವೀಡನ್‌ ಜಯ ಗಳಿಸಿದೆ.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !