ಭಾನುವಾರ, 15 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಹಾಕಿ: ಡಿವೈಇಎಸ್‌ ‘ಎ’, ‘ಬಿ’ ತಂಡಗಳಿಗೆ ಜಯ

Published : 2 ಆಗಸ್ಟ್ 2024, 23:50 IST
Last Updated : 2 ಆಗಸ್ಟ್ 2024, 23:50 IST
ಫಾಲೋ ಮಾಡಿ
Comments

ಬೆಂಗಳೂರು:ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ (ಡಿವೈಇಎಸ್‌) ‘ಬಿ’ ತಂಡವು ಎಂಟನೇ ಆವೃತ್ತಿಯ ಹಾಕಿ ಕರ್ನಾಟಕ ಲೀಗ್‌ ಚಾಂಪಿಯನ್‌ಷಿಪ್‌ನ ಪಂದ್ಯದಲ್ಲಿ6–1ರಿಂದ ಕರ್ನಾಟಕ ರಾಜ್ಯ ಪೊಲೀಸ್‌ (ಕೆಎಸ್‌ಪಿ) ತಂಡವನ್ನು ಸೋಲಿಸಿತು.

ಡಿವೈಇಎಸ್‌ ತಂಡದ ಮೌರ್ಯ ತಿಮ್ಮಯ್ಯ (4 ಮತ್ತು 6ನೇ ನಿ), ಪ್ರೇಮ್‌ ಕುಮಾರ್ (16 ಮತ್ತು 49ನೇ ನಿ), ಪ್ರಣಮ್‌ ಗೌಡ (25 ಮತ್ತು 41ನೇ ನಿ) ಅವರು ತಲಾ ಎರಡು ಗೋಲು ದಾಖಲಿಸಿದರು. ಕೆಎಸ್‌ಪಿ ತಂಡ ಮಣಿಕಂಠ ಬಿ. (9ನೇ ನಿ) ಏಕೈಕ ಗೋಲು ದಾಖಲಿಸಿದರು.

ದಿನದ ಮತ್ತೊಂದು ಪಂದ್ಯದಲ್ಲಿ ದೀಕ್ಷಿತ್‌ ಎ.ಎಚ್‌. (28, 42, ಮತ್ತು 49ನೇ ನಿ) ಅವರ ಹ್ಯಾಟ್ರಿಕ್‌ ಗೋಲಿನ ನೆರವಿನಿಂದ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ (ಡಿವೈಇಎಸ್‌) ‘ಎ’ ತಂಡವು 8–3 ಗೋಲುಗಳ ಅಂತರದಲ್ಲಿ ನೈಋತ್ಯ ರೈಲ್ವೆ ಹುಬ್ಬಳ್ಳಿ (ಎಸ್‌ಡಬ್ಲ್ಯುಆರ್‌ಎಚ್‌) ತಂಡವನ್ನು ಮಣಿಸಿತು.

ಡಿವೈಇಎಸ್‌ ‘ಎ’ ತಂಡದ ದೇಶ್‌ ಪೂವಯ್ಯ (4ನೇ ನಿ), ಭರತ್‌ ಎಂ.ಕೆ.(10ನೇ ನಿ), ಆಶಿಕ್‌ ಎನ್‌.ಆರ್‌. (29ನೇ ನಿ), ಆರ್ಯನ್‌ ಉತ್ತಪ್ಪ ಎಂ.ಟಿ. (33ನೇ ನಿ), ರಾಹುಲ್‌ ಸಿ.ಜೆ. (47ನೇ ನಿ) ತಲಾ ಒಂದು ಗೋಲು ದಾಖಲಿಸಿದರು. ರೈಲ್ವೆ ಪರ ವೀರಣ್ಣ ಜಿ.ಪಾಟೀಲ್‌  ಎರಡು (24 ಮತ್ತು 54ನೇ ನಿ), ಜಯವಂತ್‌ ಒಂದು (37ನೇ ನಿ) ಗೋಲು ಗಳಿಸಿದರು.

ನಾಳೆ ಡಿವೈಇಎಸ್‌ ಬಿ ವಿರುದ್ಧ ಕೆನರಾ ಬ್ಯಾಂಕ್‌, ಕಸ್ಟಮ್ಸ್‌ ಹಾಗೂ ಜಿಎಸ್‌ಟಿ ವಿರುದ್ಧ ಎಜಿಒಆರ್‌ಸಿ ಪಂದ್ಯವಾಡಲಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT