ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೋಲ್ಯಾಂಡ್‌ ಗ್ಯಾರೋಸ್‌ಗೆ ಹೊಸ ರೂಪ

ಹಸಿರುಮನೆ ಪರಿಣಾಮ: ಫ್ರೆಂಚ್‌ ಓಪನ್‌ ಟೂರ್ನಿಗೆ ನವ ಕಳೆ
Last Updated 24 ಮೇ 2019, 18:22 IST
ಅಕ್ಷರ ಗಾತ್ರ

ಪ್ಯಾರಿಸ್‌: ಈ ಬಾರಿಯ ಫ್ರೆಂಚ್‌ ಓಪನ್‌ ಟೂರ್ನಿಗೆ ಹೊಸ ಕಳೆ ಬಂದಿದೆ. ಪರಿಸರಸ್ನೇಹಿ ಕ್ರಮಗಳನ್ನು ಇಲ್ಲಿ ಜಾರಿಗೊಳಿಸಲಾಗಿದೆ.

ಫ್ರೆಂಚ್‌ ಓಪನ್‌ ಟೂರ್ನಿ ನಡೆಯುವ ಫಿಲಿಪ್‌ ಚಾರ್ಟಿಯರ್‌ ಅಂಗಣವನ್ನು 2018ರ ಟೂರ್ನಿ ಮುಗಿದ ಬಳಿಕ ಸಂಪೂರ್ಣವಾಗಿ ನೆಲಸಮ ಮಾಡಲಾ ಗಿತ್ತು. ಕ ಒಂದು ವರ್ಷದಲ್ಲಿ ವೇಗವಾಗಿ ನಿರ್ಮಿಸಲಾಯಿತು.

‘ಈ ಬಾರಿಯ ಐಫೆಲ್‌ ಗೋಪುರದ ಅರ್ಧಭಾಗವನ್ನು ಸುಮಾರು 3,700 ಟನ್‌ ಲೋಹದ ಸುಂದರ ರಚನೆಗಳಿಂದ ಅಲಂಕರಿಸಲಾಗಿದೆ’ ಎಂದು ಫ್ರೆಂಚ್‌ ಓಪನ್‌ ಟೆನಿಸ್‌ ಫೆಡರೇಷನ್‌ ಮಹಾ ನಿರ್ದೇಶಕ ಜೀನ್‌ ಫ್ರಾಂಕೋಯಿಸ್‌ ವಿಲೊಟ್‌ ಹೇಳಿದ್ದಾರೆ.

ಇತರ ಗ್ರ್ಯಾನ್‌ಸ್ಲಾಮ್‌ ಟೂರ್ನಿ ಗಳಂತೆ ರೋಲ್ಯಾಂಡ್‌ ಗ್ಯಾರೋಸ್‌ನಲ್ಲಿ ರಾತ್ರಿಯೂ ಪಂದ್ಯಗಳನ್ನು ನಡೆಸಲು ಅವಕಾಶವಿದೆ. 15 ಸಾವಿರ ಪ್ರೇಕ್ಷಕರ ಸಾಮರ್ಥ್ಯದ ಚಾರ್ಟಿಯರ್‌ ಅಂಗಣ ವನ್ನು ಪುನರುಜ್ಜೀವನಗೊಳಿಸಲಾಗಿದೆ. ಹಳೆಯ ಹಸಿರು ಪ್ಲಾಸ್ಟಿಕ್‌ ಬದಲಾಗಿ ಮರದ ಶೀಟ್‌ಗಳನ್ನು ಇದಕ್ಕೆ ಜೋಡಿಸಲಾಗಿದೆ.

‘ಛಾವಣಿಗೆ ಕಾಂಕ್ರೀಟ್‌ ಸ್ಲ್ಯಾಬ್‌ ಹಾಕುವ ಮೂಲಕ ಅಂಗಣವನ್ನು ರಕ್ಷಿಸಲಾಗಿದೆ’ ಎಂದು ಕ್ರೀಡಾಂಗಣದ ಆಧುನೀಕರಣಯೋಜನೆಯ ಮುಖ್ಯಸ್ಥ ಗಿಲ್ಲೆಸ್‌ ಜೋರ್ಡನ್‌ ಹೇಳಿದ್ದಾರೆ. ಈ ಕಾರ್ಯಕ್ಕೆ 350 ಮಿಲಿಯನ್‌ ಯುರೋಸ್‌ ಖರ್ಚು ತಗುಲಿದೆ ಎಂದು ಅಂದಾಜಿಸಲಾಗಿದೆ.

ಈ ವರ್ಷದ ಟೂರ್ನಿಯ ಪಂದ್ಯಗಳು ‘ಸಿಮನ್‌ ಮ್ಯಾಥ್ಯು’ ಎಂಬ ಹೊಸ ಅಂಗಣದಲ್ಲಿಯೂ ನಡೆಯಲಿವೆ. ಐದು ಸಾವಿರ ಪ್ರೇಕ್ಷಕರ ಸಾಮರ್ಥ್ಯದ ಈ ಅಂಗಣಕ್ಕೆ ಎರಡನೇ ಮಹಾಯುದ್ಧದಲ್ಲಿ ಹೋರಾಡಿದ ಧೀರ ಹಾಗೂ ಫ್ರೆಂಚ್‌ ಓಪನ್‌ ಟೂರ್ನಿಯಲ್ಲಿ ಚಾಂಪಿಯನ್‌ ಆಗಿದ್ದ ವ್ಯಕ್ತಿಯ ಹೆಸರಿಡಲಾಗಿದೆ.

ಐದು ವರ್ಷಗಳ ಕಾನೂನು ವಿವಾದ ಗಳಿಂದ ಫ್ರೆಂಚ್‌ ಟೆನಿಸ್‌ ಒಕ್ಕೂಟವು ಯಶಸ್ವಿಯಾಗಿ ಹೊರಬಂದಿತ್ತು. ಹೂದೋಟಗಳನ್ನು ನಾಶಪಡಿಸಿ ಕ್ರೀಡಾಂಗಣಗಳನ್ನು ಅಭಿವೃದ್ಧಿಪಡಿಸುವ ಕಾರ್ಯಕ್ಕೆ ಪರಿಸರವಾದಿಗಳು ಹಾಗೂ ಸ್ಥಳೀಯ ನಿವಾಸಿಗಳು ಫೆಡರೇಷನ್‌ನೊಂದಿಗೆ ಕಾನೂನು ಹೋರಾಟ ನಡೆಸಿದ್ದರು.

ಈ ಕಾರಣಕ್ಕಾಗಿ ಟೂರ್ನಿಯನ್ನು ಪ್ಯಾರಿಸ್‌ ಬಿಟ್ಟು ಬೇರೆ ಡೆಗೆ ಸ್ಥಳಾಂತರಿಸುವ ನಿರ್ಣಯಕ್ಕೂ ಸಂಘಟಕರು ಬಂದಿದ್ದರು.

‘ಅಂತಿಮವಾಗಿ ಅಂಗಣದ ಸುತ್ತ ನಾಲ್ಕು ಹಸಿರುಮನೆ ಆವರಣಗಳನ್ನು ನಿರ್ಮಿಸುವುದರ ಜೊತೆಗೆ ಅಂಗಣವನ್ನು ಅಭಿವೃದ್ಧಿಪಡಿಸಲಾಯಿತು’ ಎಂದು ಸಂಘಟಕರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT