ಭಾರತಕ್ಕೆ ಜಯದ ಭರವಸೆ

ಮಂಗಳವಾರ, ಏಪ್ರಿಲ್ 23, 2019
32 °C
ಮಲೇಷ್ಯಾ ಎದುರು ಐದು ಪಂದ್ಯಗಳ ಮಹಿಳಾ ಹಾಕಿ ಸರಣಿಗೆ ಇಂದು ಚಾಲನೆ

ಭಾರತಕ್ಕೆ ಜಯದ ಭರವಸೆ

Published:
Updated:
Prajavani

ಕ್ವಾಲಾಲಂಪುರ: ಉತ್ತಮ ಲಯದಲ್ಲಿರುವ ಭಾರತ ಮಹಿಳೆಯರ ಹಾಕಿ ತಂಡದವರು ಮಲೇಷ್ಯಾ ಎದುರಿನ ಐದು ಪಂದ್ಯಗಳ ಸರಣಿಯನ್ನು ಗೆಲ್ಲುವ ಭರವಸೆಯಲ್ಲಿದ್ದಾರೆ. ಗೋಲ್‌ ಕೀಪರ್ ಸವಿತಾ ನೇತೃತ್ವದ ತಂಡ ಸರಣಿಯ ಮೊದಲ ಪಂದ್ಯವನ್ನು ಗುರುವಾರ ಆಡಲಿದೆ.

ವರ್ಷದ ಆರಂಭದಲ್ಲಿ ಸ್ಪೇನ್‌ನಲ್ಲಿ ನಡೆದ ಸರಣಿಯಲ್ಲಿ ಭಾರತದ ಮಹಿಳೆಯರು ಉತ್ತಮ ಸಾಮರ್ಥ್ಯ ಮೆರೆದಿದ್ದರು. ಕಳೆದ ವರ್ಷದ ವಿಶ್ವಕಪ್‌ ಟೂರ್ನಿಯಲ್ಲಿ ಕಂಚಿನ ಪದಕ ಗೆದ್ದಿರುವ ಸ್ಪೇನ್‌ ವಿರುದ್ಧ ನಾಲ್ಕು ಪಂದ್ಯಗಳ ಸರಣಿ ನಡೆದಿತ್ತು. ಮೊದಲ ಪಂದ್ಯಲ್ಲಿ 5–2ರಿಂದ ಗೆದ್ದಿದ್ದ ಭಾರತ ನಂತರ 1–1, 2–2ರಿಂದ ಡ್ರಾ ಸಾಧಿಸಿತ್ತು. ಕೊನೆಗೆ 2–3ರಿಂದ ಸೋತಿತ್ತು.

ಈ ಸರಣಿಯ ನಂತರ ವಿಶ್ವಕಪ್‌ನ ರನ್ನರ್‌ ಅಪ್‌ ಐರ್ಲೆಂಡ್‌ ಎದುರು ಎರಡು ಪಂದ್ಯಗಳ ಸರಣಿಯಲ್ಲಿ 1–1ರಿಂದ ಡ್ರಾ ಮತ್ತು 3–0ಯಿಂದ ಗೆಲುವು ಸಾಧಿಸಿತ್ತು. ಭಾರತವು 2017ರ ಏಷ್ಯಾ ಕಪ್‌ ಟೂರ್ನಿಯಲ್ಲಿ ಕೊನೆಯದಾಗಿ ಮಲೇಷ್ಯಾ ವಿರುದ್ಧ ಆಡಿತ್ತು. ಆಗ ಭಾರತ 2–0 ಗೋಲುಗಳಿಂದ ಗೆದ್ದಿತ್ತು. ಹೀಗಾಗಿ ಆ ತಂಡದ ಸಾಮರ್ಥ್ಯ ಮತ್ತು ದೌರ್ಬಲ್ಯಗಳ ಬಗ್ಗೆ ಸವಿತಾ ಬಳಗಕ್ಕೆ ಚೆನ್ನಾಗಿ ಗೊತ್ತು.

‘ಯಾವುದೇ ದೇಶದ ವಿರುದ್ಧ ಯಾವುದೇ ಪಂದ್ಯದಲ್ಲಿ ಸುಲಭವಾಗಿ ಗೆಲ್ಲಲು ಸಾಧ್ಯವಿಲ್ಲ. ಸತತ ಪ್ರಯತ್ನಪಟ್ಟು ಆಟಗಾರರು ಜವಾಬ್ದಾರಿಯನ್ನು ನಿಭಾಯಿಸಿದರೆ ಜಯ ಗಳಿಸಲು ಸಾಧ್ಯ’ ಎಂದು ಕೋಚ್‌ ಶೊರ್ಡ್ ಮ್ಯಾರಿಜ್ ಹೇಳಿದರು.

*

ಮಲೇಷ್ಯಾ ತನ್ನ ಸಾಮರ್ಥ್ಯವನ್ನು ಏಷ್ಯನ್ ಗೇಮ್ಸ್‌ನಲ್ಲಿ ಸಾಬೀತು ಮಾಡಿದೆ. ಅದನ್ನು ಅರಿತು ನಮ್ಮ ಆಟಗಾರ್ತಿಯರು ಆಡಬೇಕಾಗಿದೆ.
-ಶೊರ್ಡ್ ಮ್ಯಾರಿಜ್, ಭಾರತದ ಕೋಚ್‌

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !