ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಾಲ್ಫ್‌ | ನಾಕೌಟ್‌ ಪ್ರವೇಶಿಸಲು ಅದಿತಿ ವಿಫಲ

Published 28 ಮೇ 2023, 13:28 IST
Last Updated 28 ಮೇ 2023, 13:28 IST
ಅಕ್ಷರ ಗಾತ್ರ

ಲಾಸ್‌ ವೆಗಾಸ್‌, ಅಮೆರಿಕ : ಭಾರತದ ಅದಿತಿ ಅಶೋಕ್‌ ಅವರು ಇಲ್ಲಿ ನಡೆಯುತ್ತಿರುವ ಬ್ಯಾಂಕ್‌ ಆಫ್‌ ಹೋಪ್ ಎಲ್‌ಪಿಜಿಎ ಮ್ಯಾಚ್‌ ಪ್ಲೇ ಗಾಲ್ಫ್‌ ಟೂರ್ನಿಯ ನಾಕೌಟ್‌ ಹಂತ ಪ್ರವೇಶಿಸುವ ಅವಕಾಶವನ್ನು ಅಲ್ಪದರಲ್ಲೇ ಕಳೆದುಕೊಂಡರು.

ಅದಿತಿ ಹಾಗೂ ಅಮೆರಿಕದ ಜೆನಿಫರ್‌ ಕುಪ್‌ಚೊ ನಡುವಣ ಶನಿವಾರ ನಡೆದ ಮೂರನೇ ಪಂದ್ಯ ‘ಟೈ’ನಲ್ಲಿ ಕೊನೆಗೊಂಡಿತು. ಈ ಪಂದ್ಯವನ್ನು ಗೆದ್ದಿದ್ದರೆ ಬೆಂಗಳೂರಿನ ಆಟಗಾರ್ತಿಗೆ ನಾಕೌಟ್‌ ಸ್ಥಾನಕ್ಕಾಗಿ ‘ಪ್ಲೇ ಆಫ್‌‘ನಲ್ಲಿ ಆಡುವ ಅವಕಾಶ ಲಭಿಸುತ್ತಿತ್ತು.

ಮೊದಲ ಪಂದ್ಯದಲ್ಲಿ ಪೆರೈನ್ ಡೆಲಾಕರ್‌ ಎದುರು ಸೋತಿದ್ದ ಅದಿತಿ, ಎರಡನೇ ಪಂದ್ಯದಲ್ಲಿ ಕರೋಲಿನ್‌ ಇಂಗ್ಲಿಸ್‌ ಅವರನ್ನು ಮಣಿಸಿದ್ದರು. ಅದಿತಿ ಮೂರನೇ ಪಂದ್ಯ ಗೆದ್ದಿದ್ದರೆ, ಡೆಲಾಕರ್‌ ವಿರುದ್ಧ‘ಪ್ಲೇ ಆಫ್‌’ ಆಡಬೇಕಿತ್ತು. ಅಲ್ಲಿ ಗೆಲುವು ಪಡೆದಿದ್ದರೆ 16ರ ಘಟ್ಟ ಪ್ರವೇಶಿಸುತ್ತಿದ್ದರು.

ಎರಡು ಗೆಲುವು ಪಡೆದ ಡೆಲಾಕರ್‌ ಅವರು ಗುಂಪಿನಲ್ಲಿ ಅಗ್ರಸ್ಥಾನ ಪಡೆದು ನಾಕೌಟ್‌ಗೆ ಪ್ರವೇಶಿಸಿದರು. ತಲಾ ಒಂದು ಗೆಲುವು, ಸೋಲು ಮತ್ತು ‘ಟೈ’ ಮೂಲಕ ಅದಿತಿ ಹಾಗೂ ಕುಪ್‌ಚೊ ಜಂಟಿ ಎರಡನೇ ಸ್ಥಾನ ಪಡೆದು ಟೂರ್ನಿಯಿಂದ ಹೊರಬಿದ್ದರು. ಒಂದು ಗೆಲುವು, ಎರಡು ಸೋಲಿನೊಂದಿಗೆ ಇಂಗ್ಲಿಸ್‌ ಕೂಡಾ ನಿರ್ಗಮಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT