ಶುಕ್ರವಾರ, ಅಕ್ಟೋಬರ್ 18, 2019
24 °C

ಇಂಡಿಯನ್ ಓಪನ್‌ ಗಾಲ್ಫ್‌: ಶುಭಂಕರ್ ಸಾಧನೆ

Published:
Updated:
Prajavani

ಗುರುಗಾಂವ್‌: ಭಾರತದ ಶುಭಂಕರ್‌ ಶರ್ಮಾ ಇಲ್ಲಿ ಗುರುವಾರ ಆರಂಭಗೊಂಡ ಇಂಡಿಯನ್ ಓಪನ್‌ ಗಾಲ್ಫ್ ಟೂರ್ನಿಯಲ್ಲಿ ಉತ್ತಮ ಸಾಧನೆ ಮಾಡಿದ್ದು ಜಂಟಿ ಏಳನೇ ಸ್ಥಾನ ಗಳಿಸಿದ್ದಾರೆ.

ಮೊದಲ ಸುತ್ತಿನ ಅಗ್ರಸ್ಥಾನ ಗಳಿಸಿದ ಸ್ಫೀಫನ್ ಗಲಾಚರ್‌ ಅವರೊಂದಿಗೆ ಒಂದು ಹಂತದಲ್ಲಿ ಸಮಬಲ ಸಾಧಿಸಿದ್ದ ಶರ್ಮಾ ಇದೇ ಲಯವನ್ನು ಕೊನೆಯವರೆಗೆ ಉಳಿಸಿಕೊಳ್ಳುವ ಭರವಸೆ ಮೂಡಿಸಿದ್ದರು. ಆದರೆ ಅಂತಿಮವಾಗಿ ಏಳನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡರು.

ಮೊದಲ ಸುತ್ತಿನಲ್ಲಿ ಗಲಾಚರ್ ಜೊತೆ ಜೂಲಿಯನ್ ಸೂರಿ ಅಗ್ರ ಸ್ಥಾನವನ್ನು ಹಂಚಿಕೊಂಡಿದ್ದಾರೆ.

ಭಾರತದ ರಾಹಿಲ್ ಗಂಗ್ಜಿ 16ನೇ ಸ್ಥಾನ, ಓಂ ಪ್ರಕಾಶ್‌ ಚೌಹಾಣ್ 28ನೇ ಸ್ಥಾನ, ಗಗನ್‌ಜೀತ್ ಭುಲ್ಲರ್‌ ಮತ್ತು ರಶೀದ್ ಖಾನ್‌ 46ನೇ ಸ್ಥಾನ, ಎಸ್‌ಎಸ್‌ಪಿ ಚೌರಾಸಿಯಾ ಮತ್ತು ಶಿವ ಕಪೂರ್‌ 76ನೇ ಸ್ಥಾನ, ಅನಿರ್ಬನ್ ಲಾಹಿರಿ 107ನೇ ಸ್ಥಾನದಲ್ಲಿದ್ದಾರೆ.

Post Comments (+)