ನಿಕಿಗೆ ಶ್ರದ್ಧಾಂಜಲಿ ಸಲ್ಲಿಸಿದ ಫೆರಾರಿ–ಮರ್ಸಿಡಿಸ್

ಸೋಮವಾರ, ಜೂನ್ 17, 2019
31 °C

ನಿಕಿಗೆ ಶ್ರದ್ಧಾಂಜಲಿ ಸಲ್ಲಿಸಿದ ಫೆರಾರಿ–ಮರ್ಸಿಡಿಸ್

Published:
Updated:
Prajavani

ವಿಯೆನ್ನಾ: ಫೆರಾರಿ ಮತ್ತು ಮರ್ಸಿಡಿಸ್ ತಂಡಗಳು ತಮ್ಮ ವೈರತ್ವ ಮರೆತು ರೇಸ್ ದಿಗ್ಗಜ ನಿಕಿ ಆವುಡಾ ಅವರಿಗೆ ಶ್ರದ್ದಾಂಜಲಿ ಸಲ್ಲಿಸಲು ಸಿದ್ಧವಾಗಿವೆ.

ಸೋಮವಾರ  ಶ್ವಾಸಕೋಶದ ತೊಂದರೆಯಿಂದ ನಿಧನರಾದ ಫಾರ್ಮುಲಾ ಒನ್‌ ಚಾಲಕ ಆಸ್ಟ್ರಿಯಾದ ನಿಕಿ ಆವುಡಾ (70) ಅವರಿಗೆ ಇದೇ ವಾರಾಂತ್ಯದಲ್ಲಿ ನಡೆಯಲಿರುವ ಮೊನಾಕೊ ಗ್ರ್ಯಾನ್‌ಪ್ರೀ ರೇಸ್‌ನಲ್ಲಿ ಎರಡೂ ತಂಡಗಳು ಗೌರವ ಸಲ್ಲಿಸಲಿವೆ. ಅದಕ್ಕಾಗಿ ತಮ್ಮ ಕಾರುಗಳ ಮೇಲೆ ನಿಕಿ ಚಿತ್ರ ಹಾಕಿಕೊಂಡಿವೆ.

ನಿಕಿ ಮೂರು ಬಾರಿ ‘ಫಾರ್ಮುಲಾ ಒನ್‌ ಚಾಲಕರ’ ವಿಶ್ವ ಚಾಂಪಿಯನ್‌ಷಿಪ್‌ ಕಿರೀಟವನ್ನು ಮುಡಿಗೇರಿಸಿ ಕೊಂಡಿದ್ದರು. 1975 ಹಾಗೂ 1977ರಲ್ಲಿ ಫೆರಾರಿ ಹಾಗೂ 1984ರಲ್ಲಿ ಮೆಕ್‌ಲಾರೆನ್‌ ತಂಡದ ಪರವಾಗಿ ಅವರು ಸಾಧನೆ ಮಾಡಿದ್ದರು.

1976ರಲ್ಲಿ ಭೀಕರ ಅಪಘಾತಕ್ಕೆ ತುತ್ತಾದರೂ ಛಲ ಕಳೆದು ಕೊಂಡಿರಲಿಲ್ಲ. ಟ್ರ್ಯಾಕ್‌ನಲ್ಲಿನ ವಿಜಯಗಳಿಂದ ವಿಶ್ವದಾದ್ಯಂತ ಅಪಾರ ಅಭಿಮಾನಿಗಳನ್ನು ಸಂಪಾದಿಸಿದ್ದರು. ಎಂಟು ತಿಂಗಳ ಹಿಂದೆ ಅವರು ಶ್ವಾಸಕೋಶದ ಕಸಿ ಮಾಡಿಸಿ‌ಕೊಂಡಿದ್ದರು. ಬ್ರಿಟಿಷ್‌ ಚಾಲಕ ಲೂಯಿಸ್ ಹ್ಯಾಮಿಲ್ಟನ್‌ರನ್ನು ಯಶಸ್ಸಿನ ಹಾದಿಗೆ ತರುವಲ್ಲಿ ನಿಕಿ ಅವರ ಪಾತ್ರ ಪ್ರಮುಖವಾಗಿತ್ತು. 

 

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !