ಬರ್ಮಿಂಗ್ಹ್ಯಾಮ್: ಭಾರತದ ಲಕ್ಷ್ಯ ಸೇನ್ ಅವರು ಆಲ್ ಇಂಗ್ಲೆಂಡ್ ಬ್ಯಾಡ್ಮಿಂಟನ್ ಚಾಂಪಿಯನ್ಷಿಪ್ನಲ್ಲಿ ಎರಡನೇ ಬಾರಿ ರನ್ನರ್ ಅಪ್ ಸ್ಥಾನದೊಂದಿಗೆ ಅಭಿಯಾನ ಮುಗಿಸಿದರು. ಭಾನುವಾರ ನಡೆದ ಫೈನಲ್ನಲ್ಲಿ ಸೇನ್ ಅವರನ್ನು ನೇರ ಗೇಮ್ಗಳಿಂದ ಸೋಲಿಸಿದ ತೈವಾನ್ನ ಲಿನ್ ಚುನ್ ಯಿ ಕಿರೀಟ ಗೆದ್ದರು.

2022ರ ನಂತರ ಎರಡನೇ ಬಾರಿ ಆಲ್ ಇಂಗ್ಲೆಂಡ್ ಕ್ಲಬ್ನಲ್ಲಿ ಫೈನಲ್ ಆಡಿದ ಅಲ್ಮೋರಾದ 24 ವರ್ಷದ ಸೇನ್ 15-21, 20-22ರಿಂದ ಸೋತರು. ಇದರೊಂದಿಗೆ 25 ವರ್ಷಗಳ ಬಳಿಕ ಪ್ರಶಸ್ತಿ ಗೆಲ್ಲುವ ಭಾರತದ ಕನಸು ಭಗ್ನಗೊಂಡಿತು.

ಬ್ಯಾಡ್ಮಿಂಟನ್ ದಂತಕಥೆ ಪ್ರಕಾಶ್ ಪಡುಕೋಣೆ (1980) ಮತ್ತು ಪುಲ್ಲೇಲ ಗೋಪಿಚಂದ್ (2001) ಹೊರತುಪಡಿಸಿ ಭಾರತದ ಷಟ್ಲರ್ಗಳಿಗೆ ಈ ಪ್ರತಿಷ್ಠಿತ ಪ್ರಶಸ್ತಿ ಒಲಿದಿಲ್ಲ. ಪ್ರಕಾಶ್ ನಾಥ್ (1947), ಸೈನಾ ನೆಹ್ವಾಲ್ (2015) ರನ್ನರ್ಸ್ ಅಪ್ ಸ್ಥಾನದೊಂದಿಗೆ ಪ್ರಶಸ್ತಿಗೆ ಹತ್ತಿರವಾಗಿದ್ದರು.

‘ನನ್ನ ಪ್ರಕಾರ ಫೈನಲ್ ಪಂದ್ಯ ಉತ್ತಮವಾಗಿತ್ತು. ಮೊದಲ ಗೇಮ್ನಲ್ಲಿ ತೈವಾನ್ ಆಟಗಾರ ಚೆನ್ನಾಗಿ ಆಡಿದರು. ಆದರೆ, ಎರಡನೇ ಗೇಮ್ ಅನ್ನು ನಾನು ಇನ್ನೂ ಚೆನ್ನಾಗಿ ಮುಗಿಸಬಹುದಿತ್ತು. ಒಟ್ಟಾರೆ ವಾರವಿಡೀ ನಾನು ಆಡಿದ ರೀತಿ ಸಮಾಧಾನ ತಂದಿದೆ’ ಎಂದು ಪಂದ್ಯದ ಬಳಿಕ ಲಕ್ಷ್ಯ ಪ್ರತಿಕ್ರಿಯಿಸಿದರು.

26 ವರ್ಷದ ಲಿನ್ ಚುನ್ ಅವರು ಆಲ್ ಇಂಗ್ಲೆಂಡ್ ಪುರುಷರ ಸಿಂಗಲ್ಸ್ ಪ್ರಶಸ್ತಿ ಗೆದ್ದ ತೈವಾನ್ನ ಮೊದಲ ಆಟಗಾರ ಎಂಬ ಹಿರಿಮೆಗೆ ಪಾತ್ರವಾದರು. ಅತಿವೇಗದ ರ್ಯಾಲಿಗಳು ಮತ್ತು ಆಕ್ರಮಣಕಾರಿ ಆಟಕ್ಕೆ ಸಾಕ್ಷಿಯಾಗಿದ್ದ ಈ ಪಂದ್ಯವನ್ನು ಅವರು 57 ನಿಮಿಷದಲ್ಲಿ ಗೆದ್ದುಕೊಂಡರು.

ವಿಶ್ವ ಕ್ರಮಾಂಕದಲ್ಲಿ 12ನೇ ಸ್ಥಾನದಲ್ಲಿರುವ ಸೇನ್ ಫೈನಲ್ ಪ್ರವೇಶಿಸುವ ಹಾದಿಯಲ್ಲಿ ಅಗ್ರ ಕ್ರಮಾಂಕದ ಶಿ ಯು ಕಿ (ಚೀನಾ), ಆರನೇ ರ್ಯಾಂಕ್ನ ಲೀ ಶಿಫೆಂಗ್ (ಚೀನಾ) ಅವರಿಗೆ ಆಘಾತ ನೀಡಿದ್ದರು.

ಎರಡೂ ತೊಡೆಗಳ ಮೇಲೆ ಸ್ಟ್ರಾಪಿಂಗ್ ಧರಿಸಿ ಅಂಕಣ ಪ್ರವೇಶಿಸಿದ ಸೇನ್ ನಿಧಾನಗತಿಯ ಆರಂಭ ಪಡೆದರು. ಆಕ್ರಮಣಕಾರಿ ಆಟಕ್ಕಿಳಿದ ಲಿನ್ 3–0 ಮುನ್ನಡೆ ಗಳಿಸಿದರು. ತೈವಾನ್ನ ಎಡಗೈ ಆಟಗಾಟ ನಿಖರವಾದ ಹೊಡೆತಗಳ ಮೂಲಕ ಮುನ್ನಡೆಯನ್ನು 6–2ಕ್ಕೆ ಹೆಚ್ಚಿಸಿದರು. ಭಾರತದ ಆಟಗಾರ ಲಯ ಕಂಡುಕೊಳ್ಳಲು ಪರದಾಡಿದರು. ಮೊದಲ ಗೇಮ್ನಲ್ಲಿ ಲಿಗ್ ಮೇಲುಗೈ ಸಾಧಿಸಿದರು.

ಎರಡನೇ ಗೇಮ್ನ ಆರಂಭದಲ್ಲಿ ಸಮಬಲದ ಹೋರಾಟ ಕಂಡುಬಂತು. ನಂತರದಲ್ಲಿ ಸೇನ್ 9–4 ಮುನ್ನಡೆ ಸಾಧಿಸಿದರು. ಆದರೆ, ಎದುರಾಳಿ ಆಟಗಾರ ಆಕರ್ಷಕ ಸ್ಮ್ಯಾಷ್ಗಳನ್ನು ಪ್ರಯೋಗಿಸಿ 14-14ರಲ್ಲಿ ಸಮಗೊಳಿಸಿದರು. ತೀವ್ರ ಪೈಪೋಟಿ ಕಂಡ ಈ ಗೇಮ್ ಅನ್ನೂ ತೈವಾನ್ನ ಆಟಗಾರ ಗೆದ್ದುಕೊಂಡರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.