ಶುಕ್ರವಾರ, ಅಕ್ಟೋಬರ್ 18, 2019
24 °C

ಮಕ್ಕಳ ಕ್ರೀಡಾಕೂಟ: ಬೆಂಗಳೂರು ಚಾಂಪಿಯನ್‌

Published:
Updated:
Deccan Herald

ಬೆಂಗಳೂರು: ಮಕ್ಕಳ ಕ್ರೀಡಾ ಪ್ರತಿಭೆ ಗುರುತಿಸಲು ಎಚ್‌ಸಿಎಲ್ ಫೌಂಡೇಷನ್‌ ಆಯೋಜಿಸಿದ್ದ ಕ್ರೀಡಾಕೂಟದ ಸಮಗ್ರ ಪ್ರಶಸ್ತಿ ಬೆಂಗಳೂರು ತಂಡದ ಪಾಲಾಯಿತು. ನಗರದ ಕಂಠೀರವ ಕ್ರೀಡಾಂಗಣದಲ್ಲಿ ಶನಿವಾರ ಮುಕ್ತಾಯಗೊಂಡ ಎರಡು ದಿನಗಳ ಕೂಟದಲ್ಲಿ ಚೆನ್ನೈ ತಂಡ ರನ್ನರ್ ಅಪ್ ಆಯಿತು. ಮಧುರೈ ತೃತೀಯ ಸ್ಥಾನ ಗಳಿಸಿತು.

ಬದಲಾವಣೆಗಾಗಿ ಕ್ರೀಡೆ ಎಂಬ ಧ್ಯೇಯವಾಕ್ಯದೊಂದಿಗೆ ನಡೆದ ಕೂಟದಲ್ಲಿ ಬೆಂಗಳೂರು, ಚೆನ್ನೈ, ಮಧುರೈ ಮತ್ತು ಹೈದರಾಬಾದ್‌ನ 500ಕ್ಕೂ ಹೆಚ್ಚು ಮಕ್ಕಳು ಪಾಲ್ಗೊಂಡಿದ್ದರು. ಇಲ್ಲಿ ಗೆದ್ದವರನ್ನು ರಾಷ್ಟ್ರಮಟ್ಟದ ಕೂಟಕ್ಕೆ ಆಯ್ಕೆ ಮಾಡಲಾಗುವುದು ಎಂದು ಪ್ರಕಟಣೆ ತಿಳಿಸಿದೆ.

100 ಮೀಟರ್ಸ್‌, 400 ಮೀಟರ್ಸ್‌, 1500 ಮೀಟರ್ಸ್ ಓಟ, 4x100 ಮೀಟರ್ಸ್‌ ರಿಲೇ, ಲಾಂಗ್‌ ಜಂಪ್‌, ಕಬಡ್ಡಿ, ಫುಟ್‌ಬಾಲ್‌, ವಾಲಿಬಾಲ್‌, ಬ್ಯಾಡ್ಮಿಂಟನ್‌, ಚೆಸ್‌ ಮತ್ತು ಕೇರಂ ಸ್ಪರ್ಧೆಗಳು ನಡೆದವು.

ಶುಕ್ರವಾರ ನಡೆದ ಉದ್ಘಾಟನಾ ಸಮಾರಂಭದಲ್ಲಿ ಅಂತರರಾಷ್ಟ್ರೀಯ ಕಬಡ್ಡಿ ಪಟು ಉಷಾ ರಾಣಿ, ಎಚ್‌ಸಿಎಲ್‌ ಕಾರ್ಯನಿರ್ವಾಹಕ ಉಪಾಧ್ಯಕ್ಷ ವಿಜಯ ಮಲ್ಯ ಹಾಗೂ ನಿರ್ದೇಶಕಿ ನಿಧಿ ಪುಂಧಿರ್‌ ಪಾಲ್ಗೊಂಡಿದ್ದರು.

Post Comments (+)