ಬೆಂಗಳೂರು: ಅಮೋಘ ಪ್ರದರ್ಶನ ಮುಂದುವರಿಸಿದ ಯಂಗ್ ಬ್ಲ್ಯೂಸ್ ಎಲೀಟ್ ಎಫ್ಸಿ ತಂಡವು ಭಾನುವಾರ ನಡೆದ ಕೆಎಸ್ಎಫ್ಎ ಮಹಿಳಾ ಎ ಡಿವಿಷನ್ ಲೀಗ್ ಫುಟ್ಬಾಲ್ ಚಾಂಪಿಯನ್ಷಿಪ್ನ ತನ್ನ ಕೊನೆಯ ಪಂದ್ಯದಲ್ಲಿ 5–0ಯಿಂದ ಟೆಕ್ನಿಕೊ ಫುಟ್ಬಾಲ್ ಫೌಂಡೇಶನ್ ತಂಡವನ್ನು ಮಣಿಸಿತು. ಆ ಮೂಲಕ, ಅಂಕಪಟ್ಟಿಯಲ್ಲಿ ಅಗ್ರಸ್ಥಾನದೊಂದಿಗೆ ಚಾಂಪಿಯನ್ ಆಗಿ ಹೊರಹೊಮ್ಮಿತು.

ಬೆಂಗಳೂರು ಫುಟ್ಬಾಲ್ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಯಂಗ್ ಬ್ಲ್ಯೂಸ್ ತಂಡದ ಶ್ರಾವ್ಯ ಮನೋಜ್ (6ನೇ ಹಾಗೂ 31ನೇ ನಿ.) ಅವಳಿ ಗೋಲು ಹೊಡೆದರು. ನಿಲವೊಲಿ ಸೇತುರಾಯರ್ (4ನೇ ನಿ.), ಲಕ್ಷಿತಾ ವಿನಯ್ ನಾಯರ್ (34ನೇ ನಿ.) ಹಾಗೂ ಧನುಶ್ರೀ ಎ.ಸಿ. (70ನೇ ನಿ.) ತಲಾ ಒಂದು ಗೋಲು ದಾಖಲಿಸಿ, ತಮ್ಮ ತಂಡಕ್ಕೆ ಏಕಪಕ್ಷೀಯ ಗೆಲುವು ತಂದುಕೊಟ್ಟರು. ಟೆಕ್ನಿಕೊ ತಂಡದ ಆಟಗಾರ್ತಿಯರು ಗೋಲು ಗಳಿಸುವಲ್ಲಿ ವಿಫಲರಾದರು.

ದಿನದ ಇತರ ಪಂದ್ಯಗಳಲ್ಲಿ ಕೆಂಪ್ ಜೂನಿಯರ್ಸ್ ಎಫ್ಸಿ ತಂಡವು 2–0ಯಿಂದ ಸ್ಪೋರ್ಟಿಂಗ್ ಕ್ಲಬ್ ಬೆಂಗಳೂರು ವಿರುದ್ಧ ಹಾಗೂ ರೆಡ್ಸ್ ಯುನೈಟೆಡ್ ಎಫ್ಸಿ ತಂಡವು 3–0ಯಿಂದ ಪಾಸ್ ಎಫ್ಸಿ ಸ್ಪಾರ್ಕ್ಸ್ ತಂಡದ ವಿರುದ್ಧ ಸುಲಭ ಜಯ ಸಾಧಿಸಿದವು.

ಚಾಂಪಿಯನ್ ಯಂಗ್ಬ್ಲ್ಯೂಸ್ ಹಾಗೂ ಅಂಕಪಟ್ಟಿಯಲ್ಲಿ ಎರಡನೇ ಸ್ಥಾನದೊಂದಿಗೆ ರನ್ನರ್ಸ್ಅಪ್ ಪ್ರಶಸ್ತಿ ಜಯಿಸಿದ ಪರಿಕ್ರಮ ಎಫ್ಸಿ ತಂಡಗಳು 2026–27ನೇ ಸಾಲಿನ ಕರ್ನಾಟಕ ಮಹಿಳಾ ಫುಟ್ಬಾಲ್ ಲೀಗ್ಗೆ ಅರ್ಹತೆ ಪಡೆದುಕೊಂಡವು. ಅಂಕಪಟ್ಟಿಯಲ್ಲಿ ಕೊನೆಯ ಎರಡು ಸ್ಥಾನದಲ್ಲಿದ್ದ ಜಿಆರ್ಕೆ ಗರ್ಲ್ಸ್ ಎಫ್ಸಿ ಹಾಗೂ ಆಫ್ಸೈಡ್ ಟ್ರ್ಯಾಪ್ ಎಫ್ಸಿ ತಂಡಗಳು ಬಿ ಡಿವಿಷನ್ ಲೀಗ್ಗೆ ಹಿಂಬಡ್ತಿ ಪಡೆದವು.

ಉತ್ತಮ ಗೋಲ್ಕೀಪರ್: ಕೆತಕಿ ಪರಾಗ್ ಗುಲ್ಹನೆ (ಯಂಗ್ ಬ್ಲ್ಯೂಸ್ ಎಫ್ಸಿ); ಉತ್ತಮ ಡಿಫೆಂಡರ್: ಜುದಿತ್ ಸೋನಾಲಿ ಜಾನ್ (ಪರಿಕ್ರಮ ಎಫ್ಸಿ); ಉತ್ತಮ ಮಿಡ್ಫೀಲ್ಡರ್: ನಿಲವೊಲಿ ಸೇತುರಾಯರ್ (ಯಂಗ್ ಬ್ಲ್ಯೂಸ್ ಎಫ್ಸಿ). ಗರಿಷ್ಠ ಗೋಲು: ಆರತಿ ಎಂ. (9 ಗೋಲು; ಪರಿಕ್ರಮ ಎಫ್ಸಿ).

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.